Advertisement

ವರ್ಚ್ಯುವಲ್ ವೇದಿಕೆಯಲ್ಲಿ ಜರುಗಿದ ಧಾರವಾಡ ಐಐಟಿ ಘಟಿಕೋತ್ಸವ

09:48 PM Sep 08, 2021 | Team Udayavani |

ಧಾರವಾಡ :ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಮೊದಲ ಹಾಗೂ ಎರಡನೇಯ ಘಟಿಕೋತ್ಸವ ಬುಧವಾರ ವರ್ಚ್ಯುವಲ್ ವೇದಿಕೆ ಮೂಲಕ ಜರುಗಿತು.

Advertisement

ವರ್ಚ್ಯುವಲ್ ವೇದಿಕೆ ಮೂಲಕವೇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಐಐಟಿ ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಸಜ್ಜುಗೊಳಿಸುವ ಮೊದಲ ಹೆಜ್ಜೆಯನ್ನು ಇರಿಸಿದೆ. ಸಂಸ್ಥೆಯಲ್ಲಿ ನೀಡಲಾದ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯು ಜಿವನದಲ್ಲಿ ಪರಿಣಾಮಕಾರಿಯಾಗಿ ಮತ್ತು ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸಿದೆ ಎಂದರು.

ಧಾರವಾಡ ಐಐಟಿ ನಿರ್ದೇಶಕ ಪ್ರೊ. ಪಿ. ಶೇಷು ಮಾತನಾಡಿ, ವಾಲ್ಮಿ ಸಂಸ್ಥೆಯ ಕಟ್ಟಡದಲ್ಲಿ ೨೦೧೬ರಲ್ಲಿ ಐಐಟಿ ಸಂಸ್ಥೆ ಆರಂಭಗೊಂಡಿದ್ದು, ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ವರ್ಷದಲ್ಲಿ ಇನ್ನಷ್ಟು ವಿವಿಧ ಪದವಿ ತರಗತಿಗಳನ್ನು ಆರಂಭಿಸಲಾಗುವುದು. ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನ ಆರಂಭಿಸಲು ಸಜ್ಜುಗೊಂಡಿದ್ದಾರೆ. ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಘಟಿಕೋತ್ಸವದಲ್ಲಿ ೨೦೧೬- ೨೦೨೦ನೇ ಸಾಲಿನ ಸಂಶೋಧನಾ ವಿದ್ಯಾರ್ಥಿ ಚಾರು ಅಗರವಾಲ್ ಹಾಗೂ ೨೦೧೭- ೨೦೨೧ನೇ ಸಾಲಿನ ಪ್ರತೀಕ್ ಜೈನ್ ಅವರಿಗೆ  ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.

ಧಾರವಾಡ ಐಐಟಿ ಚೇರ್ಮನ್ ವಿನಾಯಕ ಚಟರ್ಜಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next