Advertisement

TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?

11:25 PM Nov 19, 2024 | Team Udayavani |

ತಿರುಪತಿ: ತಿರುಮಲದ ವೆಂಕಟೇಶ್ವರ ದೇಗುಲದಲ್ಲಿ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತಾದಿಗಳು ಕಾಯಬೇಕಾದ ಅವಧಿಯನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ಸ್‌(ಟಿಟಿಡಿ) ಹೆಜ್ಜೆಯಿಟ್ಟಿದೆ.

Advertisement

ಪ್ರಸ್ತುತ ಭಕ್ತರು ದರ್ಶನಕ್ಕಾಗಿ ಕೆಲವೊಮ್ಮೆ 20 ಗಂಟೆಗಳವರೆಗೆ ಕಾಯಬೇಕಾಗುತ್ತದೆ. ಈ ಸಮಯವನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಟಿಟಿಡಿ ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಲು ಮುಂದಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಲಹೆ ನೀಡಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲು ಸೋಮವಾರ ನಡೆದ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಮ್ತಾಜ್‌ ಹೋಟೆಲ್‌ಗೆ ನೀಡಿದ್ದ ಜಮೀನು ರದ್ದು

ಜಗನ್ಮೋಹನ ರೆಡ್ಡಿ ಸಿಎಂ ಆಗಿದ್ದಾಗ ಆಲಿಪಿರಿ ಸಮೀಪ ಪ್ರವಾಸೋದ್ಯಮ ಯೋಜನೆಗೆಂದು ಮಮ್ತಾಜ್‌ ಹೋಟೆಲ್‌ ಲಿ.ಗೆ ನೀಡಿದ್ದ 20 ಎಕರೆ ಜಮೀನನ್ನು ವಾಪಸ್‌ ಪಡೆಯಲೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ತಡೆಯಲು ಈ ನಿರ್ಧಾರ ಕೈಗೊಂಡಿರುವುದಾಗಿ ಟಿಟಿಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next