Advertisement
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ| ನಂದಕುಮಾರ, ಡಾ| ರಿಷಿ ಹಂಡಾ, ತೇಜೇಂದ್ರ ಶರ್ಮಾ ಎಂಬಿಇ, ಕೌನ್ಸಿಲರ್ ಕಾರ್ತಿಕ್ ಬೊಂಕೂರ್, ಕೌನ್ಸಿಲರ್ ಶರದ್ ಕುಮಾರ್ ಝಾ ದೀಪ ಬೆಳಗಿಸುವ ಮೂಲಕ ಶುಭ ಸಂಜೆಗೆ ನಾಂದಿ ಹಾಡಿದರು. ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ| ನಂದಕುಮಾರ್ ಅವರು ವಿಷ್ಣುವಿನ ದಶಾವತಾರ ಜನಪ್ರಿಯ ಆದರೆ ಗಣಪತಿಯ ಅವತಾರಗಳ ಬಗ್ಗೆ ಇಂತಹ ಒಂದು ಕಾರ್ಯಕ್ರಮ ಶ್ಲಾಘನೀಯ ಎಂದರು.
Related Articles
Advertisement
ವಕ್ರತುಂಡ ಮತ್ಸರಾಸುರನ ಮರ್ದನ ಮಾಡುವಾಗ ಆಶ್ಚರ್ಯಕರವಾಗಿ ಈ ರೂಪದಲ್ಲಿ ಇದು ಸಿಂಹ ವಾಹನಾಗಿದ್ದಾನೆ. ಏಕದಂತನು ಮದಾಸುರನನ್ನು ನಾಶಪಡಿಸುತ್ತಾನೆ. ಮಹೋದರನು ಮೋಹಾಸುರನನ್ನು ನಾಶಪಡಿಸುತ್ತಾನೆ. ಗಜಾನನನು ಲೋಭಾಸುರನನ್ನು ನಾಶಪಡಿಸುತ್ತಾನೆ. ಈ ಅವತಾರಗಳನ್ನು ಅನ್ವಿ ಪ್ರಭು, ಹೃಷಿಕೇಶ್ ಕಿಝಿಕ್ಕಿಯಿಲ್, ಲಕ್ಷ್ಮೀ ಪಿಳ್ಳೈ, ಮಂಜು ಸುನಿಲ್, ಮೊನಿದೀಪ ಸೀಲ್, ಸಾನ್ವಿಕಾ ಕೊಮ್ಮಿನೇನಿ, ಲಲಿತಾ ಕೋಟ್ಲ , ರಾಗಸುಧಾ ವಿಂಜಮುರಿ ಮತ್ತು ಡಾ| ಶ್ರೀನಿವಾಸ ಪ್ರಸ್ತುತ ಪಡಿಸಿದರು.
ಅಸ್ತಿತ್ವದಲ್ಲಿರುವ ಪಾತ್ರದಲ್ಲಿನ ದುರ್ಗುಣಗಳು ಮತ್ತು ದೋಷಗಳು ಇಂದಿಗೂ ನಮ್ಮಲ್ಲಿ ಕೋಪ, ದುರಾಸೆ, ದುರಹಂಕಾರ, ಅಸೂಯೆ, ಗೊಂದಲ, ಅಹಂಕಾರ ಇವುಗಳಿಂದ ಬಾಂಧವ್ಯ ನಾಶವಾಗುತ್ತವೆ . ನಮ್ಮ ಗ್ರಂಥಗಳಲ್ಲಿ ಗಣೇಶನ ಎಂಟು ರೂಪಗಳನ್ನು ನಾವು ಉತ್ತಮವಾಗಿ ನಿಯಂತ್ರಿಸಬಹುದು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಜೀವಿಗಳಾಗಿ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸೌಂದರ್ಯವನ್ನು ನಮ್ಮ ಗ್ರಂಥಗಳ ಸಾರವನ್ನು ಉಳಿಸಿ ಬೆಳಸಬಹುದು ಎಂದು ಡಾ| ರಾಗಸುಧಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಪಂಚದಲ್ಲೇ ಪ್ರಪ್ರಥಮ ಬಾರಿ ಮುದ್ಗಲ ಪುರಾಣದ ಬಗ್ಗೆ ಈ ರೀತಿಯ ಪ್ರಸ್ತುತಿ ಎಂದು ಹೆಮ್ಮಪಟ್ಟರು. ಕಾರ್ಯಕ್ರಮದ ಪ್ರಸ್ತುತಿ ರಾಧಿಕಾ ಜೋಶಿ ಹಾಗೂ ವಂದನಾರ್ಪಣೆ ಸುಶೀಲ್ ರಾಪಾತ್ವಾರ್ ಮಾಡಿದರು. ವರ್ಷಗಳ ಸಂಶೋಧನೆ ಹಾಗೂ ಪರಿಶ್ರಮದ ಪ್ರತಿಫಲವೇ “ಆದ್ಯ ಪೂಜ್ಯ’ ನೃತ್ಯ ರೂಪಕ ಎಂದು ಸಂಸ್ಕೃತಿ ಸೆಂಟರ್‌ನ ಸಂಸ್ಥಾಪಕಿ ಡಾ| ರಾಗಸುಧಾ ವಿಂಜಮೂರಿ ಪ್ರೇಕ್ಷಕರಿಗೆ ತಿಳಿಸಿದರು.