Advertisement
ಸಂಕೀರ್ಣದ ಸಂಪೂರ್ಣ ಕಾಮಗಾರಿ ಮುಗಿಸಲು ಎರಡನೇ ಹಂತದ ಯೋಜನೆ ಸಿದ್ಧಪಡಿಸಲಾಗಿದ್ದು, ಅದಕ್ಕೆ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, ಸರಕಾರಕ್ಕೆ ಕಳುಹಿಸಿ ಕೆಲವು ತಿಂಗಳು ಕಳೆದಿದೆ. ಆದರೆ ಸರಕಾರದಲ್ಲಿ ಇನ್ನೂ ಅನುಮೋದನೆ ದೊರಕಿಲ್ಲ. ಹೀಗಾಗಿ ಕಾಮಗಾರಿಗೆ ವೇಗ ನೀಡಲು ಸಾಧ್ಯವಾಗಿಲ್ಲ. ಬಹುತೇಕ ಕಟ್ಟಡ, ಮೆಲ್ಛಾವಣಿ, ಬಾಗಿಲು ರೇಲಿಂಗ್ ಕಾಮಗಾರಿ ಮುಗಿ ದಿದೆ. 2ನೇ ಹಂತದ ಕಾಮಗಾರಿಯಲ್ಲಿ ಸಂಪೂರ್ಣ ಕಟ್ಟಡದ ಫಿನಿಶಿಂಗ್, 2 ಲಿಫ್ಟ್ ಅಳವಡಿಕೆ, ಸಭಾಂಗಣದಲ್ಲಿ ಎಸಿ, ಕುರ್ಚಿ ಸಹಿತ ಒಟ್ಟು ಪಿಠೊಪಕರಣ, ಕೇಬಲ್ ನೆಟ್‌ವರ್ಕ್, ಪೈಂಟಿಂಗ್, ಕಟ್ಟಡದ ಪಕ್ಕದ ಮಳೆ ಚರಂಡಿ ಅಭಿವೃದ್ಧಿ, ಆವರಣ ಗೋಡೆ, ಸಂಪೂರ್ಣ ಇಂಟರ್‌ಲಾಕ್ ಅಳವಡಿಸಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ಸರಕಾರ 29 ಕೋ.ರೂ. ವೆಚ್ಚದ ಅಂದಾಜು ಪಟ್ಟಿಗೆ ಅನುಮೋದನೆ ನೀಡಿದರೆ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಮುಗಿಸಲು 1 ವರ್ಷ ಬೇಕಾಗ ಬಹುದು.
2014ರಲ್ಲಿ ನೂತನ ಡಿಸಿ ಕಚೇರಿ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು. ಅರಣ್ಯ ಇಲಾಖೆ ಜಾಗದ ಹಸ್ತಾಂತರ, ಮರ ಕಡಿಯುವ ವಿರುದ್ಧ ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಚೆನ್ನೈಯ ಹಸಿರು ಪೀಠದಲ್ಲಿ ವ್ಯಾಜ್ಯ ಮುಗಿದು, 2018ರ ಮಾರ್ಚ್ ತಿಂಗಳಲ್ಲಿ ಗೃಹ ನಿರ್ಮಾಣ ಮಂಡಳಿಯು ಕಾಮಗಾರಿ ಆರಂಭಿಸಿತ್ತು. ಪ್ರಥಮ ಹಂತದ ಒಟ್ಟು 55 ಕೋಟಿ ರೂ. ಮೊತ್ತದಲ್ಲಿ 37 ಕೋ. ರೂ. ಬಿಡುಗಡೆಯಾಗಿದ್ದು, ಉಳಿಕೆ ಹಣ ಗುತ್ತಿಗೆದಾರರಿಗೆ ಬಿಡುಗಡೆಗೆ ಬಾಕಿ ಇದೆ. ಇಲ್ಲಿ ಸುಮಾರು 50 ಕೋಟಿ ರೂ. ಮೊತ್ತದ ಕಾಮಗಾರಿ ನಡೆದಿದೆ. ಸರಕಾರದ ವಿವಿಧ ಇಲಾಖೆಗಳು ಅನುಮೋದನೆ ನೀಡುವಾಗ ತಡ ಮಾಡಿದ್ದರಿಂದ ಕಾಮಗಾರಿ ವಿಳಂಬ ವಾಯಿತು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. 2.26 ಲಕ್ಷ ಚದರ ಅಡಿ ಕಟ್ಟಡ
ಒಟ್ಟು 2.26 ಲಕ್ಷ ಚದರ ಅಡಿ ಕಟ್ಟಡದಲ್ಲಿ ಕಂದಾಯ ಇಲಾಖೆ ಕಚೇರಿಗಳ ಜತೆಯಲ್ಲಿ ಸುಮಾರು 38 ಇಲಾಖೆಗಳ ಕಚೇರಿಗಳು ಇಲ್ಲಿಗೆ ಬರಲಿವೆ. ಮಿನಿ ಸಭಾಂಗಣ, ಜಿಲ್ಲಾಧಿಕಾರಿ ಕೋರ್ಟ್ ಹಾಲ್, ಸಚಿವರು, ಸಂಸದರಿಗೆ ಕಚೇರಿ, ಕ್ಯಾಂಟಿನ್ ಮತ್ತಿತರ ಸೌಲಭ್ಯವಿವೆ. ಸುಮಾರು 200 ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
Related Articles
ಪಡೀಲ್‌ನಲ್ಲಿ ನೂತನ ಜಿಲ್ಲಾಧಿ ಕಾರಿ ಕಚೇರಿ ಕಾಮಗಾರಿ ನಡೆಯು ತ್ತಿದೆ. ಆದರೆ ಮುಂದಿನ ಕಾಮಗಾರಿಗೆ ಹೆಚ್ಚುವರಿ 29 ಕೋ.ರೂ. ಅಗತ್ಯವಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾ ಗಿದೆ. ಅದು ಬಿಡುಗಡೆ ಬಳಿಕ ಈ ಕಾಮಗಾರಿಗಳಿಗೆ ವೇಗ ದೊರೆಯಲಿದೆ.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ದ.ಕ.
Advertisement