ಇನ್ನೇನೂ 2024 ಮುಗಿದು 2025 ಪ್ರಾರಂಭವಾಗೋ ಗಳಿಗೆ ಹತ್ತಿರದಲ್ಲೇ ಇದೆ. 2024 ಅದೆಷ್ಟು ಬೇಗ ಮುಗಿಯಿತೋ ಅನ್ಸತ್ತೆ. ದಿನಗಳು ಕಳಿಯೋ ಹಾಗೆ ತಂತ್ರಜ್ಞಾನಗಳು ಬೆಳೆಯುತ್ತಲೇ ಇದೆ. ಇಂದಿನ ಈ ತಂತ್ರಜ್ಞಾನದ ಯುಗದಲ್ಲಿ ಎ.ಐ. ಆವಿಷ್ಕಾರದಿಂದ ಅನೇಕನ ಪ್ರಯೋಜನೆ ಸಿಗುತ್ತಿರುವುದನ್ನು ನಾವು ಕಾಣಬಹುದು.
ಪೋಸ್ಟರ್ ಡಿಸೈನ್ ಮಾಡು ಅಂದರೆ ಮಾಡತ್ತೆ, ಪವರ್ಪಾಯಿಂಟ್ ರೆಡಿ ಮಾಡು ಅಂದರೂ ಮಾಡುತ್ತದೆ. ಎಲ್ಲವೂ ತಾನೇ ಮಾಡತ್ತೆ ಅಂದಾಗ ಖಂಡಿತ ಮ್ಯಾನ್ ಪವರ್ ಅಷ್ಟೇನು ಉಪಯೋಗ ಇಲ್ಲ. ಖಂಡಿತ ಇದು ಎಲ್ಲರಿಗೂ ಉಪಕಾರಿಯೇ.. ಆದರೆ ಮುಂದೆ ಇದೇ ಮಾರಕವಾಗಬಹುದು ಅಂತಲೂ ಅನಿಸುತ್ತದೆ. ಮಾನವನ ಸಹಾಯ ಇಲ್ಲದೇ ಕೇವಲ ಕಂಪ್ಯೂಟರ್ಗಳೇ ಕೆಲಸ ಮಾಡತ್ತೆ ಅಂದ್ರೆ ಮಾನವನಿಗೆ ನಿಜಕ್ಕೂ ಕೆಲಸ ಇರತ್ತಾ?
ಸಾಫ್ಟ್ ವೇರ್ ಐ.ಟಿ. ಯಲ್ಲಿ ನಿರುದ್ಯೋಗ ಸಮಸ್ಯೆ
ಈಗಾಗಲೇ ಅತೀಯಾದ ಜನಸಂಖ್ಯೆ ಹೆಚ್ಚಾಗಿರೋ ಭಾರತದಲ್ಲಿ ವಯಸ್ಸಿನ ಮಿತಿ 24-36 ಅಂತಾ ಸ್ಟಾಟಿÂಸ್ಟಿಕ್ಸ್ ಹೇಳತ್ತೆ. ಈಗಲೇ ಹೆಚ್ಚಾಗಿ ಓದಿರುವ ಜನರಿಗೆ ಕೆಲಸ ಸಿಗುತ್ತಿಲ್ಲ. ಎಲ್ಲರೂ ಸ್ಕಿಲ್ಗಾಗಿ ಯು.ಡೆಮಿ,ಅನ್ಅಕಾಡೆಮಿ ಇತ್ಯಾದಿಗಳಲ್ಲಿ ಹೆಚ್ಚವರಿ ಕೋರ್ಸ್ಗಳನ್ನು ಮಾಡುತ್ತಿದ್ದಾರೆ, ಆದರೆ ಖಂಡಿತ ಅವರಿಗೆ ಭವಿಷ್ಯ ಇದ್ಯಾ? ಒಂದು ಚಾಟ್ ಜಿ.ಪಿ.ಟಿ ನಾಲ್ಕು ಜನರ ಕೆಲಸವನ್ನು ಏಕಕಾಲಕ್ಕೆ ಮಾಡುವಾಗ ಒಬ್ಬರಿಗೆ ಹೇಗೆ ಕೆಲಸ ಒದಗಿಸುವುದು? 200 ಪೋಸ್ಟ್ ಕಾಲಿ ಇರುವ ಕೆಲಸಕ್ಕೆ 10 ಲಕ್ಷ ಜನ ಅಪ್ಲೆ„ ಮಾಡೋದನ್ನ ನಾವು ನೋಡುತ್ತಲೇ ಇದ್ದೇವೆ. ಹೀಗಿರುವಾಗ ಮುಂದೆ ಈ ತಂತ್ರಜ್ಞಾನಗಳ ಬೆಳವಣಿಗೆ ಇನ್ನೂ ಹೆಚ್ಚಾಗತ್ತೆ. ಆಗ ನಿರುದ್ಯೋಗದ ಸಂಖ್ಯೆ ಇನ್ನೂ ಹೆಚ್ಚಾಗಬಹುದು.
ಬೇರೆ ದೇಶದಲ್ಲಿರೋ ಭಾರತೀಯರು ಪುನಃ ಭಾರತಕ್ಕೆ ಮರಳಿ ಬರೋ ದಿನಗಳು ದೂರ ಇಲ್ಲ.
ಭಾವನೆ ಹಾಗೂ ಸಂಬಂಧಗಳ ಮೇಲೂ ದೊಡ್ಡ ಪರಿಣಾಮ ಬೀಳತ್ತೆ!!
ಈಗಾಗಲೇ ನಾವು ದೊಡ್ಡ ದೊಡ್ಡ ಸೆಲೆಬ್ರಿಟಿಗಳ ನಗ್ನ ಫೋಟೋಗಳು ಎ.ಐ. ಮುಖಾಂತರ ಎಡಿಟ್ ಆಗುತ್ತಿರುವ ಸುದ್ದಿ ಆಗಾಗ ಹರಿದಾಡುವುದನ್ನು ತಿಳಿದಿದ್ದೇವೆ. ಇದನ್ನು ಕೇವಲ ನಾವು ಟ್ರೈಲರ್ ಎಂದಷ್ಟೇ ಭಾವಿಸಬಹುದು. ಅದು ಫೇಕ್!, ಅದು ಸುಳ್ಳು! ಎಂದರೂ ಜನ ನಂಬದ ರೀತಿಯಲ್ಲಿ ಎ.ಐ ಮುಖಾಂತರ ಈಗ ವೀಡಿಯೋಗಳು,ಫೋಟೋಗಳು ಎಡಿಟ್ ಆಗುತ್ತವೆ. ಇದು ಸಾಮನ್ಯರಲ್ಲಿ ಸಾಮಾನ್ಯನೂ ಕೂಡ ಅತೀ ಕಡಿಮೆ ಸಮಯದಲ್ಲಿ ಮಾಡಬಹುದಾದಂತಹ ಕಾರ್ಯ, ಇದೇ ಮುಂದುವರೆದರೇ ಸಂಬಂಧಗಳಲ್ಲಿ, ಪ್ರೀತಿ-ಭಾವನೆಗಳಲ್ಲಿ ಹೇಗೆ ಬಿರುಕು ಉಂಟಾಗಬಹುದು? ಯೋಚಿಸಲೂ ಕೂಡ ಭಯವಾಗತ್ತೆ ಅಲ್ವಾ? ಚಾಟ್ ಜಿ.ಪಿ.ಟಿ ಗೆ ಹೋಗಿ “ಋಟ್ ಸಮ್ ಎಮೋಶನಲ್ ಮೆಸೇಜ್ ಟು ಮೈ ಫ್ರೆಂಡ್, ದಟ್ ಐ ಆಮ್ ಮಿಸ್ಸಿಗ್ ಯು” ಅಂತಾ ಸಾಮಾನ್ಯವಾಗಿ ಕಮಾಂಡ್ ಕೊಟ್ಟರೆ ಸಾಕು ನಿಮಗೆ ಎಷ್ಟು ಪದಗಳ ಮಿತಿ ಬೇಕೋ ಅಷ್ಟು ಪದಗಳ ಮಿತಿಯಲ್ಲಿ ಅದು ಬರೆದುಕೊಡತ್ತೆ. ಹಿಂದೆ ಕೊಡುತ್ತಿದ್ದ ಪತ್ರಗಳು, ನಿಜವಾಗಿಯೂ ಭಾವುಕರಾಗಿ ಕರೆ ಮಾಡುತ್ತಿದ್ದ ದಿನಗಳು ಎಲ್ಲವೂ ಈ ಚಾಟ್ ಜಿ.ಪಿ.ಟಿ ಹಾಗೂ ಎ.ಐ ನುಂಗುಹಾಕೋದಂತೂ ನಿಜ.
ಸಿನೆಮಾ/ಸಾಹಿತ್ಯಕ್ಕೂ ಎ.ಐ. ಮಾರಕವಾಗಬಹುದಾ?
ಇದರಲ್ಲಿ ನನಗೆ ಕಿಂಚಿತ್ತು ನಂಬಿಕೆಯಿಲ್ಲ. ಯಾವುದೇ ಎ.ಐ. ಆಗಲಿ ಮನುಷ್ಯನ ಸ್ವಂತ ನಂಬಿಕೆಗಳು, ಭಾವನೆಗಳನ್ನು ಅವನು ಸಾಹಿತ್ಯದಲ್ಲಾಗಲೀ, ಸಿನೆಮಾದಲ್ಲಾಗಲಿ ಪಡೆದುಕೊಳ್ಳುವಂತೆ ಎ.ಐ. ಜನಕ್ಕೆ ರೀಚ್ ಮಾಡಲು ಸಾಧ್ಯವಿಲ್ಲ. ಮುಂದೊಂದು ದಿನ ಅದು ಆದರೂ ಕೂಡ ಆಶ್ಚರ್ಯವಿಲ್ಲ. ಆದರೆ ಮನುಷ್ಯನ ಭಾವನೆ ಹಾಗೂ ನಂಬಿಕೆಗಳು ಎ.ಐ ಗಿಂತ ಸ್ಥಿರವಿದೆ ಅನ್ನೋದು ನನ್ನ ನಂಬಿಕೆ. ಆದರೆ ಈಗಾಗಲೇ ಎಡಿಟಿಂಗ್ ಅಲ್ಲಿ, ತಿದ್ದುಪಡಿಗಳಲ್ಲಿ ಎ.ಐ. ನಾ ಉಪಯೋಗವನ್ನ ಸಿನೆಮಾ ರಂಗ ಮಾಡಿಕೊಳ್ಳುತ್ತಾ ಇದೆ. ಆದರೆ ಒಬ್ಬ ಬರಹಗಾರನ ಶ್ರಮಕ್ಕೆಈ ಎ.ಐ ಚ್ಯುತಿ ಉಂಟುಮಾಡದೇ ಇದ್ದರೆ ಅಷ್ಟೇ ಸಾಕು.
ನಾವೇನು ಮಾಡಬಹುದು?
ಎ.ಐ ನಾ ಬಳಸದೇ ಇರೋಕ್ಕಂತೂ ಸಾಧ್ಯವಿಲ್ಲ. ಅದು ಖಂಡಿತ ಮುಂದೊಂದು ದಿನ ಹೇಗೆ ನಾವು ವಾಟ್ಸ್ ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಬಳಸುತ್ತಿದ್ದೀವೋ ಹಾಗೇ ಅದು ಕೂಡ ಆಗತ್ತೆ. ಆದರೆ ಅದು ನಮ್ಮ ಭಾವನೆಗಳಿಗೆ, ಸಂಬಂಧಗಳ ನಾಶಕ್ಕೆ ಕಾರಣವಾಗಬಾರದು. ಆದಷ್ಟು ಸಮಯವನ್ನ ಜನರೊಟ್ಟಿಗೆ ಕಳೆಯೋದು ಉತ್ತಮ. ಎ.ಐ ಫ್ರೆಂಡ್ ಆಗೋದು ಬೇಡ. ಆದಷ್ಟು ಓದಬೇಕು, ಆದಷ್ಟು ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಅತೀವವಾದ ಎ.ಐ. ಮೊರೆಹೋಗೂದು ಕಮ್ಮಿ ಮಾಡಬೇಕು. ಚಾಟ್ ಜಿ.ಪಿ.ಟಿ ಯಲ್ಲಿ ಕಾಪಿ ಮಾಡಿ ಪೇಸ್ಟ್ ಮಾಡೋದ್ರಿಂದ ನಮ್ಮಲ್ಲಿ ಯಾವುದೇ ಜ್ಞಾನದ ಬೆಳವಣಿಗೆ ಆಗಲ್ಲ. ಎ.ಐ ಖಂಡಿತ ಪರಿಪೂರ್ಣ ಮಾನವನ ಬೆಳವಣಿಗೆಗೆ ಕಳಂಕ ಆಗೋದಂತೂ ನಿಜ.
-ಕಿರಣ್ ಪಿ. ಕೌಶಿಕ್
ಮೈಸೂರು