Advertisement

ವಿಜ್ಞಾನ-ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ

11:56 AM Sep 13, 2017 | |

ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನದ ನಡುವೆ ಅವಿನಾಭಾವ ಸಂಬಂಧವಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ವಿಕ್ರಮ್‌ ಸಾರಾಬಾಯ್‌ ಬಾಹ್ಯಾಕಾಶ ಕೇಂದ್ರದ ಮಾಜಿ ಅಧ್ಯಕ್ಷ ಡಾ.ಬಿ.ಎಸ್‌.ಸುರೇಶ್‌ ಹೇಳಿದರು. 

Advertisement

ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ನೀತಿ ಆಯೋಗದ ಅಟಲ್‌ ಇನ್ನೋವೇಷನ್‌ ಮಿಷನ್‌ ಅಡಿಯಲ್ಲಿ ಆರಂಭಿಸಲಾಗಿರುವ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಉದ್ಘಾಟಿಸಿ ಮಾತನಾಡಿದರು. ಅಮೆರಿಕಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಮೂಲಕ ಅಭಿವೃದ್ಧಿ ಹೊಂದಿವೆ.

ಹೀಗಾಗಿ ಭಾರತವೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಿದೆ. 2020ರ ವೇಳೆಗೆ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿ, ಅಭಿವೃದ್ಧಿ ಹೊಂದಲಿದೆ ಎಂಬುದು ಕಲಾಂ ಅವರ ನಿರೀಕ್ಷೆಯಾಗಿತ್ತು. ಹೀಗಾಗಿ ವಿಶ್ವದಲ್ಲೇ ಅತಿ ಹೆಚ್ಚಾಗಿರುವ ಭಾರತದ ಯುವಜನತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು. 

 ಶಿಸ್ತು-ಶ್ರಮ ಮೈಗೂಡಿಸಿಕೊಳ್ಳಿ: ಟಿಂಕರಿಂಗ್‌ ಲ್ಯಾಬ್‌ ಜತೆಗೆ ಹೊಸ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕೆಲಸ ಆಗಬೇಕು. ಆ ಮೂಲಕ ಭಾರತಕ್ಕೆ ಮತ್ತೂಮ್ಮೆ ನೋಬೆಲ್‌ ಪ್ರಶಸ್ತಿ ಲಭಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು. ಇದಕ್ಕಾಗಿ ಜೀವನದಲ್ಲಿ ಗಮನ, ಸ್ಪಷ್ಟತೆ, ಒಳಗೊಳ್ಳುವಿಕೆ, ಶಿಸ್ತು ಹಾಗೂ ಶ್ರಮವನ್ನು ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ಡಾ.ಬಿ.ಎಸ್‌.ಸುರೇಶ್‌ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಜಿಲ್ಲಾಧಿಕಾರಿ ರಂದೀಪ್‌ ಡಿ., ಶಾಲೆಯ ಸಂಸ್ಥಾಪಕ ಅಧ್ಯಕ್ಷ ಆರ್‌.ರಘು, ವಿಜ್ಞಾನ ವಿಭಾಗದ ಮುಖ್ಯಸ್ಥ ಸಿ.ಡಿ.ಪ್ರಸಾದ್‌, ಪ್ರಾಂಶುಪಾಲರಾದ ಎಲ್‌.ಸವಿತಾ ಇದ್ದರು.

Advertisement

ಎಲ್ಲಾ ಶಾಲೆ ಮಕ್ಕಳಿಗೂ ಮುಕ್ತ ಅವಕಾಶ: ವಿದ್ಯಾರ್ಥಿಗಳಲ್ಲಿ ವೃತ್ತಿಪರ ಮತ್ತು ವೈಯಕ್ತಿಕ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ನೀತಿ ಆಯೋಗ ದೇಶಾದ್ಯಂತ ಅಟಲ್‌ ಇನ್ನೋವೇಷನ್‌ ಮಿಷನ್‌ನಡಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ಗಳನ್ನು ಆರಂಭಿಸುತ್ತಿದೆ. ಕೌಟಿಲ್ಯ ಶಾಲೆಯಲ್ಲಿ ಆರಂಭಿಸಿರುವ ಲ್ಯಾಬ್‌ನಲ್ಲಿ ಪ್ರಮುಖವಾಗಿ ಎಲೆಕ್ಟ್ರಾನಿಕ್‌ ಸೆನ್ಸರ್‌, ಮೆಕ್ಯಾನಿಕಲ್‌ ಟೂಲ್ಸ್‌ ಯೂನಿಟ್‌, ಸಾಲ್ಡರಿಂಗ್‌ ಯೂನಿಟ್‌, 3ಡಿ ಪ್ರಿಂಟರ್‌, ಡ್ರೆಮೆಲ್‌ ಟೂಲ್‌ ಕಿಟ್‌, ಗ್ಲೂಗನ್‌ ಇತ್ಯಾದಿ ಉಪಕರಣಗಳನ್ನು ಇಡಲಾಗಿದೆ.

ಮೈಸೂರಿನಲ್ಲಿ ಪ್ರಥಮವಾಗಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಆರಂಭಿಸಲಾಗಿದ್ದು, ಈ ಲ್ಯಾಬ್‌ ನಿತ್ಯ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಕೇವಲ ಕೌಟಿಲ್ಯ ಶಾಲೆಯ ಮಕ್ಕಳು ಮಾತ್ರವಲ್ಲದೆ ನಗರದಲ್ಲಿರುವ ಯಾವುದೇ ಶಾಲೆಯ ವಿದ್ಯಾರ್ಥಿಗಳು ಪೋಷಕರೊಂದಿಗೆ ಲ್ಯಾಬ್‌ಗ ಭೇಟಿ ನೀಡಿ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next