Advertisement
ಹಿಂದಿನ ನಾಲ್ಕೂ ತಾಣಗಳಿಗೆ ಹೋಲಿಸಿದರೆ ಧರ್ಮ ಶಾಲಾದ “ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿ ಯೇಶನ್ ಸ್ಟೇಡಿಯಂ’ ಭಿನ್ನ. ಇಲ್ಲಿನ ವಾತಾವರಣ ಮಂಜು ಹಾಗೂ ತೀವ್ರ ಥಂಡಿ ಹವೆಯಿಂದ ಕೂಡಿದೆ. ಗರಿಷ್ಠ ತಾಪ ಮಾನವೇ 10 ಡಿಗ್ರಿ ಸೆಲಿÏಯಸ್‌ನಷ್ಟು ಇರ ಲಿದೆ. ಒಂದು ರೀತಿಯಲ್ಲಿ ಇಂಗ್ಲೆಂಡಿಗ ರಿಗೆ ಇದು ಮನೆಯ ವಾತಾ ವರಣದಂತಿದೆ. ಆದರೆ ಈಗಾ ಗಲೇ ಸೋತು ಸುಣ್ಣವಾಗಿರುವ ಆಂಗ್ಲರು ಇದರ ಲಾಭ ವೆತ್ತುವ ಸ್ಥಿತಿಯಲ್ಲಿಲ್ಲ ಎಂದೇ ಹೇಳಬಹುದು.
ಈ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಒಂದು ಬದಲಾವಣೆ ಸಂಭವಿಸಬೇಕಾದುದು ಅನಿವಾರ್ಯ. ರಾಂಚಿಯಲ್ಲಿ ವಿಶ್ರಾಂತಿ ಪಡೆದಿದ್ದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಧರ್ಮಶಾಲಾದಲ್ಲಿ ಆಡಲಿಳಿಯಲಿದ್ದಾರೆ. ಮೊಹಮ್ಮದ್ ಸಿರಾಜ್ ದ್ವಿತೀಯ ಪೇಸ್ ಬೌಲರ್ ಆಗಿರುವುದಾದರೆ ಆಕಾಶ್ ದೀಪ್ ಹೊರಗುಳಿಯಬೇಕಾಗುತ್ತದೆ. ಆಕಾಶ್ ದೀಪ್ ರಾಂಚಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕೆಡವಿದ್ದರು. ಸ್ಪಿನ್ ವಿಭಾಗದಲ್ಲಿ ಎಂದಿನ ತ್ರಿವಳಿಗಳೇ ಇರುತ್ತಾರೆ. ಪಾಟಿದಾರ್/ಪಡಿಕ್ಕಲ್?
ಬ್ಯಾಟಿಂಗ್ ಸರದಿಯಲ್ಲಿ ರಜತ್ ಪಾಟಿದಾರ್ ಮತ್ತು ದೇವದತ್ತ ಪಡಿಕ್ಕಲ್ ನಡುವೆ ಸ್ಪರ್ಧೆ ಇದೆ. ಪಾಟಿದಾರ್ ಈವರೆಗೆ ಅವಕಾಶವನ್ನು ಬಳಸಿಕೊಂಡಿಲ್ಲ. 4ನೇ ಕ್ರಮಾಂಕದಲ್ಲಿ ಆಡ ಲಿಳಿದು 6 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 63 ರನ್ ಮಾತ್ರ. ಹೀಗಾಗಿ ಇವರನ್ನು ಇನ್ನೂ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಎಡಗೈ ಬ್ಯಾಟರ್ ಪಡಿಕ್ಕಲ್‌ಗೆ
ಅವಕಾಶ ಕೊಟ್ಟು ನೋಡಬಹುದು.
Related Articles
ಪ್ರಸಕ್ತ ಸರಣಿಯಲ್ಲಿ 2 ದ್ವಿಶತಕಗಳೊಂದಿಗೆ ರನ್ ಪ್ರವಾಹವನ್ನೇ ಹರಿಸಿರುವ ಯಶಸ್ವಿ ಜೈಸ್ವಾಲ್ ಈ ಪಂದ್ಯದ ಕೇಂದ್ರಬಿಂದು ಆಗಿದ್ದಾರೆ. 8 ಇನ್ನಿಂಗ್ಸ್‌ಗಳಿಂದ ಇವರ ರನ್ ಗಳಿಕೆ 655ಕ್ಕೆ ಏರಿದೆ. ಸರಣಿಯೊಂದರಲ್ಲಿ 700 ರನ್ ಬಾರಿಸಿದ ಭಾರತದ ದ್ವಿತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಸ್ಥಾಪಿಸುವ ಅವಕಾಶವೊಂದು ಜೈಸ್ವಾಲ್ ಮುಂದಿದೆ. ಮೊದಲಿಗ ಸುನೀಲ್ ಗಾವಸ್ಕರ್. 1971ರ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಸರಣಿಯಲ್ಲೇ ಗಾವಸ್ಕರ್ 774 ರನ್ ಪೇರಿಸಿದ್ದರು.
Advertisement
700ರತ್ತ ಆ್ಯಂಡರ್ಸನ್ಇಂಗ್ಲೆಂಡ್ನ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಕೂಡ ನೂತನ ಇತಿಹಾಸದ ಹೊಸ್ತಿಲಲ್ಲಿದ್ದಾರೆ. ಇನ್ನಿಬ್ಬರನ್ನು ಔಟ್ ಮಾಡಿದರೆ ಅವರ ವಿಕೆಟ್ ಸಂಖ್ಯೆ 700ಕ್ಕೆ ಏರಲಿದೆ. ಆಗ ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್ ಹಾಗೂ ಮೊದಲ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ವುಡ್
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಆಡುವ ಬಳಗವನ್ನು ಪ್ರಕಟಿ ಸಿದೆ. ಒಂದು ಬದಲಾವಣೆ ಮಾಡಿ ಕೊಂಡಿದ್ದು, ಓಲೀ ರಾಬಿನ್ಸನ್ ಬದಲು ಮಾರ್ಕ್ ವುಡ್ ಅವರನ್ನು ಸೇರಿಸಿಕೊಂಡಿದೆ.
ಇಂಗ್ಲೆಂಡ್ ಇಲೆವೆನ್: ಜಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್, ಜೋ ರೂಟ್, ಜಾನಿ ಬೇರ್‌ಸ್ಟೊ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ , ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್, ಶೋಯಿಬ್ ಬಶೀರ್. ಆರ್. ಅಶ್ವಿನ್, ಬೇರ್‌ಸ್ಟೊ 100ನೇ ಟೆಸ್ಟ್ ಸಂಭ್ರಮ
ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಧರ್ಮಶಾಲಾದಲ್ಲಿ 100ನೇ ಟೆಸ್ಟ್ ಪಂದ್ಯ ಆಡಲಿಳಿಯಲಿದ್ದಾರೆ. ಅವರು “ಟೆಸ್ಟ್ ಶತಕ’ದ ದಾಖಲೆ ಬರೆದ ಭಾರತದ 14ನೇ ಕ್ರಿಕೆಟಿಗ ನೆನಿಸಿಕೊಳ್ಳಲಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೊ ಕೂಡ 100ನೇ ಟೆಸ್ಟ್ ಆಡಲಿದ್ದಾರೆ. 147 ವರ್ಷಗಳ ಟೆಸ್ಟ್ ಚರಿತ್ರೆಯಲ್ಲಿ, ಒಂದೇ ಪಂದ್ಯದಲ್ಲಿ ಇತ್ತಂಡಗಳ ಇಬ್ಬರು ಆಟಗಾರರು 100ನೇ ಟೆಸ್ಟ್ ಆಡಲಿಳಿಯುವ ದ್ವಿತೀಯ ನಿದರ್ಶನ ಇದಾಗಿದೆ. 2013ರ ಪರ್ತ್ ಟೆಸ್ಟ್‌ನಲ್ಲಿ ಅಲಸ್ಟೇರ್ ಕುಕ್, ಮೈಕಲ್ ಕ್ಲಾರ್ಕ್ ಒಟ್ಟಿಗೇ 100ನೇ ಟೆಸ್ಟ್ ಆಡಿದ್ದರು. ಇನ್ನೂ ಮುಂದುವರಿದು ಹೇಳುವು ದಾದರೆ, ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಕೂಡ ಒಟ್ಟಿಗೇ 100ನೇ ಟೆಸ್ಟ್ ಆಡಲಿದ್ದಾರೆ. ಒಂದೇ ತಂಡದ ಇಬ್ಬರು ಆಟಗಾರರು ಒಂದೇ ಪಂದ್ಯದಲ್ಲಿ 100ನೇ ಟೆಸ್ಟ್ ಆಡುವ ಮೂರನೇ ಸಂದರ್ಭ ಇದಾಗಲಿದೆ. ಈ ಪಂದ್ಯ ಮಾ. 8ರಂದು ಆರಂಭವಾಗಲಿದೆ. ಮುರಳಿ ಬಳಿಕ ಅಶ್ವಿನ್
507 ವಿಕೆಟ್‌ಗಳ ಸಾಧನೆ ಯೊಂದಿಗೆ ಅಶ್ವಿನ್ 100ನೇ ಟೆಸ್ಟ್ ಆಡ ಲಿಳಿಯುವರು. ಈ ಸಾಧನೆ ಯಲ್ಲಿ ಅವರಿಗೆ 2ನೇ ಸ್ಥಾನ. ಮುತ್ತಯ್ಯ ಮುರಳೀ ಧರನ್ 100ನೇ ಟೆಸ್ಟ್ ವೇಳೆ 584 ವಿಕೆಟ್ ಉರುಳಿ ಸಿರುವುದು ದಾಖಲೆ.