ಮುಂಬಯಿ: ದೇವಾಡಿಗ ಮಹಿಳಾ ವಿಭಾಗದ ಆಟಿಡೊಂಜಿ ದಿನ ಕಾರ್ಯಕ್ರಮವು ಜು. 28 ರಂದು ಸಂಘದ ದಾದರ್‌ನಲ್ಲಿರುವ ದೇವಾಡಿಗ ಸೆಂಟನರ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಘದ ಅಧ್ಯಕ್ಷರಾದ ರವಿ ದೇವಾಡಿಗ, ಉಪಾಧ್ಯಕ್ಷ ಸುರೇಶ್ ರಾವು, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷರಾದ ಗೋಪಾಲ್ ಮೊಲಿ, ಕೆ. ಕೆ. ಮೋಹನ್‌ದಾಸ್, ಎಚ್. ಮೋಹನ್‌ದಾಸ್, ವಾಸು ದೇವಾಡಿಗ, ಕೋಶಾಧಿಕಾರಿ ದಯಾನಂದ ದೇವಾಡಿಗ, ಜೊತೆ ಕಾರ್ಯದರ್ಶಿ ಮಾಲತಿ ಮೊಲಿ ಉಪಸ್ಥಿತರಿದ್ದರು.
ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಆರ್. ಮೊಲಿ ಅವರು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಗೂ ನೆರೆದ ಅತಿಥಿ-ಗಣ್ಯರನ್ನು, ಮಹಿಳಾ ಸದ್ಯಸರನ್ನು ಸ್ವಾಗತಿಸಿ ಆಟಿದ ತಿಂಗಳ ಅಡುಗೆಗಳನ್ನು ತಯಾರಿಸಿ ತಂದ ಎÇÉಾ ಮಹಿಳೆಯರನ್ನು ಅಭಿನಂದಿಸಿ ಸಂಘದ ಎÇÉಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ತುಳುವ ಸಂಸ್ಕೃತಿ ಆಚಾರ-ವಿಚಾರಗಳನ್ನು ಅಳವಡಿಸಿ ತುಳು ಭಾಷೆಯನ್ನು ಉಳಿಸಬೇಕೆಂದು ಕರೆಯಿತ್ತರು.
ಸಂಘದ ಅಧ್ಯಕ್ಷರಾದ ರವಿ ದೇವಾಡಿಗ ಅವರು ಮಾತನಾಡಿ, ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪಡೆದುಕೊಳ್ಳಬೇಕು. ಆಗಸ್ಟ್ 15 ರಂದು ನಡೆಯುವ ವಾರ್ಷಿಕ ಮಹಾಸಭೆಗೆ ಎಲ್ಲರೂ ಹಾಜರಿರುವಂತೆ ವಿನಂತಿಸಿದರು.
ಮಾಜಿ ಅಧ್ಯಕ್ಷರಾದ ವಾಸು ದೇವಾಡಿಗ, ಎಚ್. ಮೋಹನ್‌ದಾಸ್, ಕೆ. ಕೆ. ಮೋಹನ್‌ದಾಸ್, ಗೋಪಾಲ ಮೊಲಿ, ಮಾತನಾಡಿ ಶುಭಹಾರೈಸಿದರು. ಮಹಿಳೆಯರಿಗೆ ರಸಪ್ರಶ್ನೆ, ಸಾಮಾನ್ಯ ಜ್ಞಾನ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ಪ್ರಥಮ ವನಿತಾ ಆರ್. ದೇವಾಡಿಗ, ದ್ವಿತೀಯ ಶಾಂತಾ ಪಿ. ದೇವಾಡಿಗ, ತೃತೀಯ ನಿರ್ಮಲಾ ದೇವಾಡಿಗ, ಇಂಗ್ಲಿಷ್ ವಿಭಾಗದಲ್ಲಿ ಪ್ರಥಮ ಡಾ| ಪ್ರವೀಣಾ. ಎನ್. ಉಳ್ಳಾಲ್, ದ್ವಿತೀಯ ಭಾರತಿ ಶೇರಿಗಾ‚ರ್, ತೃತೀಯ ಸುಜಾತಾ ಶೇರಿಗಾರ್ ಅವರು ಬಹುಮಾನಗಳನ್ನು ಪಡೆದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಆಟಿಯ ವಿಶೇಷತೆಯ ಬಗ್ಗೆ ಪ್ರಶ್ನೆಗಳಲ್ಲಿ ಶುಭಾ ದೇವಾಡಿಗರು ಬಹುಮಾನವನ್ನು ತನ್ನದಾಗಿಸಿಕೊಂಡರು. ಆಟಿ ತಿಂಗಳ ವಿಶೇಷತೆಯನ್ನು ಸಾರುವ ಸುಮಾರು 45 ಬಗೆಯ ಅಡುಗೆ ತಿನಿಸುಗಳನ್ನು ಪ್ರಸ್ತುತಪಡಿಸಲಾಯಿತು. ತುಳು ಪಾಡªನವನ್ನು ಹೇಮಾ ದೇವಾಡಿಗ, ಲಕ್ಷ್ಮೀ ದೇವಾಡಿಗ ಹಾಗೂ ಲೋಲಾಕ್ಷೀ ದೇವಾಡಿಗರು ಹಾಡಿದರು.
ಆಟಿಯ ವಿಶೇಷತೆಗಳ ಬಗ್ಗೆ ಉಪಾಧ್ಯಕ್ಷೆ ರಂಜಿನಿ ಮೊಲಿ ಅವರು ವಿವರಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಸುಜಾತಾ ದೇವಾಡಿಗರು ಪ್ರಾರ್ಥನೆಗೈದರು. ಕಾರ್ಯಕ್ರಮ ಯಶಸ್ವಿಯಾಗಲು ಸಂಘದ ಕ್ರೀಡಾಕಾರ್ಯಾಧ್ಯಕ್ಷೆ ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುರೇಖಾ ದೇವಾಡಿಗರು ಸಹಕರಿಸಿದರು. ಜೊತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್ ವಂದಿಸಿದರು.