Advertisement

ತಂತ್ರಜ್ಞಾನ ಬಳಸುವ ತಿಳಿವಳಿಕೆ ಬೆಳೆಸಿಕೊಳ್ಳಿ

12:37 PM Apr 28, 2017 | Team Udayavani |

ಮೈಸೂರು: ಆಧುನಿಕ ಯುಗದಲ್ಲಿ ಪ್ರತಿಯೊಂದರಲ್ಲೂ ತಂತ್ರಜಾnನದ ಮಹತ್ವ ಮುಖ್ಯವಾಗಿದ್ದು, ಅದನ್ನು ಬಳಸಿಕೊಳ್ಳುವ ರೀತಿಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಬೆಳೆಸಿ ಕೊಳ್ಳಬೇಕಿದೆ ಎಂದು ಸಂಗೀತ ವಿಶ್ವ ವಿದ್ಯಾನಿಲಯದ ಕುಲಸಚಿವ ಪೊ›. ನಿರಂಜನ ವಾನಳ್ಳಿ ಹೇಳಿದರು.

Advertisement

ಮೈಸೂರು ವಿವಿ ದೃಷ್ಟಿಕೇಂದ್ರದ ವಿದ್ಯಾರ್ಥಿಗಳಿಗಾಗಿ ಗುರುವಾರ ಮಾನಸಗಂಗೋತ್ರಿಯ ವಿಜಾnನ ಭವನದಲ್ಲಿ ಆಯೋಜಿಸಿದ್ದ ಸಹಾಯಕ ತಂತ್ರಜಾnನ ಮತ್ತು ಸಂಗೀತ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದವನಿಗೆ ಅಂಗ ವೈಕಲ್ಯತೆಯ ಬಗ್ಗೆ ಯಾವುದೇ ಅರಿವಿರುವುದಿಲ್ಲ. ಆದರೂ ಅಂಗ ವೈಕಲ್ಯತೆಯಿಂದ ಬಳಲುತ್ತಿರುವವರು ಎಲ್ಲರಂತೆ ಸಾಧನೆ ಮಾಡುವ ಉತ್ಸಾಹ ದಲ್ಲಿರುತ್ತಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಬೆರಳ ತುದಿಯಲ್ಲಿ ಎಲ್ಲವೂ ನಡೆಯಲಿದೆ.

ಇದರಿಂದಾಗಿ ತಂತ್ರಜಾnನವೇ ಇಲ್ಲದ ಸಮಯದಲ್ಲಿ ಎದುರಿಸಿದ ಸಂಕಷ್ಟಗಳು ಇಂದು ಯಾರಿಗೂ ಕಾಣದ ಸ್ಥಿತಿಗಳು ಬದಲಾಗಿದೆ. ಇನ್ನೂ ಸಂಗೀತದಲ್ಲಿ ದೃಷ್ಟಿ ದೋಷವಿರುವವರಿಗೆ ತಂತ್ರಜಾnನದ ಅವಶ್ಯಕತೆ ಪ್ರಸ್ತುತಕ್ಕೆ ಮುಖ್ಯವಾಗಲಿದೆ ಎಂದರು.

ವಯೋಲಿನ್‌ ವಾದಕ ವಿದ್ವಾನ್‌ ಡಾ. ಮೈಸೂರು ಎಂ. ಮಂಜುನಾಥ್‌ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಹಲವು ಬಗೆಯ ಕಾರ್ಯಾಗಾರಗಳು ನಡೆಯುತ್ತಿರುತ್ತವೆ. ಆದರೆ ದೃಷ್ಟಿ ವಿಶ್ವಾಸಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿರುವುದು ಇದೇ ಮೊದಲ ಬಾರಿಯಾಗಿದ್ದು, ಈ ಹಿನ್ನೆಲೆ ತಂತ್ರಜಾnನ ಮತ್ತು ಸಂಗೀತದ ಕಾರ್ಯಾಗಾರ ಸಂಗೀತ ಕ್ಷೇತ್ರದಲ್ಲಿರುವ ದೃಷ್ಟಿ ದೋಷವುಳ್ಳವರಿಗೆ ಬಹಳ ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದರು.

Advertisement

ದೃಷ್ಟಿ ಕೇಂದ್ರದ ಸಂಯೋಜಕರಾದ ಪೊ›. ಎನ್‌.ಉಷಾರಾಣಿ, ಮೈಸೂರು ವಿವಿ ಫೈನ್‌ ಆರ್ಟ್ಸ್ ವಿಭಾಗದ ಡಾ.ಕೆ.ಟಿ. ಉದಯ್‌ಕಿರಣ್‌, ವಿದ್ವಾಂನ್‌ ಡಾ. ಮೈಸೂರು ಎಂ.ಮಂಜುನಾಥ್‌, ಸಂಗೀತ ಪ್ರಾಧ್ಯಾಪಕ ವಿದ್ವಾಂನ್‌ ಎಸ್‌.ಆರ್‌. ಮಾರುತಿ ಪ್ರಸಾದ್‌, ಕೇಂದ್ರದ ಸಂಯೋಜಕ ಡಾ. ಕೃಷ್ಣ ಹೊಂಬಾಳ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next