Advertisement

ದೇಸಿ ಗೋವುಗಳ ಸಂವರ್ಧನೆ: ಪೂರ್ವಭಾವಿ ಸಭೆ

12:24 PM Jun 26, 2018 | Team Udayavani |

ಮುಂಬಯಿ: ಹೊಸನಗರ ಶ್ರೀ ರಾಮಚಂದ್ರ ಮಠ ಶ್ರೀ ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರ ದೇಸಿ ಗೋವುಗಳ ಸಂವರ್ಧನ ಮಹಾ ಅಭಿಯಾನದ ಕುರಿತು ವಿಶಿಷ್ಟ ಜಾಗೃತಿ ಪರಿಚಯ ಕಾರ್ಯಕ್ರಮವು ಜು. 1 ರಂದು  ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಲಿದ್ದು, ಇದರ ಪೂರ್ವಭಾವಿ ಸಮಾಲೋಚನಾ ಸಭೆಯು ಜೂ. 23 ರಂದು ಸಾಕಿನಾಕಾದ ಸಾಗರ್‌ ಟೆಕ್‌ಪ್ಲಾಜಾದಲ್ಲಿ ನಡೆಯಿತು.

Advertisement

ಉದ್ಯಮಿ ಪ್ರಕಾಶ್‌ ಭಟ್‌ ಅವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಈಶ್ವರಿ ಪ್ರಕಾಶ್‌ ಭಟ್‌ ಇವರು ಗೋ ಸಂರಕ್ಷಣೆ ದೇಸಿ ಗೋವುಗಳ ಸಂವರ್ಧನ ಮಹಾ ಅಭಿಯಾನದ ರೂಪುರೇಷೆಗಳನ್ನು ವಿವರಿಸಿದರು. ಅಪರಾಹ್ನ 2 ರಿಂದ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅಪರಾಹ್ನ 4 ರಿಂದ ಶ್ರೀ ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಸಂಸದ ಗೋಪಾಲ್‌ ಶೆಟ್ಟಿ,  ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಆರ್ಗಾನಿಕ್‌ ಇಂಡಸ್ಟಿÕàಸ್‌ ಇದರ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ, ಭವಾನಿ ಶಿಪ್ಪಿಂಗ್‌ ಕಂಪೆನಿಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ, ರಾಜಕೀಯ ಮುಖಂಡ ಸುರೇಶ್‌ ಶೆಟ್ಟಿ ಗುರ್ಮೆ, ಉದ್ಯಮಿಗಳಾದ ಕೃಷ್ಣ ಭಟ್‌, ಶಂಭು ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ನುಡಿದರು.

ಸಮಾಲೋಚನಾ ಸಭೆಯಲ್ಲಿ ಬಂಟರ ಸಂಘ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ, ಉದ್ಯಮಿ ಬಾಲಕೃಷ್ಣ ಭಂಡಾರಿ, ಪತ್ರಕರ್ತ ದಯಾಸಾಗರ್‌ ಚೌಟ, ಆರ್‌ಎಸ್‌ಎಸ್‌ ಮುಖಂಡ ಶಿವಾನಂದ ಶೆಣೈ, ಪತ್ರಕರ್ತ ದಿನೇಶ್‌ ಕುಲಾಲ್‌ ಅವರು ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಿದರು. 

ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next