Advertisement
ವನಿತಾ ರವಿ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಆರ್. ಮೊಲಿ, ಉಪ ಕಾರ್ಯಾಧ್ಯಕ್ಷೆ ಜಯಂತಿ ಎಂ. ದೇವಾಡಿಗ, ಪೂರ್ಣಿಮಾ ಡಿ. ದೇವಾಡಿಗ, ಕಾರ್ಯದರ್ಶಿ ಪ್ರಮೀಳಾ ವಿ. ಶೇರಿಗಾರ್, ಸಲಹೆಗಾರ್ತಿ ಜಯಂತಿ ಆರ್. ಮೊಲಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಜತೆ ಕೋಶಾಧಿಕಾರಿ ಸುರೇಖಾ ಎಚ್. ದೇವಾಡಿಗ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗೋಪಾಲ್ ಮೊಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ಮಧ್ಯೆ ಆಚರಿಸುವ ಅರಸಿನ ಕುಂಕುಮದ ಬಗ್ಗೆ ಮಾಹಿತಿಯನ್ನು ಜಯಂತಿ ದೇವಾಡಿಗ ಮತ್ತು ಸುರೇಖಾ ಮೊಲಿ ವಿವರಿಸಿದರು. ಕಾರ್ಯಾಧ್ಯಕ್ಷೆ ರಂಜನಿ ಮೊಲಿ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಸಾವಿತ್ರಿಬಾಯಿ ಫುಲೆಯವರು ಮಹಿಳಾ ಸಂಘಟನೆಯನ್ನು ರೂಪಿಸಿ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಲು ಮಹಿಳೆಯರನ್ನು ಪ್ರೇರೇಪಿಸಿದರು. ನಾವು ಕೂಡ ನಮ್ಮ ಸಂಘದ ಅಭಿವೃದ್ಧಿಗಾಗಿ ಸಹಕರಿಸಬೇಕು ಎಂದು ತಿಳಿಸಿದರು.
Related Articles
Advertisement
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಭಾಂಡೂಪ್ ವಲಯದ ವೆಂಕಟೇಶ್ ದೇವಾಡಿಗ, ರಾಜೇಶ್ ದೇವಾಡಿಗ, ಸಂಘದ ಸ್ಥಳೀಯ ಸಮನ್ವಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ದೇವಾಡಿಗ, ಉಷಾ ದೇವಾಡಿಗ, ಸುಜಯಾ ದೇವಾಡಿಗ, ಲತಾ ಮೊಲಿ, ಕುಸುಮಾ ದೇವಾಡಿಗ, ರೇಖಾ ದೇವಾಡಿಗ, ವಿಜಯಲಕ್ಷ್ಮೀ ದೇವಾಡಿಗ ಅವರು ಉಪಸ್ಥಿತರಿದ್ದರು. ಕುಸುಮಾ ದೇವಾಡಿಗ ಪ್ರಾರ್ಥನೆಗೈದರು. ಕಾರ್ಯದರ್ಶಿ ಪ್ರಮೀಳಾ ವಿ. ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಿತೇಶ್ ದೇವಾಡಿಗ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.