Advertisement

ಧರ್ಮ ಸಂಸದ್‌: ಸುಧರ್ಮ ರಥಕ್ಕೆೆ ಚಾಲನೆ

10:39 AM Oct 26, 2017 | Team Udayavani |

ಉಡುಪಿ: ಉಡುಪಿಯಲ್ಲಿ ನ. 24, 25 ಮತ್ತು 26ರಂದು ಜರಗಲಿರುವ ಸಂತ ಸಮ್ಮೇಳನ, ಸಾಮರಸ್ಯ ಸಭೆ ಮತ್ತು ವಿರಾಟ್‌ ಹಿಂದೂ ಸಮಾಜೋತ್ಸವಗಳನ್ನೊಳಗೊಂಡ “ಧರ್ಮಸಂಸದ್‌ ಉಡುಪಿ – 2017′ ಒಂದು ಮಹ ತ್ಕಾರ್ಯ. ಇದರ ಮೂಲಕ ಹಿಂದೂ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡುವಂತಾಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಹೇಳಿದ್ದಾರೆ. ಧರ್ಮಸಂಸದ್‌ ಪ್ರಚಾರಾರ್ಥ ಜಿಲ್ಲೆಯಾದ್ಯಂತ ಸಂಚರಿಸಲಿರುವ ಸುಧರ್ಮ ರಥಯಾತ್ರೆಗೆ ಅ. 25ರಂದು ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಇದು ರಾಜಕೀಯ, ಪಕ್ಷಭೇದ ರಹಿತವಾದುದು. ಹಿಂದೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಕ್ಕಾಗಿ ಇಂತಹ ಕಾರ್ಯಗಳು ನಡೆಯುತ್ತಿವೆ. ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಹಿಂದೆ ನಡೆದ ಧರ್ಮ ಸಂಸದ್‌ಗಳ ಅನುಭವಗಳನ್ನು ಪರಿಗಣಿಸಿದರೆ ಈ ಬಾರಿ 3,000 ಸಂತರು ಪಾಲ್ಗೊಂಡರೂ ಆಶ್ಚರ್ಯವಿಲ್ಲ. ಅಚ್ಚು ಕಟ್ಟಾಗಿ ಧರ್ಮಸಂಸದ್‌ ನಡೆಯುವುದಕ್ಕಾಗಿ ಹಿರಿಯರ ಮಾರ್ಗದರ್ಶನದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಆಗ ಮಿಸುವ ಸಂತರು, ಇತರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು  ಹೇಳಿದರು.

ರಥಕ್ಕೆ ಚಾಲನೆ ನೀಡಿದ ನ್ಯಾಯವಾದಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್‌ ಪೂಜಾರಿ ಅವರು  ಮಾತನಾಡಿ, ಬುದ್ಧಿಜೀವಿಗಳ ಟೀಕೆಗೆ ಉತ್ತರಿಸಲು ಹಿಂದೂ ಸಮಾಜ ಒಂದಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆವಶ್ಯಕ ಎಂದು ಹೇಳಿದರು.

ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್‌ ನಾಯಕ್‌, ನಗರಾಧ್ಯಕ್ಷ ಸಂತೋಷ್‌ ಸುವರ್ಣ, ಬಜರಂಗ ದಳ ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌, ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಬಜರಂಗದಳ ಮಂಗಳೂರು ವಿಭಾಗ ಸಹಸಂಚಾಲಕ ಸುನಿಲ್‌ ಕೆ.ಆರ್‌. ಸ್ವಾಗತಿಸಿ ಮಾಧ್ಯಮ ಪ್ರಮುಖ್‌ ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮೀನ್‌ ವಂದಿಸಿದರು.

ಒಗ್ಗೂಡಿಸುವ ಪ್ರಯತ್ನ
ಸಮಾಜವನ್ನು ಜಾತಿ, ಧರ್ಮ, ಅಹಿಂದ ಮೊದಲಾದ ಹೆಸರಿನಲ್ಲಿ ವ್ಯವಸ್ಥಿತವಾಗಿ ವಿಚ್ಛಿದ್ರಗೊಳಿಸುವ, ಹಾಳು ಮಾಡುವ ಕೆಲಸಗಳು ನಡೆ ಯುತ್ತಿವೆ. ಹಿಂದೂ ಧರ್ಮವನ್ನು ಒಗ್ಗೂಡಿಸುವ, ಆಚರಣೆಯಲ್ಲಿರುವ ಲೋಪ, ದೌರ್ಬಲ್ಯಗಳನ್ನು ಪರಿ ಹರಿಸಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಮ್ಮದು. ಜೀವನ ಪರ್ಯಂತ ನೆನಪಿನಲ್ಲಿ ಉಳಿ ಯುವ ಧರ್ಮಸಂಸದ್‌ ಇದಾಗ ಬೇಕು ಎಂದು ಪ್ರೊ| ಎಂ.ಬಿ. ಪುರಾಣಿಕ್‌ ಹೇಳಿದರು.

Advertisement

250 ಸ್ಥಳಗಳಲ್ಲಿ  ಸಭೆ
ಸುಧರ್ಮ ರಥವು ಅ. 26ರಿಂದ 28ರ ವರೆಗೆ ಬೈಂದೂರು, 29ರಿಂದ ನ. 1ರ ವರೆಗೆ ಕುಂದಾಪುರ, ನ. 2 ಮತ್ತು 3ರಂದು ಬ್ರಹ್ಮಾವರ, 4ರಿಂದ 8ರ ವರೆಗೆ ಕಾರ್ಕಳ, 9 ಮತ್ತು 10ರಂದು ಕಾಪು, 11ರಿಂದ 13ರ ವರೆಗೆ ಉಡುಪಿ ಗ್ರಾಮಾಂತರ, 14ರಿಂದ 24ರ ವರೆಗೆ ಉಡುಪಿ ನಗರದಲ್ಲಿ ಸಂಚರಿಸಲಿದೆ. ಒಟ್ಟು 250 ಸ್ಥಳಗಳಲ್ಲಿ ಸಭೆ ನಡೆಯಲಿದೆ ಎಂದು ಪ್ರಸ್ತಾವನೆಗೈದ ಬಜರಂಗ ದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next