Advertisement

ಗ್ರಾಮಾಭಿವೃದ್ಧಿಯಲ್ಲಿ ಧರ್ಮಸ್ಥಳ ಸಂಸ್ಥೆ ಪಾತ್ರ ಪ್ರಮುಖ

09:50 PM Dec 15, 2019 | Lakshmi GovindaRaj |

ಹೊಳೆನರಸಿಪುರ: ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವಸಹಾಯಸಂಘ, ಸ್ವ ಉದ್ಯೋಗ ತರಬೇತಿ, ನಿರ್ಗತಿಕರಿಗೆ ಮಾಸಾಶನ ಮೊದಲಾದ ಯೋಜನೆಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ರೇವಣ್ಣ ಪ್ರಶಂಸಿಸಿದರು.

Advertisement

ತಾಲೂಕಿನ ಹಳೆಕೊಟೆ ಹೋಬಳಿ ಕಟ್ಟೇಬೆಳಗುಲಿ ಪಾಳ್ಯ ಗ್ರಾಮದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್‌ ಆಯೋಜಿಸಿದ್ದ ತಾಲೂಕು ಸಾಮೂಹಿಕ ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಮತ್ತು ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಭಿಪ್ರಾಯ ವಿನಿಮಯಕ್ಕೆ ಸಹಕಾರಿ: ಇಂದು ಹೋಬಳಿ ಮಟ್ಟದಲ್ಲಿ ಸಾಮೂಹಿಕವಾಗಿ ಇಂತಹ ಪೂಜೆ ಪುನಸ್ಕಾರವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ದೊಡ್ಡ ಮಟ್ಟದ ಕಾಯಕ್ರಮವನ್ನು ಆಗಿಂದಾಗ ಆಯೋಜಿಸಿದರೆ ಯಾವಾಗಲು ನನ್ನ ಸಹಮತ ಇದೆ. ಇಂತಹಾ ಕಾರ್ಯಕ್ರಮಗಳು ನಡೆಯುವುದರಿಂದ ಎಲ್ಲರೂ ಸಹ ಒಂದಡೆ ಸೇರಿ ಅಭಿಪ್ರಾಯಗಳ ವಿನಿಮಯಕ್ಕೆ ದಾರಿಯಾಗಿದೆ ಎಂದರು.

ಅಭಿವೃದ್ಧಿಗೆ ಸಹಕರಿಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯಾವ ಸರ್ಕಾರವೂ ಮಾಡದ ಕೆಲಸ ಕಾರ್ಯಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದೆ. ನಾವೆಲ್ಲರೂ ಇಂತಹ ಸಂಘ ಸಂಸ್ಥೆಗಳಿಗೆ ಕೈ ಜೋಡಿಸಬೇಕು. ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರದ ಧರ್ಮಾಧಿಕಾರಿಯಾಗಿ ಪೂಜಾ ಕೈಂಕರ್ಯಗಳನ್ನು ದೇವರು ಮೆಚ್ಚುವಂತೆ ನಿರ್ವಹಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಜನರು ಒಪ್ಪಿಕೊಳ್ಳುವಂತೆ ರೂಪಿಸಿರುವ ಡಾ.ವೀರೇಂದ್ರ ಹೆಗ್ಗಡೆಯವರ ಕಾರ್ಯಕ್ಷಮತೆಯನ್ನು ಶ್ಲಾಘನೀಯ ಎಂದರು.

ಕೋಪ ನಿಯಂತ್ರಿಸಿ: ಹಳ್ಳಿ ಮೈಸೂರು ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶಪಾಲ ಎಚ್‌.ಎಸ್‌. ಪ್ರಭುಶಂಕರ್‌ ಮಾತ‌ನಾಡಿ, ಶ್ರದ್ಧೆ, ಶುದ್ಧ ಮನಸ್ಸಿನಿಂದ ಸಲ್ಲಿಸುವ ಪೂಜೆ ಭಗವಂತನಿಗೆ ಸಲ್ಲುತ್ತದೆ. ಪೂಜೆ ಸಲ್ಲಸಿದರೂ ಇವರಿಗೆ ಸಲ್ಲುವುದುಯಾವಅಪೇಕ್ಷೆಇಲ್ಲದೆ ಮಾಡುವ ಸೇವೆಯೇದೇವರ ಕೆಲಸ. ಪ್ರತಿಯೊಬ್ಬರಲ್ಲಿ ಕರೆಯದೇ ಬರುವುದು ಕೋಪ. ಅದನ್ನು ನಾವು ನಿಯಂತ್ರಣ ಮಾಡದಿದ್ದರೆ ಮುಂದೊಂದು ದಿನ ಕಷ್ಟವಾಗುತ್ತದೆಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ಹೊಳೆನರಸೀಪುರ ತಾಲೂಕಿನ ತಾಲೂಕಿನ ಯೋಜನಾ ಕಾರಿ ಸುಮಿತ್ರಜೈನ್‌ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ಬಿ. ನಂಜಪ್ಪನವರು ವಹಿಸಿದ್ದರು.ಕಾರ್ಯಕ್ರಮದಲ್ಲಿತಾಲೂಕಿನಯೋಜನಾ ಕಾರಿ ಸುಮಿತ್ರಜೈನ್‌ ಪ್ರಸ್ತಾವಿಕವಾಗಿ ಮಾತನಾಡಿದರು. ಟಿಎಪಿಸಿಎಂಎಸ್‌ ಅಧ್ಯಕ್ಷ ಎಚ್‌.ಎನ್‌.ದೇವೇಗೌಡ, ನ್ಯಾಮನಹಳ್ಳಿ ಅನಂತಕುಮಾರ್‌, ಕಟ್ಟೆಬೆಳಗುಳಿ ಗ್ರಾಪಂ ಅಧ್ಯಕ್ಷ ಕೆ.ಜೆ.ರಂಗಣ್ಣಗೌಡ, ಹಳೇಕೊಟೆ ವಲಯದ ಮೇಲ್ವಿಚಾರಕರಾದ ವೀಣಾ, ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

2,800 ಸ್ವಸಹಾಯ ಸಂಘಗಳು: ಸಂಸ್ಥೆಯ ಜಿಲ್ಲಾ ನಿರ್ದೇಶಕ ಜಯರಾಂ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತಾಲೂಕಿನಲ್ಲಿ ಒಟ್ಟು 2,800 ಸ್ವಸಹಾಯ ಸಂಘ ಹೊಂದಿದ್ದು 2.20 ಲಕ್ಷ ಸದಸ್ಯರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, ಉತ್ತಮ ಸಂಘಟನೆಯಿಂದ ಕೆಲಸ ಮಾಡುತ್ತಿದೆ. ದೀನ ದಲಿತದುರ್ಬಲರಿಗೆ ಅರ್ಥಿಕವಾಗಿ ಮುಂದೆ ಬರಲು ಸಹಾಯ ಹಸ್ತ, ಮಹಿಳೆಯರ ಸಬಲೀಕರಣ ಹಾಗೂ ಯೋಜನೆಯ ಕಾರ್ಯದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next