Advertisement

ಶಹಾಬಾದಲ್ಲಿ ಡೆಂಘೀ ಭೀತಿ: ಆತಂಕದಲ್ಲಿ ಜನತೆ

05:03 PM Jul 11, 2021 | Team Udayavani |

ಶಹಾಬಾದ: ಕಳೆದ ವಾರದಿಂದ ಸುಮಾರು 11ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿವೆ. ಪ್ರಕರಣಗಳನ್ನು ನಗರದ ಖಾಸಗಿ ಲ್ಯಾಬ್‌ಗಳು ದೃಢಪಡಿಸಿವೆ. ಹೊನಗುಂಟಾ ಗ್ರಾಮದಲ್ಲಿ ಇಬ್ಬರು ಬಾಲಕರಿಗೆ ಡೆಂಘೀ ಪತ್ತೆಯಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪಾಲಕರು ತಿಳಿಸಿದ್ದಾರೆ. ಇನ್ನು ಕೆಲವರು ಕಲಬುರಗಿ ಸಂಗಮೇಶ್ವರ ಆಸ್ಪತ್ರೆ, ಯಶೋಧರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಳೆಗಾಲ ಆರಂಭವಾಗಿದ್ದು ಮುಂಜಾಗ್ರತಾ ಕ್ರಮವಾಗಿ ನಗರಸಭೆ ಅಧಿ  ಕಾರಿಗಳು ಸ್ವತ್ಛತೆ ಕಡೆ ಗಮನಹರಿಸಬೇಕಿತ್ತು. ಆದರೆ ಅ ಧಿಕಾರಿಗಳು ಮಾತ್ರ ಕಸ ವಿಲೇವಾರಿ ಬಿಟ್ಟರೆ ಚರಂಡಿ ಸ್ವತ್ಛತೆ ಕಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ. ಇದರಿಂದ ಚರಂಡಿಗಳಲ್ಲಿ ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ಎಲ್ಲೆಂದರಲ್ಲಿ ನೀರು ತುಂಬಿಕೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ನಗರಸಭೆ ಅಧಿ ಕಾರಿಗಳು ಕೂಡಲೇ ಚರಂಡಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈಗಾಗಲೇ ಡೆಂಘೀ ಪೀಡಿತರು ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ನಗರಸಭೆ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ನಗರದ ವಿವಿಧ ಬಡಾವಣೆಯಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಡೆಂಘೀ ಕುರಿತು ಜನರಿಗೆ ತಿಳಿವಳಿಕೆ, ಮುಂಜಾಗ್ರತಾ ಕ್ರಮ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ ಡೆಂಘೀ ಹರಡದಂತೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಅಲ್ಲದೇ ಹೊನಗುಂಟಾ ಗ್ರಾಮದಲ್ಲೂ ಎಲ್ಲೆಂದರಲ್ಲಿ ಕೊಳಚೆ ನೀರು ನಿಲ್ಲುತ್ತಿದೆ. ಆದ್ದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗಕ್ಕೆ ಕಾರಣವಾಗಿದೆ. ಗ್ರಾಪಂ ಪಿಡಿಒ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next