Advertisement

ಸಾವನದುರ್ಗದಲ್ಲಿ  ತಲೆ ಎತಲಿದೆ ಧನ್ವಂತರಿ ವನ  

03:28 PM Feb 03, 2021 | Team Udayavani |

ರಾಮನಗರ: ಅರಣ್ಯ ಇಲಾಖೆ ಎಂ.ಪಿ.ಸಿ.ಎ.ಯೋಜನೆಯಲ್ಲಿ ಸಾವನದುರ್ಗಾ ಅರಣ್ಯ ಸಂರಕ್ಷಣೆಗೆ ವಿಶೇಷ ಅನುದಾನ ನೀಡಬೇಕು. ನಾಶವಾಗುತ್ತಿರುವ ಔಷಧಿ ಸಸ್ಯ ಬೆಳೆಸಲು ಸಾವನದುರ್ಗದಲ್ಲಿ ಧನ್ವಂತರಿ ವನ ನಿರ್ಮಿಸಬೇಕು ಎಂದು ಜೀವ ವೈವಿಧ್ಯ ಮಂಡಳಿ  ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

Advertisement

ಜಿಲ್ಲೆಯ ಮಾಗಡಿ ತಾಲೂಕಿನ  ಸಾವನದುರ್ಗ ಅರಣ್ಯ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿ ಅರಣ್ಯ-ಪರಿಸರ ಪರಿಸ್ಥಿತಿಯ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿದ ಅವರು, ಸಾವನ ದುರ್ಗದಲ್ಲಿ ಔಷಧಿ ವೃಕ್ಷಗಳ ಆಗರವಿದೆ. ಬಯಲು ನಾಡಿನ ಹಸಿರು ಓಯಸಿಸ್‌ನಂತಿರುವ ಅರಣ್ಯ ಪ್ರದೇಶದ ನಿಸರ್ಗ ಭಂಡಾರವನ್ನು ಲೂಟಿ ಹೊಡೆಯಲು ಅವಕಾಶ ನೀಡ ಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಡಿನ ಕೆರೆಗಳ ಸಂರಕ್ಷಣೆ : ವಲಯ ಅರಣ್ಯಾಧಿಕಾರಿ ಪುಷ್ಪಲತಾ ಮಾತನಾಡಿ, ಕಾಂಪಾ ಅನುದಾನದಲ್ಲಿ ಗಡಿಕಂದಕ ನಿರ್ಮಾಣ, ಬೆಂಕಿ ತಡೆ, ಕಾಡಿನ ಕೆರೆಗಳ ಸಂರಕ್ಷಣೆ ಮಾಡಿದ್ದೇವೆ. 10 ಚಿಕ್ಕ ಕೆರೆಗಳು ಇಲ್ಲಿವೆ. ಸಾವನದುರ್ಗಾ ಪ್ರಸಿದ್ಧ ಧಾರ್ಮಿಕ ಹಾಗ ಪ್ರವಾಸಿ ಸ್ಥಳವಾಗಿದೆ. ನಿತ್ಯ ಸಾವಿರಾರು ಜನರು ಇಲ್ಲಿಗೆ ಟ್ರಕ್ಕಿಂಗ್‌ಗೆ ಬರುತ್ತಿದ್ದಾರೆ. ಪರಿಣಾಮ ಸಾವನದುರ್ಗಾ ಎಂಪಿಸಿಎ ಅರಣ್ಯ ಮಲಿನವಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಕೆಲ ಎಚ್ಚರಿಕೆಗಳನ್ನು ಜಾರಿ ಮಾಡಬೇಕಿದೆ ಎಂದರು.

ವನ್ಯ ಜೀವಿ ಸಂರಕ್ಷಿತ ಪ್ರದೇಶವಾಗಲಿ: ಜೀವವೈವಿಧ್ಯ ಮಂಡಳಿಯ ಸಂಶೋಧನಾ ವಿಭಾಗದ ತಜ್ಞ ಪ್ರೀತಂ ಮಾತನಾಡಿ, ಸಾವನದುರ್ಗ ಅಮೂಲ್ಯ ಜೀವವೈವಿಧ್ಯ ಭಂಡಾರ. ಆನೆ ಕಾರಿಡಾರ್‌ ಎಂದು ಗುರಿತಿಸಲ್ಪಟ್ಟಿದೆ. ಇಲ್ಲಿ ಚಿರತೆ, ಕರಡಿ, ಜಿಂಕೆ, ನವಿಲುಗಳನ್ನು ನೋಡಬಹುದು. ಇದನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ವನ್ಯಜೀವಿ ಮಂಡಳಿ ಘೋಷಿಸಬೇಕು ಎಂದು ಹೇಳಿದರು.

ಸಿದ್ಧದೇವರ ಬೆಟ್ಟಕ್ಕೆ ಭೇಟಿ: ಇದೇ ವೇಳೆ ಮಾಗಡಿ ಪಟ್ಟಣದ ಸಮೀಪದ ಸಿದ್ಧದೇವರ ಬೆಟ್ಟಕ್ಕೆ ಭೇಟಿ ನೀಡದ ತಜ್ಞರ ತಂಡವು, ಹಸಿರು ಬೆಟ್ಟದ ಅತಿ ಕ್ರಮಣ ತಡೆಯಲು ಗಡಿಬೇಲಿ, ಕಂದಕ ನಿರ್ಮಾಣ, ಫ‌ಲಕಗಳ ಮೂಲಕ ಜಾಗೃತಿ ಯೋಜನೆಯನ್ನು ಅರಣ್ಯ ಇಲಾಖೆ ಜಾರಿ ಮಾಡಬೇಕು. ಮಾಗಡಿ ತಾಪಂ ಜೀವವೈವಿಧ್ಯ ಸಮಿತಿ ಇಲ್ಲಿನ ಸಿದ್ಧದೇವರ ಬೆಟ್ಟವನ್ನು ಸಿದ್ಧದೇವರ ಜೀವ ವೈವಿಧ್ಯ ತಾಣ ಎಂದು ಮಾನ್ಯತೆ ನೀಡಬೇಕು ಎಂದು ಸೂಚಿಸಿದರು.

Advertisement

ಇದನ್ನೂ ಓದಿ :ಸಾರ್ವಜನಿಕರಿಗೆ ಕಂಟಕವಾದ ಕ್ರಷರ್‌ ಲಾರಿಗಳು!

ಈ ಸಂದರ್ಭದಲ್ಲಿ ಎಂ.ಪಿ.ಸಿ.ಎ ಸಲಹಾ ಸಮಿತಿ ಮತ್ತು ವಿ.ಎ ಫ್.ಸಿ ಸದಸ್ಯರುಗಳಾದ ಮಹದೇವಯ್ಯ, ನರಸಿಂಹಯ್ಯ, ಮಾಗಡಿಯ ಅರಣ್ಯ ಅಧಿಕಾರಿಗಳು, ಜೀವವೈವಿದ್ಯ ಸಮಿತಿ, ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next