ಕಿಂಗ್‌ಸ್ಟನ್: ಎಡಗೈ ಬ್ಯಾಟ್ಸ್‌ಮನ್ ಡೆವೋನ್ ಸ್ಮಿತ್ 3 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಅಂತಿಮಗೊಳಿಸಲಾದ 13 ಸದಸ್ಯರ ತಂಡದಲ್ಲಿ ಸ್ಮಿತ್ ಅವರಿಗೆ ಅವಕಾಶ ನೀಡಲಾಗಿದೆ. ಜಾಸನ್ ಹೋಲ್ಡರ್ ನಾಯಕರಾಗಿ ಮುಂದುವರಿದಿದ್ದಾರೆ.
ಇತ್ತೀಚಿನ ಸ್ಥಳೀಯ ಚತುರ್ದಿನ ಪಂದ್ಯಾವಳಿಯಲ್ಲಿ ವಿಂಡ್‌ವಾರ್ಡ್ ಐಲ್ಯಾಂಡ್ ಪರ ಆಡುತ್ತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ಡೆವೋನ್ ಸ್ಮಿತ್ ಅವರಿಗೆ ಮರಳಿ ಕರೆ ಲಭಿಸಿತು. ಈ ಕೂಟದಲ್ಲಿ ಅವರು 84.23ರ ಸರಾಸರಿಯಲ್ಲಿ 1,095 ರನ್ ಪೇರಿಸಿದ್ದರು. 36ರ ಹರೆಯದ ಸ್ಮಿತ್ 2015ರಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸೇಂಟ್ ಜಾಜ್Õì ಪಾರ್ಕ್‌ನಲ್ಲಿ ಕೊನೆಯ ಸಲ ಟೆಸ್ಟ್ ಆಡಿದ್ದರು.
ವಿಕೆಟ್ ಕೀಪರ್ ಜಾಮರ್ ಹ್ಯಾಮಿಲ್ಟನ್ ಈ ತಂಡದ ಹೊಸ ಮುಖ. ವಿಂಡೀಸ್ “ಎ’ ತಂಡದ ಪರ ಹ್ಯಾಮಿಲ್ಟನ್ ಉತ್ತಮ ಪ್ರದರ್ಶನ ನೀಡಿದ್ದರು. ಶೇನ್ ಡೌರಿಚ್ ಪ್ರಧಾನ ಕೀಪರ್ ಆಗಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ಜಾಸನ್ ಹೋಲ್ಡರ್ (ನಾಯಕ), ದೇವೇಂದ್ರ ಬಿಶೂ, ಡೆವೋನ್ ಸ್ಮಿತ್, ಕ್ರೆಗ್ ಬ್ರಾತ್‌ವೇಟ್, ಕೈರನ್ ಪೊಲಾರ್ಡ್, ರೋಸ್ಟನ್ ಚೇಸ್, ಮಿಗ್ಯುಯೆಲ್ ಕಮಿನ್ಸ್, ಶೇನ್ ಡೌರಿಚ್, ಶಾನನ್ ಗ್ಯಾಬ್ರಿಯಲ್, ಜಾಮರ್ ಹ್ಯಾಮಿಲ್ಟನ್, ಶಿಮ್ರನ್ ಹೆಟ್‌ಮೈರ್, ಕೆಮರ್ ರೋಶ್, ಶೈ ಹೋಪ್.