Advertisement
ಶುಕ್ರವಾರ ಬೆಂಗಳೂರಿನಲ್ಲಿ ರಾಜಭವನಕ್ಕೆ ಭೇಟಿ ನೀಡಿದ ಡಿಸಿಎಂ, ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಈವರೆಗೆ ಸರಕಾರ ಕೈಗೊಂಡಿರುವ ಕ್ರಮಗಳು, ಕಾರ್ಯಪಡೆ ರಚನೆ, ಆ ಕಾರ್ಯಪಡೆ ಜತೆ ನಡೆಸಿರುವ ಸಭೆಗಳು, ವಿಚಾರ ವಿನಿಮಯ ಇತ್ಯಾದಿ ಸಂಗತಿಗಳ ಬಗ್ಗೆ ರಾಜ್ಯಪಾಲರ ಜತೆ ವಿಚಾರ ವಿನಿಮಯ ಮಾಡಿಕೊಂಡರು.
Related Articles
Advertisement
ಸಲಹೆ ನೀಡಿದ ರಾಜ್ಯಪಾಲರು:ಇದೇ ವೇಳೆ ಶಿಕ್ಷಣ ನೀತಿ ಜಾರಿಯ ನಿಟ್ಟಿನಲ್ಲಿ ವೇಗವಾಗಿ ಹೆಜ್ಜೆಗಳನ್ನು ಇಡುತ್ತಿರುವ ಸರಕಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದ ರಾಜ್ಯಪಾಲರು, ಕೆಲ ಮಹತ್ವದ ಸಲಹೆಗಳನ್ನು ನೀಡಿದರು. ಜತೆಗೆ, ಡಿಸಿಎಂ ಜತೆಯಲ್ಲೇ ತಮ್ಮನ್ನು ಭೇಟಿಯಾಗಿದ್ದ ಶಿಕ್ಷಣನೀತಿ ನಿರೂಪಣಾ ಸಮಿತಿ ಸದಸ್ಯ ಹಾಗೂ ಅಜೀಂ ಪ್ರೇಮ್ ಜೀ ವಿವಿಯ ಉಪ ಕುಲಪತಿ ಪ್ರೊ. ಅನುರಾಗ್ ಬೇಹರ್ ಅವರಿಂದ ನೀತಿಯಲ್ಲಿರುವ ಮತ್ತಷ್ಟು ಅಂಶಗಳ ಬಗ್ಗೆ ವಿವರಣೆ ಪಡೆದರು. ಜತೆಗೆ, ಡಿಸಿಎಂ ಅವರಿಗೆ ಕೆಲ ಮುಖ್ಯ ಸಲಹೆಗಳನ್ನೂ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಆದಷ್ಟು ಬೇಗ ಹಂತ ಹಂತವಾಗಿ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಪಡೆಯು ನೀತಿಯ ಜಾರಿಯ ಬಗ್ಗೆ ಅಂತಿಮ ನೀಲನಕ್ಷೆಯನ್ನು ನೀಡುವುದು ಬಾಕಿ ಇದ್ದು, ಅದು ಕೈಸೇರಿದ ಕೂಡಲೇ ಅನುಷ್ಟಾನದ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಡಿಸಿಎಂ ಅವರು ರಾಜ್ಯಪಾಲರಿಗೆ ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರು ಹಾಜರಿದ್ದರು.