Advertisement
ಒಂದು ರೀತಿಯಲ್ಲಿ ಮಲ್ಲಕಂಬವನ್ನು ಸಮರಕಲೆಯೆನ್ನ ಬಹುದು ಅಥವಾ ಯೋಗಾಸನದ ಇನ್ನೊಂದು ರೂಪ ಎಂದರೂ ತಪ್ಪಾಗುವುದಿಲ್ಲ ಅಥವಾ ಜಿಮ್ನಾಸ್ಟಿಕ್‌ನ ಭಾರತೀಯ ಮಾದರಿ ಎಂದೂ ಹೇಳಬಹುದು! ಈ ಮೂರೂ ಗುಣಗಳು ಮೇಳೈಸಿರುವ ಅದ್ಭುತ ವಿದ್ಯೆ ಮಲ್ಲ ಕಂಬ. ಹೆಸರೇ ಹೇಳುವಂತೆ ಮಲ್ಲರು ಅಂದರೆ ಕುಸ್ತಿ ಪಟುಗಳು ತಮ್ಮ ದೇಹವನ್ನು ಹುರಿಗೊಳಿಸಲು ಬಳ ಸುವ ಕಂಬವೇ ಮಲ್ಲಕಂಬ. ಪ್ರಾಚೀನ ಕಾಲದಲ್ಲಿ ಕುಸ್ತಿ ಒಂದು ಹೋರಾಟದ ಪ್ರಕಾರವೇ ಆಗಿತ್ತು. ಜರಾಸಂಧನನ್ನು ಭೀಮ ಕುಸ್ತಿ ಮಾಡಿಯೇ ಕೊಂದಿದ್ದು! ಕಾಲಕ್ರಮೇಣ ಅದು ಕ್ರೀಡೆಯಾಗಿ ಬದಲಾಯಿತು. ಮಲ್ಲಕಂಬದಲ್ಲಿ ಮೂರುವಿಧ…
Related Articles
Advertisement
ಕೇರಳದ ಕಳರಿಪಯಟ್ಟುಕೇರಳದ ಈ ಯುದ್ಧವಿದ್ಯೆ ಕ್ರಿ.ಪೂ. ಮೂರನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗುತ್ತದೆ. ಡಚ್ ಲೇಖಕ ಅರ್ನಾಡ್ ವಾನ್ ಡೆರ್ ವೀರ್, ಇಡೀ ಜಗತ್ತಿನ ಯುದ್ಧಕಲೆಗಳ ತಾಯಿ ಈ ಕಳರಿಪಯಟ್ಟು ಎನ್ನುತ್ತಾರೆ. ಕಳರಿ ಎಂದರೆ ಯುದ್ಧ ಭೂಮಿ, ಪಯಟ್ಟು ಎಂದರೆ ದೇಹವನ್ನು ಬಳಸಿ ಮಾಡುವ ಯುದ್ಧ ಕಲೆಯ ಅಭ್ಯಾಸ. ಒಟ್ಟಾರೆ ಯುದ್ಧ ಭೂಮಿಯಲ್ಲಿ ಯುದ್ಧ ಕಲೆಯ ಅಭ್ಯಾಸ ಎನ್ನಬಹುದು. ಇದರಲ್ಲಿ ಉತ್ತರ ಮತ್ತು ದಕ್ಷಿಣ ಎಂಬ ಎರಡು ಶೈಲಿಗಳಿವೆ. ಉತ್ತರದ ಶೈಲಿ ಪೂರ್ಣ ದೇಹವನ್ನು ಕಣ್ಣಾಗಿಸಿಕೊಂಡು, ಹೋರಾಟಕ್ಕೆ ಬಳಸಿಕೊಳ್ಳುವುದಾಗಿದೆ. ಆದರೆ ದಕ್ಷಿಣದ ಶೈಲಿಯನ್ನು ಅಗಸ್ತ್ಯ ಋಷಿಗಳು ಉತ್ತರಭಾರತದಿಂದ ತಂದಿದ್ದು ಎಂಬ ಮಾತುಗಳಿವೆ. ಪಂಜಾಬ್‌ನ ಗತಕಾ
ದೊಣ್ಣೆ ಅಥವಾ ದಂಡವನ್ನು ಹಿಡಿದು ಯುದ್ಧ ಮಾಡುವುದು ಗತಕಾ ಎಂದು ಕರೆಸಿಕೊಂಡಿದೆ. ಇದರಲ್ಲಿ ಕತ್ತಿ ಹಿಡಿದು ಮಾಡುವ ಕತ್ತಿವರಸೆ ಮಾದರಿಯ ಯುದ್ಧಕಲೆಯೂ ಇದೆ. ಗತಕಾ ಪದ ಸಂಸ್ಕೃತದ ಗದಾ ಪದದಿಂದ ವುತ್ಪತ್ತಿಯಾಗಿದೆ. ಪಂಜಾಬ್‌ನ ಸಿಕ್ಖರ ಮಧ್ಯೆ ಹುಟ್ಟಿ, ಅಲ್ಲೇ ಜನಪ್ರಿಯ ವಾಗಿದೆ. ಇದನ್ನು ಜನಪ್ರಿಯಗೊಳಿ ಸಲಿಕ್ಕಾಗಿಯೇ ಅಂತಾರಾಷ್ಟ್ರೀಯ ಗತ ಕಾ ಒಕ್ಕೂಟವೆಂಬ ಸಂಸ್ಥೆಯೂ ಇದೆ. ಮಣಿಪುರದ ಥಾಂಗ್-ತಾ
ಮಣಿಪುರದಲ್ಲಿ ಹ್ಯೂಯೆನ್ ಲಾಂಗ್ಲಾನ್ ಎಂಬ ಸಮರಕಲೆಯಿದೆ. ಇದರಲ್ಲಿ ಎರಡು ವಿಧ. 1. ಥಾಂಗ್-ತಾ 2. ಸರಿತ್-ಸರಕ್. ಥಾಂಗ್-ತಾ ಎಂದರೆ ಶಸ್ತ್ರಸಹಿತ ಸಮರಕಲೆ. ಸರಿತ್-ಸರಕ್ ಶಸ್ತ್ರರಹಿತವಾಗಿ ಪೂರ್ಣದೇಹವನ್ನು ಬಳಸಿ ಹೋರಾಡುವ ವಿದ್ಯೆ. ಪ್ರಸ್ತುತ ಮಾನ್ಯತೆ ಸಿಕ್ಕಿರುವುದು ಥಾಂಗ್-ತಾಗೆ.