Advertisement

ಅರಸು, ರಾಜೀವ್‌ ಗಾಂಧಿ ವಿಶಿಷ್ಟ ನಾಯಕರು

12:33 PM Aug 22, 2020 | Suhan S |

ಮಾಗಡಿ: ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಇವರು ಈ ದೇಶದ ಅಭಿವೃದ್ಧಿಪಥದತ್ತ ಕೊಂಡೊಯ್ಯದ ವಿಶಿಷ್ಟ ನಾಯಕರು. ಇವರ ಹೆಸರಿನಲ್ಲಿ ಫ‌ಲ ಬಿಡುವ ಸಸಿ ವಿತರಿಸಿ ವಿಶಿಷ್ಟವಾಗಿ ಜನ್ಮ ಜಯಂತಿ ಆಚರಿಸಲಾಗುತ್ತಿದೆ ಎಂದು ಜಿಪಂ ದಿಶಾ ಕಮಿಟಿ ಸದಸ್ಯ ಜೆ.ಪಿ.ಚಂದೆ ತಿಳಿಸಿದರು.

Advertisement

ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಬ್ಲಾಕ್‌ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಹಾಗೂ ಎಚ್‌.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಏರ್ಪಡಿಸಿದ್ದ ಇಬ್ಬರು ನಾಯಕರ ಜಯಂತ್ಯುತ್ಸವದಲ್ಲಿ ಸಸಿ ವಿತರಿಸಿ ಅವರು ಮಾತನಾಡಿದರು. ಎಚ್‌.ಸಿ.ಬಾಲಕೃಷ್ಣ ಅವರ ನಾಯಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಿ ಸಸಿ ವಿತರಿಸಲಾಗಿದೆ. ಈ ದೇಶದ ಆಶಾಕಿರಣ ಇಬ್ಬರು ನಾಯಕರು ನಮ್ಮೆಲ್ಲರಿಗೂ ದಾರಿದೀಪವಾಗಿದ್ದಾರೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಪಂ ಸದಸ್ಯ ಎಚ್‌.ಎನ್‌.ಅಶೋಕ್‌, ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ತಾಪಂ ಅಧ್ಯಕ್ಷ ನಾರಾಯಣಪ್ಪ, ಧನಂಜಯ ನಾಯಕ್‌, ವೆಂಕಟೇಶ್‌, ತಾಪಂ ಮಾಜಿ ಸದಸ್ಯ ಸಿ.ಜಯರಾಂ, ಯುವ ಕಾಂಗ್ರೆಸ್‌ ಅಧ್ಯಕ್ಷ ಯತೀಶ್‌, ಪ್ರಧಾನ ಕಾರ್ಯದರ್ಶಿ ಕೆ.ಬಿ. ಶೇಖರ್‌, ನವೀನ್‌, ಪ್ರವೀಣ್‌ ಮಾತನಾಡಿದರು. ಜಿಪಂ ಮಾಜಿ ಸದಸ್ಯ ವಿಜಯಕುಮಾರ್‌, ಎಚ್‌.ಜೆ.ಪುರುಷೋತ್ತಮ್‌, ಡೂಂ ಲೈಟ್‌ ನರಸಿಂಹಮೂರ್ತಿ, ಬಸವರಾಜು, ಗಿರಿಯಪ್ಪ, ತೋ.ವಿ.ಗಿರೀಶ್‌, ಜಿ.ಕೃಷ್ಣ,ಚಂದ್ರಣ್ಣ, ಎಂ.ಕೆ. ಧನಂಜಯ, ತಿಪ್ಪಸಂದ್ರ ಹರೀಶ್‌, ಪ್ರಶಾಂತ್‌, ತೇಜಸ್‌ಕುಮಾರ್‌, ಕಿರಣ್‌, ಬೆಳಗವಾಡಿ  ರಂಗನಾಥ್‌, ಕುಮಾರ್‌, ಕಾಂತರಾಜು ಸೀಗೇಕುಪ್ಪೆ ಶಿವಣ್ಣ, ಕೋರಮಂಗಲ ಶ್ರೀನಿವಾಸ್‌, ವೆಂಕಟೇಶ್‌, ಜಗದೀಶ್‌, ಹೊನ್ನಪ್ಪ, ರವೀಂದ್ರ, ಕುಮಾರ್‌, ವೇಣುಗೋಪಾಲ್‌, ಎಂ.ಎಚ್‌.ಸುರೇಶ್‌, ನಾಗರಾಜು, ದೀಪು, ರಾಮಣ್ಣ, ಗೊಲ್ಲರಪಾಳ್ಯದ ಜಯರಾಮು, ಇನಾಯಿತ್‌ ಉಲ್ಲಾ, ಕಮಲಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next