Advertisement

ಎಚ್‌ಎಎಲ್‌ ವಿಮಾನ ನಿಲ್ದಾಣ ಬಳಕೆಗೆ ದೇವೇಗೌಡರ ಆಗ್ರಹ

11:59 AM Mar 05, 2017 | |

ಬೆಂಗಳೂರು: “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಯಿಂದಾಗಿ ಹಗಲಿನ ವೇಳೆ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಹೀಗಾಗಿ ಪ್ರಯಾಣಿಕರಿಗೆ ತೀರಾ ತೊಂದರೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಎಚ್‌ಎಎಲ್‌ ವಿಮಾನ ನಿಲ್ದಾಣ ಬಳಕೆ ಮಾಡಬೇಕು,” ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿತ್ಯ 426 ದೇಶೀ ವಿಮಾನ, 26 ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸುತ್ತಿದ್ದವು. ಇದೀಗ ಬಹುತೇಕ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಬಹಳ ಸಮಸ್ಯೆಯಾಗಿದೆ,” ಎಂದು ಅವರು ಹೇಳಿದರು.

“ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಡೆಸಲು ಯಾವುದೇ ಅಡ್ಡಿಯಿಲ್ಲ. ಎಚ್‌ಎಎಲ್‌ ಅಧ್ಯಕ್ಷರೂ ಒಪ್ಪಿದ್ದಾರೆ. ನಾನೂ ಮಾತನಾಡಿದ್ದೇನೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವರು  ಈ ಬಗ್ಗೆ ವಿಶೇಷ ಗಮನ ನೀಡಬೇಕು,” ಎಂದು ಆಗ್ರಹಿಸಿದರು. “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೂಂದು ವಿಮಾನ ನಿಲ್ದಾಣ ಬರುವಂತಿಲ್ಲ ಎಂಬುದು ಸರಿಯಲ್ಲ.

ಲಂಡನ್‌, ನ್ಯಾಯಾರ್ಕ್‌ನಲ್ಲಿ ಎಷ್ಟು ವಿಮಾನ ನಿಲ್ದಾಣಗಳಿವೆ. ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಮತ್ತೂಂದು ವಿಮಾನ ನಿಲ್ದಾಣ ಅಗತ್ಯವಿದೆ. ಎಚ್‌ಎಎಲ್‌ಅನ್ನೂ  ಸಹ ಬಳಕೆ ಮಾಡಬಹುದು, ಇಲ್ಲವೇ  ಇನ್‌ಫೋಸಿಸ್‌ ನಾರಾಯಣಮೂರ್ತಿ ಅವರು ಹೇಳಿರುವಂತೆ ಹೊಸೂರು ರಸ್ತೆಯಲ್ಲೂ ವಿಮಾನ ನಿಲ್ದಾಣ ಮಾಡಬಹುದು,” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next