Advertisement
ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಜಿದ್ದಾಜಿದ್ದಿನ ಕಣ ಈ ಕ್ಷೇತ್ರ. ಇದಕ್ಕೆ ಕಾರಣ ಕಾಂಗ್ರೆಸ್‌ನ ಹುರಿಯಾಳು ವಿನಯ್ ಕುಲಕರ್ಣಿ. ಕೈ ಪಕ್ಷವನ್ನು ಗಟ್ಟಿಯಾಗಿಸಿದ್ದು ವಿನಯ್. ಸ್ವಸ್ಥಾನ ಎನಿಸಿರುವ ಈ ಕ್ಷೇತ್ರದಲ್ಲೇ ಅವರು ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದನ್ನು ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಪಕ್ಷದ ಮುಖಂಡರು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ.
Related Articles
Advertisement
ವಿನಯ್‌ಗೆ ಅನುಕಂಪ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕ್ಷೇತ್ರ ಮತ್ತು ಧಾರವಾಡ ಜಿಲ್ಲೆಗೆ ಪ್ರವೇ ಶಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಬಂದು ಉಳಿದುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಮಾಡಿದ ಕೆಲಸ ಮತ್ತೂಮ್ಮೆ ಕ್ಷೇತ್ರದ ಮತ ದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತಿದ್ದಾರೆ.
ಜಿಲ್ಲಾ ಪ್ರವೇಶ ನಿಷೇಧಿಸಿದ್ದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಅನುಕಂಪದ ಅಲೆ ಶುರುವಾಗಿದ್ದು, ವಿನಯ್ ಮತ್ತೆ ಗೆಲ್ಲ ಬೇಕೆಂದು ಈಗಲೇ ಮನೆ ಮನೆ ಪ್ರಚಾರ ಶುರು ಮಾಡಿದ್ದಾರೆ. ಅದು ಅಲ್ಲದೇ ವಿನಯ್ ಪಂಚಮಸಾಲಿ ಸಮುದಾಯದ ಹುರಿಯಾಳು ಮಾತ್ರವಲ್ಲ, ಇತರಲಿಂಗಾಯತ ಒಳಪಂಗಡ ಗಳ ಜತೆಗೂ ಇಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾ ಗಿ ಬಿಜೆಪಿ ಅಲೆ ಎದ್ದರೆ ಮಾತ್ರ ದೇಸಾಯಿ ತೇಲಲು ಸಾಧ್ಯ ಎನ್ನುತ್ತಿದ್ದಾರೆ ಗ್ರಾಮೀಣ ಕ್ಷೇತ್ರದ ಜನ. ಹೀಗಾ ಗಿಯೇ ಕ್ಷೇತ್ರ ದಲ್ಲಿ ಯಾರಿಗೆ ಟಿಕೆಟ್? ಯಾರ ನಡುವೆ ಸ್ಪರ್ಧೆ ಎಂಬ ಕುತೂ ಹಲ ಏರ್ಪಟ್ಟಿದೆ.
ತಮಟೆ ಹೊಡೆದ ಇಸ್ಮಾಯಿಲ್ಈ ಕ್ಷೇತ್ರದಲ್ಲಿ ಕೈ ಮತ್ತು ಕಮಲ ಪಡೆ ಮಾತ್ರ ತೀವ್ರ ಸೆಣಸಾಟ ನಡೆಸುವುದು ಪಕ್ಕಾ. ಇಲ್ಲಿ ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಗಳ ಪ್ರಭಾವ ಅಷ್ಟಕ್ಕಷ್ಟೇ. ಸದ್ಯಕ್ಕೆ ಕಾಂಗ್ರೆಸ್‌ನಿಂದ ಇಸ್ಮಾಯಿಲ್ ತಮಟಗಾರ ಕೂಡ ಕಣಕ್ಕಿಳಿಯಲು ಸಜ್ಜಾಗಿದ್ದು, ಒಂದು ವೇಳೆ ಹೈಕಮಾಂಡ್ ಟಿಕೆಟ್ ನಿರಾಕರಿಸಿದರೆ ಜೆಡಿಎಸ್‌ನಿಂದ ಹುರಿಯಾಳಾಗುವ ಸಾಧ್ಯತೆ ಇದೆ. ಇತ್ತ ಬಿಜೆಪಿಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಹಾಗೂ ಸವಿತಾ ಅರಮಶೆಟ್ಟಿ ಹೆಸರು ಜೋರಾಗಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ಕೈ ಮತ್ತು ಕಮಲಕ್ಕೆ ಈ ಬಾರಿ ಬಂಡಾಯದ ಬಿಸಿ ತಟ್ಟುವುದಂತೂ ಪಕ್ಕಾ. -ಬಸವರಾಜ್ ಹೊಂಗಲ್