Advertisement

Dharmanna kadur; ಥಿಯೇಟರ್ ನಲ್ಲಿ ರಾಜಯೋಗ

10:59 AM Nov 17, 2023 | Team Udayavani |

ಹಾಸ್ಯನಟ ಧರ್ಮಣ್ಣ ಕಡೂರು ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ “ರಾಜಯೋಗ’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ರಾಜಯೋಗ’ ಸಿನಿಮಾದ ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಿನಿಮಾ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.

Advertisement

“ಶ್ರೀರಾಮರತ್ನ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಕುಮಾರ ಕಂಠೀರವ, ದೀಕ್ಷಿತ್‌ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆ. ಎನ್‌, ನೀರಜ್‌ ಗೌಡ ಜಂಟಿಯಾಗಿ ನಿರ್ಮಿಸಿರುವ “ರಾಜಯೋಗ’ ಸಿನಿಮಾಕ್ಕೆ ಲಿಂಗರಾಜ ಉಚ್ಚಂಗಿದುರ್ಗ ಕಥೆ, ಚಿತ್ರಕ¥ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

ಕೆಎಎಸ್‌ ಎಕ್ಸಾಂ ಬರೆಯಲು ಹೊರಟ ಗ್ರಾಮೀಣ ಪ್ರದೇಶದ ಹುಡುಗನೊಬ್ಬನ ಜೀವನದ ಸುತ್ತ “ರಾಜಯೋಗ’ ಸಿನಿಮಾದ ಕಥೆ ಸಾಗುತ್ತದೆ. ಭೂತ-ಭವಿಷ್ಯದ ಬಗ್ಗೆ ಯೋಚಿಸದೆ ವರ್ತಮಾನದ ಮೇಲೆ ಗಮನ ಹರಿಸಿದರೆ, ಜೀವನ ಚೆನ್ನಾಗಿರುತ್ತದೆ ಎಂಬ ಸಂದೇಶವಿರುವ ಕಾಮಿಡಿ ಕಂ ಎಮೋಶನ್‌ ಶೈಲಿಯಲ್ಲಿ “ರಾಜಯೋಗ’ ಸಿನಿಮಾ ಮೂಡಿಬಂದಿದೆ.

ಸಿನಿಮಾದಲ್ಲಿ ನಾಯಕ ಧರ್ಮಣ್ಣ ಕಡೂರು ಅವರಿಗೆ ನಿರೀಕ್ಷಾ ರಾವ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವತ್ತಾರ್‌, ಶ್ರೀನಿವಾಸಗೌಡ, ಉಷಾ ರವಿಶಂಕರ್‌, ಮಹಾಂತೇಶ ಹಿರೇಮಠ್ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ರಾಜಯೋಗ’ ಸಿನಿಮಾದ ಹಾಡುಗಳಿಗೆ ಅಕ್ಷಯ್‌ ರಿಶಭ್‌ ಸಂಗೀತ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ವಿಷ್ಣುಪ್ರಸಾದ್‌ ಛಾಯಾಗ್ರಹಣ, ಬಿ. ಎಸ್‌. ಕೆಂಪರಾಜು ಸಂಕಲನವಿದೆ. “ರಾಜಯೋಗ’ ನಮ್ಮ ನಡುವಿನ ಕಥಾಹಂದರ ಹೊಂದಿರುವ ಸಿನಿಮಾ. ಎಲ್ಲರಿಗೂ ತಲುಪುವಂಥ, ಕೌಟುಂಬಿಕ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಬಿಡುಗಡೆಗೂ ಮೊದಲೇ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದು ಚಿತ್ರತಂಡದ ಮಾತು.

Advertisement

 ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next