Advertisement
ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 5 ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ 45.2 ಲಕ್ಷ ರೂ. ಹಾಗೂ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 11 ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ 87.15 ಲಕ್ಷ ರೂ.ಬಿಡುಗಡೆಗೊಂಡಿದೆ.
ಬೆಂಗ್ರೆ ಕಸಬ ಹಿ.ಪ್ರಾ.ಶಾಲೆಯ ಮೇಲ್ಛಾವಣಿ ದುರಸ್ತಿ ಹಾಗೂ ಮುಂಭಾಗದ ಗೋಡೆ ದುರಸ್ತಿ ಕಾರ್ಯಕ್ಕೆ 8.70 ಲಕ್ಷ ರೂ., ಕವತ್ತಾರ್ ಹಿ.ಪ್ರಾ.ಶಾಲೆಯ 2 ತರಗತಿ ಕೋಣೆಗಳ ಮೇಲ್ಛಾವಣಿ ದುರಸ್ತಿ ಮತ್ತು 1 ತರಗತಿಯ ನೆಲ ದುರಸ್ತಿ ಕಾರ್ಯಕ್ಕೆ 2 ಲಕ್ಷ ರೂ., ಸುರತ್ಕಲ್ ಹಿ.ಪ್ರಾ.ಶಾಲೆಯ ಮೇಲ್ಛಾವಣಿ, ಕಿಟಕಿ ಹಾಗೂ ಗೋಡೆ ದುರಸ್ತಿ ಕಾರ್ಯಕ್ಕೆ 1.5 ಲಕ್ಷ ರೂ.ಬಿಡುಗಡೆಗೊಂಡು, ಕಾಮಗಾರಿ ಪೂರ್ತಿಗೊಂಡಿದೆ. ಕೆ.ಎಸ್.ರಾವ್ ನಗರ ಮೂಲ್ಕಿ ಲಿಂಗಪ್ಪಯ್ಯ ಕಾಡು ಶಾಲೆಯ 2 ತರಗತಿ ಕೋಣೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶಾಸಕರ ಅನುದಾನದ ಒಂದು ಕೊಠಡಿಯ ಪಿಲ್ಲರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ಒಟ್ಟು 25 ಲಕ್ಷ ರೂ.ಬಿಡುಗಡೆಗೊಂಡಿದೆ. ಕಾಪಿಕಾಡು ಹಿ.ಪ್ರಾ.ಶಾಲೆಗೆ ಜಿ.ಪಂ.ವತಿಯಿಂದ 8 ಲಕ್ಷ ರೂ.ಗಳ ತರಗತಿ ಕೋಣೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.
Related Articles
ಇನೋಳಿ ಹಿ.ಪ್ರಾ.ಶಾಲೆಯ 2 ತರಗತಿ ಕೋಣೆಗಳ ದುರಸ್ತಿ 3 ಲಕ್ಷ ರೂ, ಬೋಳಾರ ಹಿ.ಪ್ರಾ.ಶಾಲೆಯ 2 ತರಗತಿ ಕೋಣೆಗಳ ದುರಸ್ತಿ 3 ಲಕ್ಷ ರೂ, ಕಲ್ಕಟ್ಟ ಸರಕಾರಿ ಪ್ರೌಢಶಾಲೆಗೆ ಕೊಠಡಿ ನಿರ್ಮಾಣ/ದುರಸ್ತಿ 2 ಲಕ್ಷ ರೂ, ಪಾವೂರು ಸರಕಾರಿ ಪ್ರೌಢ ಶಾಲೆ ಕೊಠಡಿ ನಿರ್ಮಾಣ/ದುರಸ್ತಿ 2 ಲಕ್ಷ ರೂ.ಬಿಡುಗಡೆಗೊಂಡಿದ್ದು, ಕಾಮಗಾರಿ ಪೂರ್ಣಗೊಂಡಿದೆ.
Advertisement
ರಾಜಗುಡ್ಡೆ ಹಿ.ಪ್ರಾ.ಶಾಲೆಗೆ ಒಂದು ಕೊಠಡಿ ನಿರ್ಮಾಣ 8.70 ಲಕ್ಷ ರೂ, ಮಳಲಿ ಸರಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ/ದುರಸ್ತಿ 8 ಲಕ್ಷ ರೂ, ಕುಪ್ಪೆ ಪದವು ಸರಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ/ದುರಸ್ತಿ 10 ಲಕ್ಷ ರೂ, ಗುರುಪುರ ಸರಕಾರಿ ಪ್ರೌಢಶಾಲೆಗೆ 26.50 ಲಕ್ಷ ರೂ.ಗಳ 2 ಕೊಠಡಿ ನಿರ್ಮಾಣ, ಕಲ್ಕಟ್ಟ ಸರಕಾರಿ ಪ್ರೌಢಶಾಲೆಗೆ 13.25 ಲಕ್ಷ ರೂ.ಗಳ ಒಂದು ಕೊಠಡಿ ನಿರ್ಮಾಣ, ಕಂಕನಾಡಿ ಹಿ.ಪ್ರಾ.ಶಾಲೆಯ 2 ಕೊಠಡಿ ದುರಸ್ತಿ 2ಲಕ್ಷ ರೂ, ಇನೋಳಿ ಹಿ.ಪ್ರಾ. ಶಾಲೆಯ 8.70 ಲಕ್ಷ ರೂ.ಗಳ ಕೊಠಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಜತೆಗೆ ಜಿಲ್ಲಾ ಪಂಚಾಯತ್ ಕಾರ್ಯಕ್ರಮದಡಿಯಲ್ಲಿ ಬೋಳಿ ಯಾರು, ಕೀನ್ಯ ಬೆಳರಿಂಗೆ, ಕಲ್ಕಟ್ಟ ಮಂಜುನಾಡಿ ಹಿ.ಪ್ರಾ. ಶಾಲೆಗಳು, ಪೆರ್ಮನ್ನೂರು, ಅದ್ಯಪಾಡಿ,ಕುಪ್ಪೆಪದವು, ಕಿನ್ನಿಕಂಬಳ, ಸೋಮೇಶ್ವರ ಉಚ್ಚಿಲ, ಮುಚ್ಚಾರು ಹಾಗೂ ಕಲ್ಲಾಡಿ ಯ ಸರಕಾರಿ ಪ್ರೌಢಶಾಲೆಗಳಿಗೆ ತಲಾ 70 ಸಾವಿರ ರೂ.ಗಳಂತೆ 7 ಲಕ್ಷ ರೂ. ಮಂಜೂರುಗೊಂಡು ಕಾಮಗಾರಿ ಮುಗಿದಿದೆ. ಜಿ.ಪಂ.ನ ಸಾಮಾಗ್ರಿ ಸರಬರಾಜು ಯೋಜನೆಯಲ್ಲಿ ಪಾವೂರು, ನ್ಯೂ ಪಡ್ಪು , ಮೂಡುಶೆಡ್ಡೆ, ಕಲ್ಲಟ, ಮುತ್ತೂರು ಸರಕಾರಿ ಪ್ರೌಢಶಾಲೆಗಳಿಗೆ ತಲಾ 69,800 ರೂ.ಗಳಂತೆ ಒಟ್ಟು 3.49 ಲಕ್ಷ ರೂ.ಬಿಡುಗಡೆಗೊಂಡಿದೆ.
ಶಾಲೆಗಳ ಅಭಿವೃದ್ಧಿವಿದ್ಯಾರ್ಥಿಗಳ ಬೇಸಗೆ ರಜೆ ಮುಗಿದು ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಕೇವಲ 2 ದಿನಗಳು ಮಾತ್ರ ಉಳಿದಿದ್ದು, ಎಲ್ಲ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ವಾಗತಿಸುವುದಕ್ಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳು ಕೂಡ ವಿದ್ಯಾರ್ಥಿ ಸ್ನೇಹಿಯಾಗಿ ಅಭಿವೃದ್ಧಿಗೊಳ್ಳಬೇಕಿದ್ದು, ಅದಕ್ಕಾಗಿ ಬಹುತೇಕ ಶಾಲೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ.