Advertisement
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ರ ಪ್ರಕರಣ 12ಎಲ್, 43ಎ ಮತ್ತು 38ರ ಉಪ ಪ್ರಕರಣಗಳಿಗೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರನ್ನು ತೆಗೆದುಹಾಕುವ ಪ್ರಕ್ರಿಯೆ) ನಿಯಮಗಳು-2022ರ ಕರಡನ್ನು ಇಲಾಖೆ ಇತ್ತೀಚೆಗೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ.
ಕರಡು ನಿಯಮ ಪ್ರಕಾರ, ಅಧ್ಯಕ್ಷ-ಉಪಾಧ್ಯಕ್ಷ ಅಥವಾ ಸದಸ್ಯರ ವಿರುದ್ಧ ಅಧಿಕಾರ ದುರ್ಬ ಳಕೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ ಅಥವಾ ದುರ್ನಡತೆ ಬಗ್ಗೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಯು ತಾನು ನೇರವಾಗಿ ಸ್ವೀಕರಿಸಿದ ದೂರಿನ 30 ದಿನಗಳಲ್ಲಿ ತನಿಖೆ ಕೈಗೊಂಡು ಜಿ.ಪಂ. ಸಿಇಒಗೆ ವರದಿ ಸಲ್ಲಿಸಬೇಕು. ಈ ನಿಯಮಗಳು ಜಾರಿಗೆ ಬಂದಲ್ಲಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಅನಗತ್ಯವಾಗಿ ಕಿರುಕುಳ ನೀಡಲು ಅಸ್ತ್ರವೊಂದನ್ನು ಅಧಿಕಾರಿಗಳ ಕೈಗೆ ಕೊಟ್ಟಂತಾಗುತ್ತದೆ ಎಂಬುದು ಗ್ರಾ.ಪಂ. ಜನಪ್ರತಿನಿಧಿಗಳ ವಾದ. ಅಧಿಕಾರಿಗಳ ಮೂಲಕ ಸರಕಾರ ಪಂಚಾಯತ್‌ಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶ ಹೊಂದಿದಂತಿದೆ. ಇದು ಪಂಚಾಯತ್‌ಗಳ ಅಸ್ತಿತ್ವ ಮತ್ತು ಸದಸ್ಯರ ಘನತೆಗೆ ಧಕ್ಕೆ ತರಲಿದೆ. ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು.
– ಸತೀಶ್ ಕಾಡಶೆಟ್ಟಿಹಳ್ಳಿ,
ಅಧ್ಯಕ್ಷರು-ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ.