Advertisement

Amrit sarovar yojana: ಅಮೃತ ಸರೋವರದಡಿ ಕೆರೆಗಳ ಅಭಿವೃದ್ಧಿ

03:37 PM Sep 07, 2023 | Team Udayavani |

ಕುಣಿಗಲ್‌: ಕೆರೆಗಳ ಸಮಗ್ರ ಅಭಿವೃದ್ಧಿಯ ಅಮೃತ ಸರೋವರ ಯೋಜನೆಯಡಿಯಲ್ಲಿ ಕುಣಿಗಲ್‌ ತಾಲೂಕಿನಲ್ಲಿ ಎರಡು ನೂತನ ಕೆರೆಗಳು ನಿರ್ಮಾಣ ಗೊಂಡಿವೆ, ಎರಡು ಕೆರೆಗಳು ಪ್ರಗತಿಯಲ್ಲಿವೆ. 17 ಕೆರೆಗಳು ಪುನಶ್ಚೇತನಗೊಳಿಸಲಾಗಿದೆ.

Advertisement

ಒಂದು ಸಾವಿರ ಕ್ಯೂಸೆಕ್‌ ನೀರು ಸಂಗ್ರಹಿಸುವ ಗುರಿಯನ್ನು ಹೊಂದ ಲಾಗಿದೆ. ಈ ಯೋಜನೆ ಗ್ರಾಮೀಣ ಭಾಗದ ರೈತರ ಕೃಷಿ ಹಾಗೂ ನಾಗರಿಕರ ಕುಡಿಯುವ ನೀರು, ಪರಿಸರ ಸಂರಕ್ಷಣೆಗೆ ಪೂರಕವಾಗಿದೆ.

ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯವನ್ನು ನಿರ್ಮಿಸು, ಬಂಧನಕ್ಕೆ ಒಳಗಾದ ಅನಾಥರನ್ನು ರಕ್ಷಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು ವಿಜಯ ನಗರದ ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರಮಾತ್ಯನ ಶಾಸನದಲ್ಲಿ ತಿಳಿಸಿರುವ ಹಾಗೆ ಅಜಾದಿಕಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಕನಸ್ಸಿನ ಕೂಸು ನರೇಗಾ ಯೋಜನೆಯಡಿ ಹೊಸ ಕೆರೆಗಳನ್ನು ನಿರ್ಮಿ ಸುವ ಯೋಜನೆಯೇ ಅಮೃತ ಸರೋವರ ಯೋಜನೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಹೊಸ ಕೆರೆಗಳನ್ನು ನಿರ್ಮಿಸಿ ಹರಿದು ಹೋಗುವ ನೀರನ್ನು ತಡೆದು, ಅಂತ ರ್ಜಲ ಹೆಚ್ಚಿಸಿ, ಮರು ಜೀವ ಪಡೆದು ಕೃಷಿ ಹಾಗೂ ಕುಡಿ ಯಲು ನೀರಿನ ಲಭ್ಯತೆ ಅಧಿಕಗೊಳಿಸುವ ದಿಸೆಯಲ್ಲಿ ತಾಲೂಕಿನಲ್ಲಿ ಈ ಯೋಜನೆಗೆ ಜೀವ ಕಳೆ ತಂದಿದೆ. ಹೊಸ ಕೆರೆಗಳ ನಿರ್ಮಾಣ: ಅಮೃತ ಸರೋವರ ಕೆರೆಯನ್ನು ನಿರ್ಮಿಸಲು ಗೋಮಾಳ, ಸರ್ಕಾರಿ ಜಾಗ, ಅರಣ್ಯ ಇಲಾಖೆ ಹೀಗೆ ನೀರು ನಿಲ್ಲುವ ಕನಿಷ್ಠ ಒಂದು ಎಕರೆಯಷ್ಟು ಜಾಗವನ್ನು ಗುರುತಿಸಲಾಗುತ್ತದೆ. ಸುಮಾರು 10 ಸಾವಿರ ಲೀಟರ್‌ನಷ್ಟು ನೀರನ್ನು ಹಿಡಿದಿಟ್ಟಿಕೊಳ್ಳುವ ಸಾಮರ್ಥ್ಯ ಹೊಂದುವಂತೆ, ಜನ ಹಾಗೂ ಪ್ರಾಣಿಪಕ್ಷಿಗಳಿಗೆ ಉಪಯೋಗವಾಗುವಂತೆ ಹೊಸದಾಗಿ ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕೆರೆ ತುಂಬಿ ಬೇರೊಂದು ಕೆರೆಗೆ ಸರಾಗವಾಗಿ ಹರಿಯುವಂತೆ ಕಾಲುವೆ ನಿರ್ಮಾಣ ಹಾಗೂ ಗ್ರಾಮಸ್ಥರು ವಾಯುವಿಹಾರ ಮಾಡಲು ವಾಕಿಂಗ್‌ ಪಾತ್‌ ನಿರ್ಮಾಣ, ಕೆರೆಯ ಸುತ್ತಾಮುತ್ತಲು ಪರಿಸರ ಉಳಿವಿಗಾಗಿ ಬೇವು, ಪೀಪಲ್‌ ಮತ್ತು ಆಲದಂತಹ ಮರಗಳನ್ನು ಬೆಳೆಸಿ ಹೊಸ ಕೆರೆಯನ್ನು ನಿರ್ಮಾಣ ಮಾಡಲಾಗುತ್ತದೆ.

ತಾಲೂಕಿನಲ್ಲಿ 21 ಅಮೃತ ಸರೋವರ: ತಾಲೂಕಿನ 36 ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ 2022- 23ನೇ ಆರ್ಥಿಕ ವರ್ಷದಲ್ಲಿ ಎಡಿಯೂರು ಹಾಗೂ ಕೆ.ಹೆಚ್‌.ಹಳ್ಳಿ ಗ್ರಾಮಗಳಲ್ಲಿ ಹೊಸದಾಗಿ ಎರಡು ಕೆರೆಗಳ ಕಾಮಗಾರಿ ಪೂರ್ಣಗೊಂಡಿವೆ. ಭಕ್ತರಹಳ್ಳಿ, ಉಜ್ಜಿನಿ ಗ್ರಾಮಗಳ ಕಾಮಗಾರಿ ಪ್ರಗತಿಯಲ್ಲಿದೆ. 17 ಕೆರೆಗಳು ಪುನಶ್ಚೇತನಗೊಳಿಸಲಾಗಿದೆ.

Advertisement

ಅಂತರ್ಜಲ ವೃದ್ಧಿ: ನರೇಗಾ ಯೋಜನೆಯಡಿ ಈಗಾ ಗಲೇ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಸಿಂಗೋನ ಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಂಗೋನಹಳ್ಳಿ ಕೆರೆ ಅಭಿ ವೃದ್ಧಿಯು ನರೇಗಾ ಯೋಜನೆಯಡಿ ಸುಮಾರು 33 ಲಕ್ಷ ರೂ., ವೆಚ್ಚದಲ್ಲಿ ಆರಂಭವಾಗಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಜಿನ್ನಾಗರ ಗ್ರಾಮ ಪಂಚಾಯ್ತಿ, ನಿಡಸಾಲೆ ಗ್ರಾಮ ಪಂಚಾಯ್ತಿಯಲ್ಲಿ ಕಾಮಗಾರಿ ಆರಂಭವಾ ಗಿದ್ದು, ಇದರಿಂದ ಹರಿದು ಹೊಗುವ ನೀರನ್ನು ತಡೆ ಗಟ್ಟಿ ಮಣ್ಣಿನ ಸವಕಳಿ ಹಾಗೂ ಅಂತರ್ಜಲ ವೃದ್ಧಿ ಗೊಳಿಸಿ ಪ್ರಾಣಿ ಪಕ್ಷಗಳಿಗೆ ನೆರವಾಗುವ ನಿರೀಕ್ಷೆ ಇದೆ. ಇದನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳು ವುದು ಅವಶ್ಯಕವಾಗಿದೆ.

ಪರಿಸರ ಸಂರಕ್ಷಣೆಗೆ ನೆರವು: ಸರೋವರ ನಿರ್ಮಾಣ ವಾಗುವ ದಡದಲ್ಲಿ ಅಂತರ್ಜಲ ಹಾಗೂ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಬೇವು, ಹಾಲದ ಮರಗಳ ಸಸಿ ಬೆಳೆಸುವುದಕ್ಕೆ ಸಹಾಯಧನವನ್ನು ನೀಡಲಾಗುತ್ತಿದೆ. ಪೂರ್ಣಗೊಂಡ ಅಮೃತ ಸರೋ ವರದ ದಡದಲ್ಲಿ ಆಗಸ್ಟ್‌ 15 ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಯೋಧ ಹಾಗೂ ಅವರ ಕುಟುಂಬದವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಅವರ ಕಡೆಯಿಂದ ಧ್ವಜರೋಹಣ ಮಾಡಿಸುವುದು, ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಸ್ಮರಣಾತ್ಮಕವಾಗಿ ಶಿಲಾಫ‌ಲಕ ನಿರ್ಮಿಸಿ, ಅವರ ಹೆಸರು ಬರೆಸಿ ಗೌರವ ಸಲ್ಲಿಸುವ ಮೂಲಕ ಸಂಭ್ರಮಿಸುವ ಕಾರ್ಯಕ್ರಮ ಇದಾಗಿದೆ.

ತಾಲೂಕಿನಲ್ಲಿ ಈಗಾಗಲೇ ಅಮೃತ ಸರೋವರ ಯೋಜನೆಯಡಿ ಹಲವು ಕಾಮಗಾರಿಗಳು ಪೂರ್ಣಗೊಂಡಿದೆ. ಹೊಸ ದಾಗಿ 10 ಸರೋವರಗಳನ್ನು ಗುರುತಿಸ ಲಾಗಿದ್ದು, ಇನ್ನೂ ಹೆಚ್ಚಿನ ಅಮೃತ ಸರೋ ವರ ಕಾಮಗಾರಿಗಳು ಮಾಡಲು ಉದ್ದೇಶಿಸ ಲಾಗಿದೆ. ಗ್ರಾಮಸ್ಥರು ಕಾಮಗಾರಿಗೆ ಸಹಕಾರ ನೀಡುವ ಮೂಲಕ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕು ಮತ್ತು ಯೋಜನೆ ಸದ್ಬಳಕ್ಕೆ ಮಾಡಿಕೊಳ್ಳಬೇಕು. -ಎ.ಜೋಸೆಫ್‌, ತಾಪಂ ಇಒ, ಕುಣಿಗಲ್‌

-ಕೆ.ಎನ್‌,ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next