Advertisement

ಗುರಿ ಮೀರಿ ಸಾಧನೆ ಮಾಡಿದ ತೋಟಗಾರಿಕೆ ಇಲಾಖೆ

01:32 PM Apr 21, 2021 | Team Udayavani |

ಚಿಕ್ಕಬಳ್ಳಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮನೈರ್ಮಲ್ಯಕ್ಕೆ ಪೂರಕವಾಗಿರುವ ಮಹಾತ್ಮ ಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅಂತರ್ಜಲ ಮಟ್ಟ ವೃದ್ಧಿ, ಜಲಮೂಲಗಳನ್ನುಪುನಶ್ಚೇತನಗೊಳಿಸುವ ಕಾರ್ಯಗಳಿಗೆ ಬಳಸಿಕೊಂಡಬಳಿಕ ಇದೀಗ, ತೋಟಗಾರಿಕೆ ಇಲಾಖೆ ಈ ಯೋಜನೆಯ ಮೂಲಕ ರೈತರ ಕಲ್ಯಾಣಕ್ಕಾಗಿ ಬಳಸಲುಮುಂದಾಗಿದೆ.

Advertisement

ನರೇಗಾ ಯೋಜನೆಯ ಮೂಲಕ 2020-21ನೇಸಾಲಿನಲ್ಲಿ 50 ಲಕ್ಷ ಮಾನವ ದಿನಗಳು ಸೃಜನೆ ಮಾಡುವಗುರಿ ಹೊಂದಿ, ಆರ್ಥಿಕ ವರ್ಷದ ಅಂತ್ಯದೊಳಗೆ ಗುರಿಮೀರಿ ಒಂದು ಕೋಟಿ ಹತ್ತು ಲಕ್ಷ ಮಾನವ ದಿನಗಳನ್ನುಸೃಜನೆ ಮಾಡಿ, ತೋಟಗಾರಿಕೆ ಇಲಾಖೆ ಗುರಿಮೀರಿಸಾಧನೆ ಮಾಡಿದೆ. ಈ ಯೋಜನೆ ಮೂಲಕ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆಯನ್ನು ಮಾಡಿಮಾವು, ತೆಂಗು, ಪಪ್ಪಾಯ, ಈರುಳ್ಳಿ ಶೇಖ ರಣಾಘಟಕಗಳ ನಿರ್ಮಾಣ, ಪೌಷ್ಠಿಕ ತೋಟಗಳು ಹಾಗೂಇಲಾಖೆಯ ಫಾರಂಗಳ ಅಭಿವೃದ್ಧಿಗಾಗಿ ವಿಶೇಷ ಆದ್ಯತೆನೀಡಲಾಗಿದೆ.

ರೈತರಿಗೆ ಸೌಲಭ್ಯ ಕಲ್ಪಿಸಲು ವಿಶೇಷ ಯೋಜನೆ:ನರೇಗಾ ಯೋಜನೆಯನ್ನು ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಮೀಣಪ್ರದೇಶದಲ್ಲಿ ಮೂಲ ಸೌಲಭ್ಯ ವೃದ್ಧಿಗೊಳಿಸಿದರಲ್ಲದೆರೇಷ್ಮೆ, ತೋಟಗಾರಿಕೆ ಮತ್ತು ಕೃಷಿ ಚಟು ವಟಿಕೆ ಗಳಲ್ಲಿತೊಡಗಿಸಿಕೊಂಡಿರುವ ರೈತರಿಗೆ ಸದರಿ ಯೋಜನೆಮೂಲಕ ಅನೇಕ ಅನುಕೂಲಗಳನ್ನು ಕಲ್ಪಿಸಲಾಗಿದೆ.

ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಿದ ಜಿಪಂ ನಿಕಟ ಪೂರ್ವಸಿಇಒ ಬಿ.ಫೌಝೀಯಾ ತರುನ್ನುಮ್‌ ಅವರು ಪ್ರಸ್ತುತತೋಟಗಾರಿಕೆ ಇಲಾಖೆಯ ನಿರ್ದೇಶಕಿಯಾಗಿ ಸೇವೆಸಲ್ಲಿಸು ತ್ತಿದ್ದು, ತೋಟಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿ ರುವ ರೈತರಿಗೆ ಸಕಲ ಸೌಲಭ್ಯ ಗಳನ್ನು ಕಲ್ಪಿಸಲುವಿಶೇಷ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ.

ರೈತರಿಗೆ ತರಬೇತಿ: ನರೇಗಾ ಬಳಸಿಕೊಂಡು ಹೊಸದಾಗಿ 51 ಸಾವಿರ 808 ಎಕರೆ ಪ್ರದೇಶ ದಲ್ಲಿ ತೋಟಗಾರಿಕೆ ಬೆಳೆಗಳನ್ನು ವಿಸ್ತರಿಸಲಾಗಿದೆ. ಜೊತೆಗೆ 109ಎಕರೆ ಪ್ರದೇಶವನ್ನು ನಿರ್ವಹಣೆ ಮಾಡಲಾಗಿದೆ. ಕೃಷಿಗೆಪರ್ಯಾಯವಾಗಿ ತೋಟಗಾರಿಕೆ ಕ್ಷೇತ್ರ ದತ್ತ ರೈತರನ್ನುಆಕರ್ಷಿಸಲು ವಿಭಿನ್ನ ಯೋಜನೆಗಳನ್ನು ಪರಿಚಯಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ಫಾರಂಗಳನ್ನುವೈಜ್ಞಾ ನಿಕವಾಗಿ ಮತ್ತು ಆಧುನಿಕವಾಗಿ ಅಭಿವೃದ್ಧಿ ಗೊಳಿಸಿ, ಅದರ ಮೂಲಕ ರಾಜ್ಯಾದ್ಯಂತ ತೋಟಗಾರಿಕೆಕ್ಷೇತ್ರ ದಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡಿರುವ ಪ್ರಗತಿಪರ ರೈತರು ಮತ್ತು ಸಾಮಾನ್ಯ ರೈತರಿಗೂ ತೋಟಗಾರಿಕೆಬೆಳೆಗಳನ್ನು ಬೆಳೆದು ಆದಾಯ ದ್ವಿಗುಣಗೊಳಿಸುವಸಲು ವಾಗಿ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿಗಳನ್ನು ನೀಡಲಾಗುತ್ತಿದೆ.

Advertisement

ತೋಟಗಾರಿಕೆ ಇಲಾಖೆಗೂ ವರದಾನ: ಕೇಂದ್ರಮತ್ತು ರಾಜ್ಯ ಸರ್ಕಾರ ಗಳಿಂದ ತೋಟಗಾರಿಕೆ ಕ್ಷೇತ್ರಗಳಅಭಿವೃದ್ಧಿಗಾಗಿ ದೊರೆಯುವ ಯೋಜನೆ ಗಳನ್ನು ಅರ್ಹಫಲಾನುಭವಿಗಳಿಗೆ ತಲುಪಿಸುವ ಸಲುವಾಗಿ ವೈಜ್ಞಾನಿಕಮತ್ತು ತಂತ್ರಜ್ಞಾನ ವಿಧಾನಗಳನ್ನು ಅಳವಡಿಸಿಕೊಂಡುರೈತರು ಬೆಳೆಯುವ ಉತ್ಪನ್ನಗಳಿಗೆ ಕ್ರಿಮಿಕೀಟಗಳ ಬಾಧೆಅಥವಾ ರೋಗದ ಲಕ್ಷಣ ಕಂಡು ಬಂದರೆ, ಅದನ್ನುಆ್ಯಪ್‌ ಮೂಲಕ ಪರಿಹರಿ ಸುವ ಯೋಜನೆ ಸಹಇಲಾಖೆಯಿಂದ ರೂಪಿಸಲಾಗಿದೆ. ಈಗಾ ಗಲೇ ರೈತರಿಗೆ ಇಲಾಖೆ ವತಿಯಿಂದ ಸಿದ್ಧಪಡಿಸಿ ರುವ ಆ್ಯಪ್‌ ಕುರಿತುಅರಿವು ಮೂಡಿಸಲಾಗಿದೆ.

ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next