Advertisement
ಕರುನಾಡಿನ ಬಹಳಷ್ಟು ಕನ್ನಡಿಗರಿಗೆ ಒಮಾನ್ ದೇಶದ ಬಗ್ಗೆ ಅಷ್ಟೇನು ಪರಿಚಯವಿಲ್ಲ. ಕೆಲವರಿಗೆ ಒಮಾನ್ ದೇಶ ಗಲ್ಫ್ ರಾಷ್ಟ್ರ ಮತ್ತು ಅರಬ್ ಮುಸ್ಲಿಂ ರಾಷ್ಟ್ರ ಅಂತ ಗೊತ್ತಿದೆ. ಇಲ್ಲಿ ಅತೀ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುತ್ತದೆ, ಬಿರು ಬಿಸಿಲಿನ ಜಾಗ, ಅತೀ ಹೆಚ್ಚು ಮರುಭೂಮಿ ಹೊಂದಿರುವ ಪ್ರದೇಶ ಹಾಗೂ ಇಲ್ಲಿ ಕಡಿಮೆ ಮಳೆ ಬೀಳುತ್ತದೆ. ಸೌದಿ ಅರೇಬಿಯಾ, ದುಬೈ ಹತ್ತಿರದಲ್ಲಿ ಈ ದೇಶವಿದೆ ಎಂದು ತಿಳಿದುಕೊಂಡಿದ್ದಾರೆ. ಅದೆಲ್ಲವೂ ನಿಜ.
Related Articles
Advertisement
ಈ ಎಲ್ಲ ಬರಹಗಾರರು ತಮ್ಮ ಸ್ವಂತ ಅನುಭವದ ಜತೆಗೆ ಒಮಾನ್‌ನಲ್ಲಿ ನಡೆದ ಮತ್ತು ಕೇಳಿದ ಹಲವಾರು ಅನುಭವ ಕಥನಗಳು ಮತ್ತು ಸ್ಫೂರ್ತಿದಾಯಕ ಲೇಖನುಗಳು ಇಲ್ಲಿ ದಾಖಲಾಗಿವೆ. ಈ ಪುಸ್ತಕದ ಮೂಲಕ ಕನ್ನಡಿಗ ಓದುಗರಿಗೆ ಒಮಾನ್‌ನಲ್ಲಿನ ಇವರೆಲ್ಲರ ಬದುಕು, ಬವಣೆ, ಖುಷಿ ವಿಚಾರ ಇತ್ಯಾದಿಗಳನ್ನ ಪರಿಚಯಿಸುವ ವಿಭಿನ್ನ ಪ್ರಯತ್ನವನ್ನು ಮಾಡಿದ್ದಾರೆ. ಒಮಾನ್‌ನಲ್ಲಿ ಕನ್ನಡ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವ ಸಂಘಟನೆಗಳು, ಕತೆ, ಕವನ ಲೇಖನಗಳನ್ನ ಬರೆಯುತ್ತಿರುವ ಬರಹಗಾರರು, ಕನ್ನಡದ ಸಾಧಕರು ಮತ್ತು ನಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರು ಇವರೆಲ್ಲರ ಪರಿಚಯ ಮತ್ತು ಒಮಾನ್ ಅನುಭವ ಕಥನಗಳು ಹೀಗೆ ವಿವಿಧ ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ಒಮಾನ್ ದೇಶದಲ್ಲಿ ನೆಲೆಗೊಂಡಿರುವ ಕನ್ನಡಿಗರ ಸಾಂಸ್ಕೃತಿಕ ಲೋಕವನ್ನು ಈ ಪುಸ್ತಕದ ಮೂಲಕ ಅರಿತುಕೊಳ್ಳಬಹುದು.
ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಪರವಾದ ಮೊದಲ ಪುಸ್ತಕವು ಇದಾಗಿದೆ. ಪಿ.ಎಸ್.ರಂಗನಾಥ್ ಅವರು ಸುಮಾರು 14 ವರ್ಷಗಳಿಂದ ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ನಲ್ಲಿ ನೆಲೆಸಿ ಉದ್ಯೋಗ ಮಾಡುತ್ತಿದ್ದಾ ರೆ. ಅದಕ್ಕೂ ಮುಂಚೆ ದುಬೈ ಮತ್ತು ಕುವೈಟ್‌ನಲ್ಲಿ 4 ವರ್ಷಗಳ ಕಾಲ ನೆಲೆಸಿದ್ದರು. ಕಳೆದ ಒಂದೂವರೆ ದಶಕಕ್ಕಿಂತಲೂ ಹೆಚ್ಚಿನ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವುದರಿಂದ ಇಲ್ಲಿನ ಸಂಪೂರ್ಣ ಚಿತ್ರಣವನ್ನು ಪುಸ್ತಕದ ರೂಪದಲ್ಲಿ ಯಾಕೆ ಹೊರತರಬಾರದು ಎನ್ನುವ ಆಲೋಚನೆಯ ಫಲಶೃತಿಯೇ ಈ ಪುಸ್ತಕ. ಇದೊಂದು ವಿನೂತನ ಪ್ರಯತ್ನ ಎಂದು ಹೇಳಬಹುದು. ಇದೇ ಜ.14ರಂದು ರವಿವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಈ ಕೃತಿಯು ಬಿಡುಗಡೆಯಾಗಲಿದೆ.