Advertisement

ದೇಸಿ, ವಿದೇಶಿ ಸಸ್ಯಹಾರ ಮೇಳ ಆರಂಭ

01:14 PM Sep 22, 2018 | |

ಬೆಂಗಳೂರು: ಒಂದೇ ಸೂರಿನಡಿ ದೇಸಿ ಮತ್ತು ವಿದೇಶಿ ಆಹಾರ ದೊರೆಯುವ ಬೃಹತ್‌ ಸಸ್ಯಹಾರ ಮೇಳಕ್ಕೆ ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಚಾಲನೆ ದೊರೆಯಿತು. ಭೋಜನಾ ಪ್ರಿಯರನ್ನು ಆಕರ್ಷಿಸುವ ಈ ಆಹಾರ ಮೇಳ ಮೂರು ದಿನಗಳ ಕಾಲ ನಡೆಯಲಿದೆ. 

Advertisement

ಖಾಸಗಿ ಸಂಸ್ಥೆ ಆಯೋಜಿಸಿರುವ ಮೇಳವನ್ನು ವಿಧಾನ ಪರಿಷತ್‌ ಸದಸ್ಯ ಶರವಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರ್ನಾಟದ ಜನಪ್ರಿಯ ಖ್ಯಾದ್ಯಗಳ ಜತೆ ಹಲವು ರಾಜ್ಯಗಳ ಮತ್ತು ವಿದೇಶಿ ಆಹಾರಗಳು ಕೂಡ ಒಂದೇ ಸೂರಿನಡಿ ದೊರಕಲಿವೆ. ಗ್ರಾಮೀಣ ಪ್ರದೇಶ ಆಹಾರಕ್ಕೂ, ಆಯೋಜಕರು ವಿಶೇಷ ಆದ್ಯತೆ ನೀಡಿದ್ದು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಜನತೆಗೆ  ಕರೆ ನೀಡಿದರು.

ಇಲ್ಲಿ ಸಂಗ್ರಹವಾದ ಒಂದಿಷ್ಟು ಹಣವನ್ನು ಆಯೋಜಕರು ಕೊಡಗು ಮತ್ತು ಕೇರಳ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ. ಇದೊಂದು ಒಳ್ಳೆಯ ಕೆಲಸ ಎಂದು ಪ್ರಶಂಸಿಸಿದರು.ಈ ವೇಳೆ ಪಾಲಿಕೆ ಸದಸ್ಯರಾದ ಲತಾ,ರೆಡ್‌ ರಿಬ್ಬನ್‌ ಸಂಸ್ಥೆಯ ಅನಿಲ್‌ ಗುಪ್ತಾ, ನವೀನ್‌ ಸುರೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತರಹೇವಾರಿ ಆಹಾರ: ಆಹಾರ ಮೇಳದಲ್ಲಿ ಸುಮಾರು 150 ಮಳಿಗೆಗಳನ್ನು ತರೆಯಲಾಗಿದೆ. ಉತ್ತರ ಕರ್ನಾಟಕದ ವಿವಿಧ ಶೈಲಿಯ ಆಹಾರ ಜತಗೆ  ಆಂಧ್ರದ ಪೋತರೇಕಲ್‌, ಬಾಳೆಕಾಯಿ ಬಿರಿಯಾನಿ, ಮಹಾರಾಷ್ಟ್ರದ ಮಿಸಲ್‌ ಪಾವ್‌, ತಮಿಳುನಾಡಿನ ಬ್ರಿಂಜಾಲ್‌ ಬಿರಿಯಾನಿ, ಬಿಹಾರದ ಲಿಟ್ಟಿ ಚೋಕಾ, ಗುಜರಾತಿನ ನೆಫೆಡಾ, ಚಾರ್‌ಮೀನಾರ್‌ ದೋಸ, ಸ್ಯಾಂಡ್‌ ವಿಚ್‌ದೋಸ, ಮಧುರೈ ಮಸಾಲ ದೋಸ ಸೇರಿದಂತೆ ಸಾವಿರಕ್ಕೂ ಹೆಚ್ಚು ತರಹೇವಾರಿ ಆಹಾರಗಳು ಇಲ್ಲಿ, ದೊರೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next