Advertisement

Uv Fusion: ಅಭಿವೃದ್ಧಿ ನೆಪದಲ್ಲಿ ನಿಸರ್ಗದ ನಾಶ  

02:47 PM Oct 31, 2023 | Team Udayavani |

ದಿನದಿಂದ ದಿನಕ್ಕೆ ಜಗತ್ತು ವೇಗವಾಗಿ ಆಧುನಿಕತೆ ಅಳವಡಿಸಿಕೊಳ್ಳುತ್ತಿದೆ. ಅದರಲ್ಲೂ ಪ್ರಸ್ತುತ ತಂತ್ರಜ್ಞಾನದಲ್ಲಿ ಹೊಂದುತ್ತಿರುವ ಅಭಿವೃದ್ಧಿ ತೀವ್ರಗತಿಯಲ್ಲಿದೆ. ಇತ್ತೀಚೆಗೆ ಇಸ್ರೊ ನಡೆಸಿದ ಚಂದ್ರಯಾನ-3, ಸೂರ್ಯಯಾನ ದೇಶದ ಹೆಮ್ಮೆಯ ಸಂಗತಿಯಾಗಿದ್ದು, ಭಾರತ ಜಗತ್ತೇ ತಿರುಗಿ ನೊಡುವಂತಹ ಸಾಧನೆ ಮಾಡಿದೆ. ಇದು ಪ್ರತಿಯೊಬ್ಬ ಭಾರತೀಯ ಖುಷಿಪಡುವ ವಿಷಯವಾಗಿದೆ. ಇಂತಹ ಉತ್ತಮ ಕಾರ್ಯಗಳನ್ನು ಹೊರತುಪಡಿಸಿ ನಮ್ಮ ನಾಗರಿಕತೆ ಬೇರೆ ವಿಚಾರಗಳಲ್ಲಿ ಬೆಳವಣಿಗೆ ಆಗುತ್ತಿರುವ ತೀವ್ರತೆ, ಹಾಗು ನಡೆಸುತ್ತಿರುವ ಹೊಸ ಸಂಶೊದನೆಗಳನ್ನು ಕಂಡೆರೆ ಸಂತೊಷದ ಜತೆ ಎಲ್ಲೊ ಒಂದು ಕಡೆ ಭಯ ಕಾಡುತ್ತಿದೆ.

Advertisement

ಮಾನವ ಉಳಿದ ಪ್ರಾಣಿಗಳಿಗಿಂತ ಬುದ್ಧಿವಂತ. ಆದರೆ ನಮಗಿಂತ ಹೆಚ್ಚು ಶಕ್ತಿಯುತವಾದದ್ದು ಎಂದರೆ ಪ್ರಕೃತಿ. ಹೌದು, ನಾವು ಎಷ್ಟೇ ಜ್ಞಾನ ಹೊಂದಿದ್ದರು ನಿಸರ್ಗದ ನಿಯಮವನ್ನು ಮಿರಿ ಏನನ್ನೂ ಮಾಡಲು ಸಾಧ್ಯವಿಲ್ಲ. ಆಧುನಿಕತೆ ಎಂಬುದು ಅಭಿವೃದ್ಧಿಯ ಪತದಲ್ಲಿ ಇರಬೇಕೆ ಹೊರತು ವಿನಾಶದತ್ತ ಅಲ್ಲ. ಆದರೆ ಮನುಷ್ಯ ಮಾಡುತ್ತಿರುವುದು ಅದೇ ಕಾಯಕ. ಉದ್ದರಿಸುವ ಹೆಸರಲ್ಲಿ ಪಕೃತಿಯನ್ನು ಬಳಸಿಕೊಂಡು ಅದನನ್ನೇ ನಾಶ ಮಾಡಲು ಮುಂದಾಗುತ್ತಿದ್ದಾನೆ.

ಮಣ್ಣಿನಲ್ಲಿ ಲಿನವಾಗದ, ಉಪಯೋಗಿಸಿ ಬಿಟ್ಟ ಪ್ಲಾಸ್ಟಿಕ್‌, ರಾಸಾಯನಿಕ, ಲೊಹಗಳು, ವಿಷಪೂರಿತ ಮತ್ತು ತ್ಯಾಜ್ಯ ವಸ್ತು ಮುಂತಾದವು ಪರಿಸರದ ಜತೆ ಮಾನವನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬಿರುತ್ತಿರುವುದು ಬುದ್ಧಿವಂತ ಪ್ರಾಣಿಗೆ ಇದು ಅರ್ಥವಾಗದೆ ಹೊಗಿದೆ. ಈಗಾಗಲೆ ಮನುಷ್ಯನಿಗೆ ನಿಸರ್ಗ ಅನೇಕ ಅವಕಾಶಗಳನ್ನು ನೀಡಿದೆ. ಇನ್ನಾದರು ತಮ್ಮ ತಪ್ಪನ್ನು ಶೀಘ್ರದಲ್ಲಿ ಅರಿತು ತಿದ್ದಿಕೊಳ್ಳದೇ ಹೊದಲ್ಲಿ ಎಲ್ಲರೂ ಪ್ರಕೃತಿಯಿಂದ ಸರಿಯಾದ ಪಾಠ ಕಲಿಯುವುದಂತು ಕಂಡಿತ.  –ಪೂಜಾ ಹಂದ್ರಾಳ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next