Advertisement

ಇತಿಹಾಸ ಬದಲಿಸುತ್ತಿಲ್ಲ; ಮರೆತವರ ನೆನಪಿಸುತ್ತಿದ್ದೇವೆ: ಸಚಿವ ಧರ್ಮೇಂದ್ರ ಪ್ರಧಾನ್‌

08:28 PM Feb 13, 2023 | Team Udayavani |

ನವದೆಹಲಿ: ಭಾರತದ ಇತಿಹಾಸ ಬದಲಿಸುವ ಯಾವುದೇ ಕಾರ್ಯವನ್ನೂ ಭಾರತದ ಇತಿಹಾಸ ಸಂಶೋಧನಾ ಮಂಡಳಿ( (ಐಸಿಎಚ್‌ಆರ್‌)ಮಾಡುತ್ತಿಲ್ಲ, ಬದಲಿಗೆ ಇತಿಹಾಸದ ಪುಟಗಳಿಂದ ಹೊರಗುಳಿದಿರುವ ದೇಶದ ಪ್ರಮುಖರ, ಘಟನೆಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಸೇರಿಸಲಾಗುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

Advertisement

ಐಸಿಎಚ್‌ಆರ್‌ ಹೊಸ ಇತಿಹಾಸ ರಚನೆಯ ಪ್ರಸ್ತಾಪ ಹೊಂದಿದೆ ಎನ್ನುವ ಮಾತುಗಳು ಕೇಳಿಬಂದಿದ್ದ ಹಿನ್ನೆಲೆ ಲೋಕಸಭೆಯಲ್ಲಿ ಪ್ರಧಾನ್‌ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಭಾರತ ಎಲ್ಲಾ ಭಾಷೆ, ಎಲ್ಲ ಸಂಸ್ಕೃತಿ, ಎಲ್ಲ ನಂಬಿಕೆಗಳನ್ನು ಗೌರವಿಸುವ ದೇಶ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೇ, ನಾವು ಇತಿಹಾಸ ಬದಲಿಸುವ ಕೆಲಸವಲ್ಲ, ಇತಿಹಾಸ ಮರೆತರವರನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next