Advertisement
ಸಮಿತಿಯಿ ಕಾರ್ಯಾಧ್ಯಕ್ಷ ಅಶೋಕ್ ದೇವಾಡಿಗ ಇವರ ಅಧ್ಯಕ್ಷತೆಯಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ರಾಜು ದೇವಾಡಿಗ, ಪ್ರವೀಣ್ ಸಾಲ್ಯಾನ್, ಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ಕೋಶಾಧಿಕಾರಿ ಯಾದವ ದೇವಾಡಿಗ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Related Articles
Advertisement
ದೇವಾಡಿಗ ಸಂಘದ 2016-2019 ನೇ ಸಾಲಿನ ನೂತನ ಅಧ್ಯಕ್ಷ ರವಿ ಎಸ್. ದೇವಾಡಿಗ ಹಾಗೂ ಜಯಂತಿ ಮೊಲಿ ಇವರನ್ನು ಪುಷ್ಪಗುತ್ಛವನ್ನಿತ್ತು, ಶಾಲು ಹೊದಿಸಿ ಗೌರವಿಸಲಾಯಿತು. ಕಳೆದ 12 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಂಗಳಾ ಶ್ರೀನಿವಾಸ ಶೇರಿಗಾರ್ ಅವರನ್ನು ಅಭಿನಂದಿಸಲಾಯಿತು. ನವಿಮುಂಬಯಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪಿ. ವಿ. ಎಸ್. ಮೊಲಿ, ಭಾಂಡೂಪ್ ಮತ್ತು ಸಿಟಿ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ವಿಶ್ವನಾಥ್ ದೇವಾಡಿಗ, ಹೇಮನಾಥ ದೇವಾಡಿಗ ಹಾಗೂ ಮಾಲತಿ ಮೊಲಿ, ಜಯಂತಿ ಮೊಲಿ, ರಂಜನಿ ಮೊಲಿ, ಸುರೇಖಾ ದೇವಾಡಿಗ, ನಿತೇಶ್ ದೇವಾಡಿಗ,ಯುವ ವಿಭಾಗದ ಮಾರ್ಗದರ್ಶಕ ನರೇಶ ದೇವಾಡಿಗ ಇವರು ಮಾತನಾಡಿದರು.
ಆಟಿ ತಿಂಗಳ ವಿಶೇಷತೆ, ಆಟಿ ಕಳಂಜ ಇನ್ನಿತರ ವಿಷಯಗಳ ಬಗ್ಗೆ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೀಳಾ ಶೇರಿಗಾರ್ ಮಾಹಿತಿ ನೀಡಿದರು. ವಿವಿಧ ಸ್ಪರ್ಧೆಗಳ ಬಹುಮಾನದ ಪ್ರಾಯೋಜಕತ್ವವನ್ನು ಮಮತಾ ದೇವಾಡಿಗ ವಹಿಸಿದ್ದರು. ಸುಜಾತಾ ಶೇರಿಗಾರ್ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರು. ಮಾ| ಶ್ರೀಧಿತಾ ದೇವಾಡಿಗ, ಕು| ಪ್ರಾಚಿ ದೇವಾಡಿಗ, ಕು| ಗೌರವಿ ಶೇರಿಗಾರ್, ಗೀತಾ ದೇವಾಡಿಗ, ನಯನಾ ದೇವಾಡಿಗ, ಕವಿತಾ ದೇವಾಡಿಗ, ರಂಜಿನಿ ಮೊಲಿ ಇವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ಆಟಿ ತಿಂಗಳ ತಿಂಡಿ-ತಿನಸುಗಳನ್ನು ತಯಾರಿಸಿ ಪ್ರದರ್ಶಿಸಿದ ಸದಸ್ಯೆಯರನ್ನು ಗೌರವಿಸಲಾಯಿತು. ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು. ಕಾರ್ಯಕ್ರಮವನ್ನು ಪ್ರಮಿಳಾ ಶೇರಿಗಾರ್ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸೀಮಾ ದೇವಾಡಿಗ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.