Advertisement
ನೋಟುಗಳ ಅಮಾನ್ಯ ಮಾಡಿ ಬುಧವಾರಕ್ಕೆ ಸರಿಯಾಗಿ ವರ್ಷ ಪೂರ್ಣವಾಗಲಿದೆ. ಅದೇ ದಿನ ಬಿಜೆಪಿಯಿಂದ “ಕಪ್ಪುಹಣ ವಿರೋಧಿ ದಿನ’ ಮತ್ತು ಪ್ರತಿಪಕ್ಷಗಳ ವತಿಯಿಂದ “ಕರಾಳ ದಿನ’ಕ್ಕೆ ತೀರ್ಮಾನಿಸಿರುವಂತೆಯೇ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ “ಬ್ಲೂಮ್‌ಬರ್ಗ್ ಕ್ವಿಂಟ್’ ಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನೋಟುಗಳ ಅಮಾನ್ಯಕ್ಕೆ ಸಂಬಂಧಿಸಿ ರಾಜಕೀಯ ಆರೋಪ-ಪ್ರತ್ಯಾರೋಪದ ಸಮಯ ಮುಕ್ತಾಯವಾಗಿದೆ.
Related Articles
Advertisement
ಹೆಚ್ಚು ನಗದು ಅರ್ಥವ್ಯವಸ್ಥೆಗೆ ಅಪಾಯಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಗದು ವ್ಯವಸ್ಥೆ ಇದ್ದರೆ ಅಪಾಯ. ನೋಟು ಅಮಾನ್ಯದ ಬಳಿಕ ದೇಶದ ಅರ್ಥ ವ್ಯವಸ್ಥೆ ಡಿಜಿಟಲ್ ಪಾವತಿ ವ್ಯವಸ್ಥೆಯತ್ತ ಹೊರಳಿಕೊಳ್ಳುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನಗದು ವ್ಯವಹಾರಕ್ಕಿಂತ ಡಿಜಿಟಲ್ ಗೇ ಹೆಚ್ಚಿನ ಜನಪ್ರಿಯತೆ ಬರುತ್ತಿರುವುದು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಭಾರಿ ಬದಲಾವಣೆ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಇಂಥ ವ್ಯವಸ್ಥೆ ಏಕಾಏಕಿ ಸಾಧ್ಯವಿಲ್ಲ. ಡಿಜಿಟಲ್ ವ್ಯವಸ್ಥೆಯಿಂದ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಠೇವಣಿ ಜಮೆಯಾಗುತ್ತದೆ. ಇದರಿಂದಾಗಿ ಅವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು ಜೇಟ್ಲಿ. ಅಮಾನ್ಯದಿಂದ ಅನುಕೂಲವೆಂದ ಬ್ಯಾಂಕ್‌ಗಳು
ಅಮಾನ್ಯ ನಿರ್ಧಾರದಿಂದ ಅನು ಕೂಲವೇ ಆಗಿದೆ ಎಂದು ಬ್ಯಾಂಕ್‌ಗಳು ಹೇಳಿಕೊಂಡಿವೆ. ಅತ್ಯಂತ ಶೀಘ್ರವಾಗಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿ ಸುವತ್ತ ನಿರ್ಧಾರ ಸಹಕಾರಿಯಾಗಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹವಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿಕೊಂಡಿದ್ದಾರೆ. ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಕ್ಷೇತ್ರದಲ್ಲಿ ಯೂ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಹರಿದು ಬಂದಿದೆ ಎಂದು ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚರ್ ತಿಳಿಸಿದ್ದಾರೆ. 20 ಸಾವಿರ ರಿಟರ್ನ್ಸ್ಗಳ ಬಗ್ಗೆ ಸಮಗ್ರ ತನಿಖೆ
ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಆದಾಯ ತೆರಿಗೆ ಇಲಾಖೆ 20,572 ರಿಟರ್ನ್ಸ್ ಸಲ್ಲಿಕೆಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಮುಂದಾಗಿದೆ. ಅವುಗಳಲ್ಲಿ ನೋಟುಗಳ ಅಮಾನ್ಯ ಮೊದಲು ಮತ್ತು ನಂತರ ಅಕ್ರಮ ನಡೆದ ಬಗ್ಗೆ ಸಂಶಯ ಎದ್ದಿರುವುದರಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಕೃತ ಮಾಹಿತಿ ಪ್ರಕಾರ 17.73 ಲಕ್ಷ ಶಂಕಿತ ಪ್ರಕರಣಗಳಲ್ಲಿ 3.68 ಲಕ್ಷ ಕೋಟಿ ರೂ.ಗಳನ್ನು 23.22 ಲಕ್ಷ ಬ್ಯಾಂಕ್ ಖಾತೆಗಳ ಮೂಲಕ ನಡೆಸಲಾಗಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ. 16.92 ಲಕ್ಷ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿ 11.8 ಲಕ್ಷ
ಮಂದಿಯಿಂದ ಆನ್‌ಲೈನ್ ಮೂಲಕ ಉತ್ತರ ಸಿಕ್ಕಿದೆ.