“ಅಸಹಜ’ವೇನೂ ಅಲ್ಲ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ದ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ. ಇದೇ ವೇಳೆ, ಈ ಬಗ್ಗೆ ತನಿಖೆಗೆ ಇಬ್ಬರು ಸದಸ್ಯರ ಸಮಿತಿಯನ್ನು ಡಿಜಿಸಿಎ ರಚಿಸಿದ್ದು, 2-3 ವಾರಗಳಲ್ಲಿ ಈ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ.
Advertisement
ಗುರುವಾರ ಬೆಳಗ್ಗೆ 9:30ಕ್ಕೆ ನವದೆಹಲಿಯಿಂದ ಹೊರಟಿದ್ದ ವಿಮಾನದಲ್ಲಿ 10:30ರ ಹೊತ್ತಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ವಿಮಾನದ ಆಟೋ ಪೈಲಟ್ ಮೋಡ್ ಕೈಕೊಟ್ಟಿದ್ದರಿಂದಾಗಿ, ಒಂದು ಬದಿಗೆ ವಾಲಿಕೊಂಡ ವಿಮಾನ ಕಂಪಿಸತೊಡಗಿತ್ತು. ಆಗ, ವಿಮಾನದಲ್ಲಿದ್ದ ಪೈಲಟ್, ಮ್ಯಾನ್ಯುವಲ್ ಮೋಡ್‌ಗೆ ಹಾಕಿದ ನಂತರವೂ, ತಕ್ಷಣಕ್ಕೆ ಹತೋಟಿಗೆ ಬಾರದ ವಿಮಾನ, ಸತತ ಮೂರು ಬಾರಿ ಪ್ರಯತ್ನಿಸಿದ ಮೇಲೆ ಹುಬ್ಬಳ್ಳಿಯಲ್ಲಿ ಭೂಸ್ಪರ್ಶ ಮಾಡಿತು. ಈ ಘಟನೆಯನ್ನು ಕಾಂಗ್ರೆಸ್ ಷಡ್ಯಂತ್ರವೆಂದು ಅನುಮಾನಿಸಿದ್ದುಸೂಕ್ತ ತನಿಖೆಗಾಗಿ ಕರ್ನಾಟಕ ಪೊಲೀಸ್ ಇಲಾಖೆಗೆ ಗುರುವಾರವೇ ಮನವಿ ಮಾಡಿತ್ತು. ಇದೇ ವೇಳೆ ಮಾತನಾಡಿರುವ ಅಧಿಕಾರಿಯೊಬ್ಬರು, ವಿಮಾನದ ಆಟೋ ಪೈಲಟ್ ಮೋಡ್‌ನಲ್ಲಿ ಲೋಪ ಕಂಡುಬಂದಿತ್ತು. ಕೂಡಲೇ ಪೈಲಟ್ ಅದನ್ನು ಮ್ಯಾನುವಲ್ ಮೋಡ್‌ಗೆ ಬದಲಿಸಿ, ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ್ದಾರೆ ಎಂದು ಹೇಳಿದ್ದಾರೆ.
ಚೀನಾಗೆ ಹೊರಟಿದ್ದ ಪ್ರಧಾನಿ ಮೋದಿ ಅವರು ಕೂಡಲೇ ರಾಹುಲ್‌ಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ರಾಹುಲ್ ವಿಮಾನದಲ್ಲಿನ ದೋಷ ಕುರಿತು ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ. ತಪ್ಪು ನಡೆದಿರುವುದು ಕಂಡುಬಂದರೆ, ತಪ್ಪಿತಸ್ಥರ
ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಸುರೇಶ್ ಪ್ರಭು, ನಾಗರಿಕ ವಿಮಾನಯಾನ ಸಚಿವ