Advertisement

ತೆರಿಗೆ ಪಾವತಿಸಿ: ನೋಟಿಸ್‌

09:15 AM Apr 25, 2018 | Karthik A |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ SBI, ಖಾಸಗಿ ರಂಗದ HDFC ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಕೊಟಕ್‌ ಮಹೀಂದ್ರಾ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ಗಳಿಗೆ ಸರಕು ಮತ್ತು ಸೇವಾ ತೆರಿಗೆಗಳ ಗುಪ್ತಚರ ವಿಭಾಗದ ಮಹಾ ನಿರ್ದೇಶನಾಲಯ (DGGST) ನೋಟಿಸ್‌ ನೀಡಿದೆ.

Advertisement

ನಿಗದಿತ ವಹಿವಾಟಿನ ನಂತರದ ಎಟಿಎಂ ವಹಿವಾಟಿಗೆ ಹೇರುವ ಶುಲ್ಕ, ಚೆಕ್‌ ಬುಕ್‌, ಡೆಬಿಟ್‌ ಕಾರ್ಡ್‌ ವಿತರಣೆಯಿಂದ ಬರುವ ಆದಾಯ, ಕನಿಷ್ಠ ಮೊತ್ತ ಕಾಯ್ದುಕೊಂಡಿಲ್ಲ ಎಂದು ಗ್ರಾಹಕರ ಮೇಲೆ ಹೇರುವ ದಂಡದಿಂದ ಬಂದ ಆದಾಯ ಇತ್ಯಾದಿಗಳಿಗೂ ತೆರಿಗೆ ಪಾವತಿ ಮಾಡಬೇಕು ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಪೂರ್ವಾನ್ವಯವಾಗಿಯೇ ಅದನ್ನು ಪಾವತಿ ಮಾಡಬೇಕು ಎಂದು ಹೇಳಲಾಗಿದೆ ಎಂದು ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಕೆಲವೊಂದು ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಈ ನೋಟಿಸ್‌ ಸಿಕ್ಕಿದ ಬಳಿಕ ಗೊಂದಲಕ್ಕೆ ಒಳಗಾಗಿವೆ. ಹೀಗಾಗಿ, ನೋಟಿಸ್‌ ಬಗ್ಗೆ ಕೇಂದ್ರ ಸರಕಾರದ ಜತೆಗೆ ಚರ್ಚಿಸಲು ಬ್ಯಾಂಕ್‌ಗಳು ನಿರ್ಧರಿಸಿವೆ.  ಮೂಲಗಳ ಪ್ರಕಾರ, ಕನಿಷ್ಠ ಐದು ವರ್ಷಗಳ ಅವಧಿಯಿಂದ ತೆರಿಗೆ ಮೊತ್ತ ಸಂಗ್ರಹಿಸಬೇಕಾಗುತ್ತದೆ. ಅದು ಏನಿಲ್ಲದ್ದಿದರೂ 6 ಸಾವಿರ ಕೋಟಿ ರೂ. ಆಗುತ್ತದೆ ಎಂದು ಹೇಳಲಾಗಿದೆ.

2017ರ ಎಪ್ರಿಲ್‌ನಿಂದ ನವೆಂಬರ್‌ ಅವಧಿಯಲ್ಲಿ SBI, ಕನಿಷ್ಠ ಠೇವಣಿ ಇರಿಸದ ಗ್ರಾಹಕರಿಗೆ ದಂಡ ವಿಧಿಸುವ ನಿಯಮ ಜಾರಿ ಮಾಡಿತ್ತು. ಈ ದಂಡದಿಂದಲೇ ಬ್ಯಾಂಕ್‌ 1,777 ಕೋಟಿ ರೂ. ಸಂಗ್ರಹಿಸಿತ್ತು. ಅದನ್ನು ಆದಾಯ ಎಂದು ತೋರಿಸಿಕೊಂಡದ್ದರಿಂದ ಡಿಜಿಜಿಎಸ್‌ಟಿ ಎಲ್ಲಾ ಬ್ಯಾಂಕ್‌ಗಳಿಗೆ ನೋಟಿಸ್‌ ನೀಡಿದೆ. ಒಂದು ವೇಳೆ ಅದು ಜಾರಿಯಾದಲ್ಲಿ ಬ್ಯಾಂಕ್‌ಗಳಲ್ಲಿ ಎಲ್ಲಾ ಸೇವೆಗಳಿಗೂ ಗ್ರಾಹಕರು ಶುಲ್ಕ ಪಾವತಿ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next