Advertisement

Dharmasthala-subramanyaಸಂಪರ್ಕ ಸಂಕಷ್ಟ; ರಸ್ತೆ ಅಭಿವೃದ್ಧಿಗೆ 490 ಕೋಟಿ ರೂ. ಪ್ರಸ್ತಾವನೆ

01:21 AM Oct 08, 2023 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಧರ್ಮಸ್ಥಳ-ಕೊಕ್ಕಡ- ಪೆರಿಯಶಾಂತಿ ವರೆಗಿನ 21 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ದ್ವಿಪಥ ವನ್ನಾಗಿ ಅಭಿವೃದ್ಧಿ ಪಡಿಸಲು490 ಕೋ.ರೂ.ಗಳ ಪ್ರಸ್ತಾವನೆ ಸಿದ್ಧಗೊಂಡಿದ್ದರೂ ಅನುಮೋದನೆ ಬಾಕಿಯಿರು ವುದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸು ವಂತಾಗಿದೆ.

Advertisement

ಧರ್ಮಸ್ಥಳಕ್ಕೆ ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲು ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸಬೇಕಾದ ಅನಿ ವಾರ್ಯ ಇದೆ. ನಿಡ್ಲೆ ಕ್ರಾಸ್‌ನಿಂದ ಕೊಕ್ಕಡ ಹಾಗೂ ಮುಂದಕ್ಕೆ ಪೆರಿಯಶಾಂತಿ ವರೆಗೆ ಕೆಸರುಮಯ ಹೊಂಡಗುಂಡಿ ರಸ್ತೆಯಾಗಿ ಮಾರ್ಪಟ್ಟಿದೆ.

ಸಾರ್ವಜನಿಕರ ಅನು ಕೂಲಕ್ಕಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ – ಪೆರಿಯಶಾಂತಿ ರಸ್ತೆ ಯನ್ನು ಅಭಿವೃದ್ಧಿಪಡಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು. ಸರಕಾರವು ಈ ರಸ್ತೆಯನ್ನು ಉಜಿರೆ ಯಿಂದ ಪೆರಿಯಶಾಂತಿ ವರೆಗಿನ 30 ಕಿ.ಮೀ. ವ್ಯಾಪ್ತಿಯನ್ನು ರಾಷ್ಟ್ರೀಯ ಹೆದ್ದಾರಿ 73ರ ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸುಪರ್ದಿಗೆ ನೀಡಿದೆ.

ಕ್ರಿಯಾಯೋಜನೆ ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿದ ಬಳಿಕ ರಾಷ್ಟ್ರೀಯ ಇಲಾಖೆ ಕ್ರಿಯಾಯೋಜನೆ ಸಿದ್ಧಪಡಿಸಿದೆ. ಅದರಂತೆ ಉಜಿರೆ-ಧರ್ಮಸ್ಥಳ ವರೆಗೆ 10 ಕಿ.ಮೀ. ಚತುಷ್ಪಥ ರಸ್ತೆ, ಧರ್ಮಸ್ಥಳದಿಂದ ಪೆರಿಯಶಾಂತಿ ವರೆಗೆ 21 ಕಿ.ಮೀ. ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿ ಪಡಿಸಲು 490 ಕೋ.ರೂ.ಗಳ ಪ್ರಸ್ತಾವನೆ ಸಿದ್ಧಗೊಂಡು ಅನುಮೋದನೆಗೆ ಕಾಯುತ್ತಿದೆ. ಬಹುತೇಕ ರಸ್ತೆ ರಕ್ಷಿತಾರಣ್ಯದ ಮಧ್ಯೆ ಹಾದು ಹೋಗಿರುವುದರಿಂದ ಅರಣ್ಯ
ಇಲಾಖೆಯೊಂದಿಗೆ ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲಷ್ಟೇ ವಿಸ್ತರಣೆ ಸಾಧ್ಯ.

ಶಿರಾಡಿ ಘಾಟಿ ನರಕಯಾತನೆ
ಮಂಗಳೂರಿಂದ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿ ರಸ್ತೆಯ ಸ್ಥಿತಿ ಗುಂಡ್ಯ, ಸಕಲೇಶಪುರ ನಡುವೆ ಹೇಳತೀರದಾಗಿದೆ. ಚಾರ್ಮಾಡಿ ಘಾಟಿ ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಘನ ವಾಹನಗಳ (ಸಾರಿಗೆ ಬಸ್‌ಗಳ ಹೊರತು ರಾಜಹಂಸ ಮತ್ತು ಅದಕ್ಕಿಂತ ಮೇಲ್ದರ್ಜೆಯ ಬಸ್‌ಗಳು) ಸಂಚಾರವಿಲ್ಲದ ಕಾರಣ ಪ್ರಯಾಣಿಕರು ಶಿರಾಡಿ ಮೂಲಕ ಅನಿವಾರ್ಯವಾಗಿ ಸಂಚರಿಸಿ ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಉಜಿರೆಯಿಂದ ಪೆರಿಯಶಾಂತಿ ವರೆಗಿನ 30 ಕಿ.ಮೀ. ರಸ್ತೆಯ ದುರಸ್ತಿಗೆ 2 ಕೋಟಿ ರೂ. ಅಗತ್ಯವಿದೆ. ಮಳೆ ಹಾನಿ ದುರಸ್ತಿಯಡಿ ಬಿಡುಗಡೆಗೊಳಿಸುವಂತೆ ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮನವಿ ಸಲ್ಲಿಸಿದೆ. ಮಳೆ ಸಂಪೂರ್ಣ ಬಿಡುವು ನೀಡಿದ ತತ್‌ಕ್ಷಣವೇ ಅಗತ್ಯವಿರುವಲ್ಲಿ ಮರು ಡಾಮರೀಕರಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.
– ಶಿವಪ್ರಸಾದ್‌ ಅಜಿಲ, ಕಾರ್ಯನಿರ್ವಾಹಕ ಎಂಜಿನಿಯರ್‌,
ರಾಷ್ಟ್ರೀಯ ಹೆದ್ದಾರಿ ವಿಭಾಗ, ಮಂಗಳೂರು

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next