Advertisement

ಪ್ರಜಾಪ್ರಭುತ್ವಕ್ಕೆ ಅಸಹ್ಯ ತರುವ ವಂಶಪಾರಂಪರ್ಯ: ನಾಯ್ಡು

07:45 AM Sep 17, 2017 | Team Udayavani |

ನವದೆಹಲಿ: ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಬೆನ್ನಲ್ಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಗರಂ ಆಗಿದ್ದಾರೆ. “”ಪ್ರಜಾಪ್ರಭುತ್ವದಲ್ಲಿ ವಂಶಪಾರಂಪರ್ಯ ಅಸಹ್ಯ ಹುಟ್ಟಿಸು ವಂತದ್ದು” ಎಂದಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯಾರೊಬ್ಬರ ಹೆಸರು ಪ್ರಸ್ತಾಪಿಸದೇ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು. 

Advertisement

ವಂಶಪಾರಂಪರ್ಯ ಮತ್ತು ಪ್ರಜಾಪ್ರಭುತ್ವ ಒಂದೇ ದೋಣಿಯಲ್ಲಿ ಸಾಗಲು ಸಾಧ್ಯವಿಲ್ಲ. ಭಾರತದಲ್ಲಿ ವಂಶಪಾ ರಂಪರ್ಯ ಇಡೀ ವ್ಯವಸ್ಥೆಯನ್ನೇ ದುರ್ಬಲಗೊಳ್ಳುತ್ತಿದೆ. ಆದರೆ ಕೆಲವರಿಗೆ ಅದೇ ಅಪ್ಯಾಯಮಾನ ಎಂದಿದ್ದಾರೆ. ಇದೇ ವೇಳೆ, “ಕಾಂಗ್ರೆಸ್‌ನಲ್ಲಿ ಬದಲಾವಣೆಗೆ ಪ್ರಯತ್ನ ನಡೆಸುತ್ತೇನೆ. ನೀವೂ ಕೂಡ ಕಾಂಗ್ರಸ್‌ ನೋಡಿರುತ್ತೀರಿ. ಅಲ್ಲಿಯೂ ರಾಜವಂಶಸ್ಥ ಕುಟುಂಬಗಳಿಂದ ಹೊರತಾದ ಸಾಕಷ್ಟು ಮಂದಿ ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ಇದಕ್ಕೆ ಉದಾಹರಣೆ ನೀಡಬಲ್ಲೆ. ಈ ಹಿಂದೆಯೂ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಿದ್ದೆ’  ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next