ಮಂಗಳೂರು: ಪ್ರತಿ ಊರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅಲ್ಲಿ ಧರ್ಮ ಹಾಗೂ ಸಂಸ್ಕಾರ ಉಳಿಯುತ್ತದೆ. ಜತೆಗೆ ನಮ್ಮ ಸಂಸ್ಕಾರದ ಬೆಳವಣಿಗೆಗೂ ಧಾರ್ಮಿಕತೆಯೇ ಪ್ರಮು ಖವಾಗಿದೆ. ಹೀಗಾಗಿ ನಾವು ಒಗ್ಗಟ್ಟಿನಿಂದ ಇಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ದೇರೆಬೈಲ್ ಕೊಂಚಾಡಿ ತೋಟದಮನೆ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಉತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವ ಚನ ನೀಡಿ, ನಾವು ಎಷ್ಟೇ ಜನ್ಮ ಪಡೆದರೂ ತಾಯಿ ಋಣ ತೀರಿಸುವುದು ಅಸಾಧ್ಯ. ಹೀಗಾಗಿ ನಾವು ತಾಯಿಯನ್ನು ಪೂಜ್ಯ ಭಾವನೆಯಿಂದ ನೋಡಬೇಕು. ಅದು ದೇವರ ಆರಾಧನೆಗೆ ಸಮಾನವಾಗುತ್ತದೆ ಎಂದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮಾಜಿ ಮೇಯರ್ ಶಂಕರ ಭಟ್, ಬಿಜೆಪಿ ಮುಂದಾಳು ವೇದವ್ಯಾಸ ಕಾಮತ್, ಮಂದಾರ ಬಯಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ದೇವಾಡಿಗ, ಭಂಡಾರಿ ಬಿಲ್ಡರ್ನ ಲಕ್ಷ್ಮೀಶ ಭಂಡಾರಿ, ಸಾಗರ್ ಬಿಲ್ಡರ್ನ ಗಿರಿಧರ ಶೆಟ್ಟಿ, ಕಾರ್ತಿಕಸ್ಥಾನ ಅಧ್ಯಕ್ಷ ಕೆ.ಸದಾನಂದ ದೇವಾಡಿಗ, ಕ್ಷೇತ್ರದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಕೊಟ್ಟಾರಿ ಉಪಸ್ಥಿತರಿದ್ದರು.
ಸಮ್ಮಾನ: ಕ್ಷೇತ್ರದಲ್ಲಿ ನಿರಂತರ ಸೇವೆಗೈದ ಸೇಸಪ್ಪ ದೇವಾಡಿಗ, ಪದ್ಮನಾಭ ಕರ್ಕೇರ, ಕೃಷ್ಣಪ್ಪ ಕೊಂಚಾಡಿ, ನಾಗೇಶ ಕೋಟ್ಯಾನ್, ಸದಾನಂದ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಂದ ಭಂಡಾರಿ ಸಮ್ಮಾನಿತರನ್ನು ಪರಿಚಯಿಸಿದರು.
ಆಡಳಿತ ಸಮಿತಿ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಸ್ವಾಗತಿಸಿದರು. ಬ್ರಹ್ಮ ಕಲಧಿಶೋತ್ಸವ ಸಮಿತಿ ಅಧ್ಯಕ್ಷ ಸಖಾರಾಮ್ ಕಿರೋಡಿಯನ್ ಪ್ರಸ್ತಾವನೆಗೈದರು. ನವೀನ್‌ಚಂದ್ರ ಸುವರ್ಣ ವಂದಿಸಿದರು. ಕಾರ್ಪೊರೇಟರ್ ರಾಜೇಶ್ ಕೆ. ಹಾಗೂ ನವ್ಯಶ್ರೀ ನಿರ್ವಹಿಸಿ ದರು. ಮುಲ್ಲಕಾಡು ಶಬರಿ ಚೆಂಡೆ ಬಳಗದಿಂದ ತುಳು ನಾಡ ವೈಭವ ಹಾಗೂ ಸಂಗೀತ ಕಲಾ ಸಂಗಮದಿಂದ ಸಂಗೀತ ಭಜನೆ ನಡೆಯಿತು.