Advertisement

ಜಗತ್ತಿನಲ್ಲಿ ಬಾಂಗ್ಲಾದೇಶ ಹಿಂದೂಗಳಿಗೆ ಅತ್ಯಂತ ಸುರಕ್ಷಿತ ದೇಶವಂತೆ!

02:27 PM Nov 13, 2017 | Team Udayavani |

ಢಾಕಾ:ಹಿಂದೂಗಳ ಮನೆಗೆ ಬೆಂಕಿ ಹಚ್ಚಿರುವ ಘಟನೆಯ ತರುವಾಯ ಢಾಕಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಸುರಕ್ಷತೆ ಇಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಹಿಂದೂಗಳಿಗೆ ಬಾಂಗ್ಲಾದೇಶ ಅತ್ಯಂತ ಸುರಕ್ಷಿತ ಎಂದು ಬಾಂಗ್ಲಾದೇಶದ ಕಾನೂನು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇಡೀ ಜಗತ್ತಿನಲ್ಲಿ ಹಿಂದೂಗಳಿಗೆ ಬಾಂಗ್ಲಾದೇಶ ಅತ್ಯಂತ ಸುರಕ್ಷಿತವಾದ ದೇಶವಾಗಿದೆ ಎಂದು ಅನಿಸುಲ್ ಹಖ್ ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ತುಂಬಾ ಸುರಕ್ಷಿತವಾಗಿದೆ ಎಂದು ಹೇಳಿದರು.

ಹಿಂದೂ ಯುವಕನ ಫೇಸ್ಬುಕ್ ಪೋಸ್ಟ್ ಖಂಡಿಸಿ ಸುತ್ತಮುತ್ತಲ ಆರೇಳು ಗ್ರಾಮಗಳಿಂದ ಅಂದಾಜು 20 ಸಾವಿರ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿತ್ತು. ಢಾಕಾದಿಂದ 300 ಕಿ.ಮೀ. ದೂರದಲ್ಲಿರುವ ರಂಗ್ಪುರ್ ಜಿಲ್ಲೆಯ ಥಾಕುರ್ಪಾರಾ ಗ್ರಾಮದಲ್ಲಿ 30 ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next