Advertisement

ದೇವನಹಳ್ಳಿ: ಸಮುದಾಯಕ್ಕೆ ಲಗ್ಗೆಯಿಟ್ಟಿತೇ ಕೋವಿಡ್‌ 19?

07:24 AM Jul 10, 2020 | Lakshmi GovindaRaj |

ದೇವನಹಳ್ಳಿ: ಕೋವಿಡ್‌ 19 ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ತಾಲೂಕಿನಲ್ಲಿ 10 ಕೋವಿಡ್‌ 19 ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಮೂಲಕ ಸಮುದಾಯಕ್ಕೂ ಲಗ್ಗೆ ಇಟ್ಟಿತೆ ಎಂಬ ಅನುಮಾನ ಮೂಡುತ್ತಿದೆ ಎಂದು ಜಿಲ್ಲಾ  ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ತಿಳಿಸಿದ್ದಾರೆ. ಕಳೆದ ಗುರುವಾರದಷ್ಟೇ ಶಾಸಕರಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದರಿಂದ ಕೋವಿಡ್‌ 19 ಪರೀಕ್ಷೆಗೆ ಒಳಪಟ್ಟಿದ್ದರು.

Advertisement

ಆದರೆ ದೇವನಹಳ್ಳಿ ಶಾಸಕರಿಗೆ ನೆಗೆಟಿವ್‌ ವರದಿ ಬಂದಿದೆ.  ಎಡಿಸಿಯ ಕಾರು ಚಾಲ ಕನಿಗೆ ಕೋವಿಡ್‌ 19 ಸೊಂಕು ತಗುಲಿದೆ. ನಗರದ 2ನೇ ವಾರ್ಡಿನ ಶಾಂತಿ ನಗರದ 86 ವರ್ಷದ ವೃದರಿಗೆ, ಗೋರಿಬಾಗಿಲಿನ ಸೋಂಕಿತನ ಸಂಪರ್ಕದಿಂದ 36 ವರ್ಷದ ಶಿಕ್ಷಕರೊಬ್ಬರಿಗೆ, ಯರ್ತಿಗಾನಹಳ್ಳಿ  ಗ್ರಾಮದ ಸೋಂಕಿತನ ಸಂಪರ್ಕದಿಂದ 46 ವರ್ಷದ ವ್ಯಕ್ತಿ,

ಎಡಿಸಿ ಕಾರು ಚಾಲಕ 47 ವರ್ಷದ ವ್ಯಕ್ತಿಗೆ, ಮಂಡೂರು ಗ್ರಾಮದ 54 ವರ್ಷದ ವ್ಯಕ್ತಿಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆ ಮತ್ತು ತಾಲೂಕಿನಲ್ಲಿ ಕೋವಿಡ್‌ 19 ದಿನದಿಂದ ದಿನ ಹೆಚ್ಚಾಗುತ್ತಲೇ ಹೋಗು ತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 7 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 334 ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 85 ಪ್ರಕರಣಗಳು ಬೇರೆ ಜಿಲ್ಲೆ ಮತ್ತು ಬೇರೆ ರಾಜ್ಯದವರಾಗಿರುತ್ತಾರೆ.

ಉಳಿದ  249 ಪ್ರಕರಣಗಳು ಜಿಲ್ಲೆಯ ನಿವಾಸಿಗಳಾಗಿರುತ್ತಾರೆ. ಈ 334 ಪ್ರಕರಣಗಳಲ್ಲಿ 104 ಪ್ರಕ ರಣಗಳು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿರು ತ್ತಾರೆ. 223 ಪ್ರಕರಣಗಳ ರೋಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.  ಅವರ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ದೇವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next