Advertisement
ಆ್ಯಕ್ಷನ್ ಥ್ರಿಲ್ಲರ್ ಕಥೆಯನ್ನೊಳಗೊಂಡಿದೆ ಎನ್ನಲಾಗುತ್ತಿರುವ ʼರಾಯನ್ʼ ಬಗ್ಗೆ ಹೈಪ್ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಇದು ಧನುಷ್ ನಿರ್ದೇಶನದ ಸಿನಿಮಾವೆನ್ನುವುದು. 2017 ರಲ್ಲಿ ಧನುಷ್ ನಿರ್ದೇಶನದ ʼ ಪಾ ಪಾಂಡಿʼ ಎನ್ನುವ ಸಿನಿಮಾ ಬಂದಿತ್ತು. ಈ ಸಿನಿಮಾಕ್ಕೆ ಅತ್ಯುತ್ತಮ ನಿರ್ದೇಶನದ ವಿಭಾಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ಬಂದಿತ್ತು.
Related Articles
Advertisement
ಇದನ್ನೂ ಓದಿ: Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್ ಐಪಿಎಸ್ ಅಧಿಕಾರಿಯಾಗಿ ವಿಶಾಲ್ ನಟನೆ?
ಇದೇ ಲಾಭವನ್ನು ಈಗ ಧನುಷ್ ಅವರ ʼರಾಯನ್ʼ ಸಿನಿಮಾ ಪಡೆದುಕೊಂಡಿದೆ. ಮೂಲಗಳ ಪ್ರಕಾರ ಜೂನ್ 13 ರಂದು ʼರಾಯನ್ʼ ಸಿನಿಮಾವನ್ನು ರಿಲೀಸ್ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಜೂನ್ ನಲ್ಲಿ ಕಮಲ್ ಹಾಸನ್ ಅವರ ʼಇಂಡಿಯನ್ -2ʼ ರಿಲೀಸ್ ಆಗಬೇಕಿತ್ತು. ಆದರೆ ಈ ಸಿನಿಮಾ ರಿಲೀಸ್ ಮುಂದೂಡಿಕೆ ಆಗಿದ್ದು, ಇದೇ ಕಾರಣದಿಂದ ʼರಾಯನ್ʼ ಜೂನ್ 13 ರಂದು ತೆರೆ ಕಾಣಲಿದೆ ಎನ್ನಲಾಗಿದೆ.
ಧನುಷ್ ಜೊತೆ ಸಿನಿಮಾದಲ್ಲಿ ಎಸ್ ಜೆ ಸೂರ್ಯ, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ಸೆಲ್ವರಾಘವನ್, ಅಪರ್ಣಾ ಬಾಲಮುರಳಿ, ದುಷಾರ ವಿಜಯನ್, ವರಲಕ್ಷ್ಮಿ ಶರತ್‌ಕುಮಾರ್, ಪ್ರಕಾಶ್ ರಾಜ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಇದರೊಂದಿಗೆ ನಟಿ ನಿತ್ಯಾ ಮೆನನ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.