Advertisement

ಧರ್ಮವೇ ಭಾರತದ ವಿಶೇಷತೆ: ಭಾಗವತ್‌

06:55 AM Aug 16, 2018 | Team Udayavani |

ಬೆಂಗಳೂರು: ಭಾರತ ಧಾರ್ಮಿಕ ರಾಷ್ಟ್ರವಾಗಿದ್ದು, ಧರ್ಮವೇ ನಮ್ಮ ಸತ್ವ ಮತ್ತು ವಿಶೇಷತೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗವತ್‌ ಹೇಳಿದರು.

Advertisement

ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ
ಮಾತನಾಡಿದ ಅವರು, ಭಾರತ ಎಂದರೆ ಕೇವಲ ಭೌಗೋಳಿಕ ವಿಚಾರ ಮಾತ್ರವಲ್ಲ,ಅದು ಸಂಸ್ಕೃತಿ, ಪ್ರಕೃತಿಗಳ ಪ್ರತೀಕ.
ದೇಶದ ವಿಶೇಷವೇ ಧರ್ಮವಾಗಿದ್ದರಿಂದ ವಿಚಾರ ಮತ್ತು ಆಚರಣೆಗಳಲ್ಲಿ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನ ಹೊಂದಿದೆ.

ಭಾರತ ಧಾರ್ಮಿಕ ರಾಷ್ಟ್ರ ಎಂಬುದರ ಪ್ರತೀಕವೇ ತ್ರಿವಣ ಧ್ವಜದಲ್ಲಿರುವ ಧರ್ಮಚಕ್ರ ಎಂದರು.

ಬುದ್ಧ ತನ್ನ ಧರ್ಮದ ಸಂಪ್ರದಾಯ ಧಮ್ಮದ ಪ್ರತೀಕವಾಗಿ ಧರ್ಮಚಕ್ರ ಸ್ಥಾಪಿಸಿದ್ದ. ಪರೋಕಾರ, ನಮ್ಮ ಜೀವನದಿಂದ ಬೇರೆಯವರಿಗೆ ಉಪಯೋಗವಾಗಬೇಕು, ಯಾರೂ ಪಾಪ ಮಾಡಬಾರದು, ಶಾಂತಿಯಿಂದ ಜೀವನ ನಡೆಸಬೇಕು ಎಂಬುದೇ ಧರ್ಮ ಚಕ್ರದ ಅಂಶ ಎಂದು ತಿಳಿಸಿದರು.

ಶ್ರೀರಾಮ ನಮ್ಮ ಆದರ್ಶ: ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಆ ರಾಷ್ಟ್ರವನ್ನಾಳಿದ ರಾಜರನ್ನು ಆದರ್ಶ ಪುರುಷರು ಎಂದು ಪರಿಗಣಿಸುತ್ತಾರೆ.

Advertisement

ಕೆಲವು ರಾಷ್ಟ್ರಗಳಲ್ಲಿ ಚೆಂಗೀಸ್‌ ಖಾನ್‌, ತೈಮೂರ್‌, ಹಿಟ್ಲರ್‌ ಮುಂತಾದವರನ್ನು ಆದರ್ಶ ಎಂದು ಪರಿಗಣಿಸುತ್ತಾರೆ.
ಭಾರತವೂ ರಾಜವಂಶಸ್ಥರಿಂದಲೇ ಕೂಡಿದ್ದರೂ ನಾವು ಆದರ್ಶ ಎಂದು ಭಾವಿಸುವುದು ಪಿತೃ ವಾಕ್ಯ ಪರಿಪಾಲನೆಗಾಗಿ ವನವಾಸ ತೆರಳಿದ ಶ್ರೀರಾಮನನ್ನು, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ರಾಣಾ ಪ್ರತಾಪ್‌ ನನ್ನು, ಯಾವುದೇ ಅಧಿಕಾರ
ಹೊಂದಿರದೇ ಇದ್ದ ಸ್ವಾಮಿ ವಿವೇಕಾನಂದರನ್ನು ಇದು ವಿಶ್ವದ ಇತರೆ ರಾಷ್ಟ್ರಗಳಿಗೂ ಭಾರತಕ್ಕೂ ಇರುವ ವ್ಯತ್ಯಾಸ ಎಂದು ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನ.ದಿನೇಶ್‌ ಹೆಗ್ಡೆ, ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕ ವಿ.ನಾಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next