Advertisement

ಸಮಗ್ರ ಕೃಷಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ

09:48 AM Jun 05, 2018 | |

‌ಕಲಬುರಗಿ: ಜಿಲ್ಲೆಯಾದ್ಯಂತ ಪ್ರಥಮ ಹಂತವಾಗಿ ಜೂ. 4ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಚಾಲನೆ ನೀಡಿದರು. ಜೂ. 4, 5 ಮತ್ತು 6ರಂದು ಪ್ರಥಮ
ಹಂತವಾಗಿ 17 ಹೋಬಳಿಗಳಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ಜರುಗುವುದು.

Advertisement

ಅಫಜಲಪುರ ತಾಲೂಕಿನ ಅಫಜಲಪುರ, ಆತನೂರ ರೈತ ಸಂಪರ್ಕ ಕೇಂದ್ರ, ಆಳಂದ ತಾಲೂಕಿನ ಆಳಂದ, ನಿಂಬರಗಾ ರೈತ ಸಂಪರ್ಕ ಕೇಂದ್ರ, ಚಿಂಚೋಳಿ ತಾಲೂಕಿನ ಚಿಂಚೋಳಿ, ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರ, ಚಿತ್ತಾಪುರ ತಾಲೂಕಿನ ಚಿತ್ತಾಪುರ, ನಾಲವಾರ, ಶಹಾಬಾದ ರೈತ ಸಂಪರ್ಕ ಕೇಂದ್ರ, ಕಲಬುರಗಿ ತಾಲೂಕಿನ ಕಲಬುರಗಿ, ಪಟ್ಟಣ, ಮಹಾಗಾಂವ ರೈತ ಸಂಪರ್ಕ ಕೇಂದ್ರ, ಜೇವರ್ಗಿ ತಾಲೂಕಿನ ಜೇವರ್ಗಿ, ಅಂದೋಲಾ, ಇಜೇರಿ ರೈತ ಸಂಪರ್ಕ ಕೇಂದ್ರ ಹಾಗೂ ಸೇಡಂ ತಾಲೂಕಿನ ಸೇಡಂ ಮತ್ತು ಮುಧೋಳ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗುವುದು. ದ್ವಿತೀಯ ಹಂತವಾಗಿ ಜೂ. 7 ರಿಂದ 9ರ ವರೆಗೆ 15 ಹೋಬಳಿಗಳಲ್ಲಿ ಸಮಗ್ರ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

ಅಫಜಲಪುರ ತಾಲೂಕಿನ ಕರಜಗಿ, ಆಳಂದ ತಾಲೂಕಿನ ಮಾದನಹಿಪ್ಪರಗಾ, ಖಜೂರಿ, ನರೋಣಾ, ಚಿಂಚೋಳಿ ತಾಲೂಕಿನ ಸುಲೇಪೇಟ, ಕೋಡ್ಲಿ, ಚಿತ್ತಾಪುರ ತಾಲೂಕಿನ ಕಾಳಗಿ, ಮಾಡಬೂಳ, ಕಲಬುರಗಿ ತಾಲೂಕಿನ ಔರಾದ, ಕಮಲಾಪುರ, ಫರಹತಾಬಾದ, ಜೇವರ್ಗಿ ತಾಲೂಕಿನ ಯಡ್ರಾಮಿ, ನೆಲೋಗಿ, ಸೇಡಂ ತಾಲೂಕಿನ ಕೋಡ್ಲಾ ಹಾಗೂ ಅಡಕಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜರುಗುವುದು.
ಮೂರನೇ ದಿನ ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ ನಡೆಸಲಾಗುವುದು.

ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಕೃಷಿ ಇಲಾಖೆ ಉಪ ನಿರ್ದೇಶಕ ಸಮದ್‌ ಪಟೇಲ್‌, ಉಪನಿರ್ದೇಶಕ ಬಾಲರಾಜ, ರೇಷ್ಮೆ ಇಲಾಖೆ ಉಪನಿರ್ದೇಶಕ ಉಪ್ಪಾರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೇವಣಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಬಿ. ಯದ್ಲಾಪುರ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next