Advertisement

ಈಶಾನ್ಯದಲ್ಲಿ ಅಭಿವೃದ್ಧಿ ಪರ್ವ

08:48 PM Feb 01, 2022 | Team Udayavani |

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲೂ ಆದ್ಯತೆ ಕೊಡಲಾಗಿದೆ. ಈಶಾನ್ಯದ 8 ರಾಜ್ಯಗಳ ಅಭಿವೃದ್ಧಿಗಾಗಿ “ಈಶಾನ್ಯಕ್ಕೆ ಪ್ರಧಾನಿ ಮಂತ್ರಿಗಳ ಅಭಿವೃದ್ಧಿ ಉಪಕ್ರಮ’ (PM DevINE) ಘೋಷಿಸಲಾಗಿದೆ.

Advertisement

ಗುವಾಹಟಿಯಲ್ಲಿ ಶಿಶು ವೈದ್ಯಕೀಯ ಮತ್ತು ಕ್ಯಾನ್ಸರ್‌ ನಿರ್ವಹಣೆಗೆ ಸೇವಾ ಕೇಂದ್ರಾ, ಎನ್‌ಇಸಿಟಿಎಆರ್‌ ಜೀವನೋಪಾಯ ಸುಧಾರಣೆ ಯೋಜನೆ, ವೈಜ್ಞಾನಿಕ ಸಾವಯುವ ಕೃಷಿಗೆ ಉತ್ತೇಜನ, ಐಜ್ವಾಲ್‌ ಬೈಪಾಸ್‌ ನಿರ್ಮಾಣ, ಸಿಕ್ಕಿಂನ ಸಂಗ-ಚೋಯೆಲಿಂಗ್‌ನಲ್ಲಿ ಪ್ಯಾಸೆಂಜರ್‌ ರೋಪ್‌ವೇ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ 64 ಕೋಟಿ ರೂ., ದಪ್ಪರ್‌ನಿಂದ ಭಾಲೆಯ್ದುಂಗಕ್ಕೆ ಕೇಬಲ್‌ ಕಾರು ರೋಪ್‌ವೇ ನಿರ್ಮಾಣಕ್ಕೆ ಹೆಚ್ಚುವರಿ 58 ಕೋಟಿ ರೂ., ಮಿಜೋರಾಂನಲ್ಲಿ ಬಂಬೂ ಲಿಂಕ್‌ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ. ಘೋಷಿಸಲಾಗಿದೆ.

PM DevINE ಯೋಜನೆಯ ಮೊದಲ ಹಂತದಲ್ಲಿ ಒಟ್ಟು 1500 ಕೋಟಿ ರೂ.ಗೆ ಯೋಜನೆ ಹಾಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next