ಬಾಗಲಕೋಟೆ: ಕಳೆದ ಮಾ. 8ರಂದುಮುಖ್ಯಮಂತ್ರಿಗಳು ಘೋಷಿಸಿದ ಬಜೆಟ್‌ನಲ್ಲಿಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಾರೆ ಎಂಬಆಶಾಭಾವನೆಯನ್ನು ಇಡೀ ರಾಜ್ಯದ ಗಾಣಿಗಸಮಾಜ ಹೊಂದಿತ್ತು. ಆದರೆ, ಮುಖ್ಯಮಂತ್ರಿಗಳುನಮ್ಮ ನಿರೀಕ್ಷೆ ಹುಸಿ ಮಾಡಿದ್ದಾರೆ. ಸಪ್ಲಿಮೆಂಟರಿ ಬಜೆಟ್‌ನಲ್ಲಾದರೂ ಸಮಾಜಕ್ಕೆ ನ್ಯಾಯ ಕೊಡಿಸಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದುಅನಿವಾ ರ್ಯವಾಗುತ್ತದೆ ಎಂದು ಅಖೀಲ ಗಾಣಿಗಸಂಘದ ರಾಜ್ಯಾಧ್ಯಕ್ಷ ಗುರುಣ್ಣ ಗೋಡಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಾಣಿಗ ಅಭಿವೃದ್ಧಿ ನಿಗಮಕ್ಕಾಗಿಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎರಡು ಬಾರಿಮನವಿ ಸಲ್ಲಿಸಿದ್ದೇವು. ಇಡೀ ರಾಜ್ಯದ ಗಾಣಿಗ ಸಮಾಜ ಬಾಂಧವರು ಒಟ್ಟಿಗೆ ಬರಲು ಹೇಳಿದ್ದರು. ರಾಜ್ಯದ ಎಲ್ಲ ಭಾಗದ ಗಾಣಿಗ ಸಮಾಜದ ಪ್ರಮುಖರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವು. ಹೀಗಾಗಿ ಪ್ರಸ್ತುತ ಬಜೆಟ್‌ನಲ್ಲಿ ನಿಗಮ ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವಿತ್ತು ಎಂದರು.
ರಾಜ್ಯದಲ್ಲಿ ಗಾಣಿಗ ಸಮಾಜ 65 ಲಕ್ಷ ಜನಸಂಖ್ಯೆಇದೆ. ಗಾಣದಿಂದ ಎಣ್ಣೆ ತೆಗೆಯುವ ವೃತ್ತಿ ಮಾಡುತ್ತಿದ್ದ ನಮ್ಮ ಸಮಾಜ ಬಾಂಧವರು, ಆಧುನಿಕತೆಯಿಂದ ವೃತ್ತಿ ಕಿತ್ತುಕೊಂಡಂತಾಗಿದೆ. ಲಕ್ಷಾಂತರ ಜನರು ಕೃಷಿ ಭೂಮಿ, ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಅತ್ಯಂತ ಹಿಂದುಳಿದಸಮಾಜ ನಮ್ಮದಾಗಿದ್ದು, ಮುಖ್ಯಮಂತ್ರಿಗಳು ಗಾಣಿಗಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ನಮ್ಮಮೂಲ ವೃತ್ತಿಗೆ ಚಾಲನೆ ನೀಡಬೇಕು. ಸಮಾಜದ ಬಡ ಜನರ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದುಒತ್ತಾಯಿಸಿದರು.
ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ಅಶೋಕಲಾಗಲೋಟಿ ಮಾತನಾಡಿ, ನಮ್ಮ ಸಮಾಜ ಬಾಂಧವರ ವೃತ್ತಿ ಈಗ ದೊಡ್ಡ ದೊಡ್ಡ ಉದ್ದಿಮೆಗಳಿಂದಮಾಯವಾಗಿವೆ. ವ್ಯವಸಾಯ ಮಾಡಿಕೊಂಡಿರುವಸಮಾಜ ಬಾಂಧವರು ಆರ್ಥಿಕವಾಗಿಹಿಂದುಳಿದಿದ್ದಾರೆ. ಮುಖ್ಯಮಂತ್ರಿಗಳು ಗಾಣಿಗಅಭಿವೃದ್ಧಿ ನಿಗಮ ಸ್ಥಾಪಿಸಿ, 500 ಕೋಟಿ ಅನುದಾನನೀಡಬೇಕು. ನಮ್ಮ ವೃತ್ತಿ ಪುನಃ ಆರಂಭಿಸಲು ಸಹಕಾರವಾಗಲಿದೆ. ಮುಖ್ಯಮಂತ್ರಿಗಳು ಕೂಡಲೇ ಈಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗಾಣಿಗ ಸಮಾಜದ ಬೀಳಗಿ ತಾಲೂಕು ಅಧ್ಯಕ್ಷ ಪ್ರಕಾಶ ಅಂತರಗೊಂಡ ಮಾತನಾಡಿ, ಈ ಬಜೆಟ್‌ನಲ್ಲಿಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿದೆ ಎಂಬ ಆಶಾ ಭಾವನೆಯಿತ್ತು. ಆದರೆ, ಮುಖ್ಯಮಂತ್ರಿಗಳು ಮುಂದುವರಿದ ಸಮಾಜಗಳಿಗೆ ಆದ್ಯತೆ ನೀಡಿದ್ದಾರೆ. ಹಿಂದುಳಿದ ಗಾಣಿಗ ಸಮಾಜ ಮರೆತಿದ್ದಾರೆ. ಒಕ್ಕಲಿಗ ಸಮಾಜ, ವೀರಶೈವ ನಿಗಮ ಹೀಗೆ ಹಲವು ಮುಂದುವರಿದ ಸಮಾಜಕ್ಕೆ ಅನುದಾನ ನೀಡಲಾಗಿದೆ. ಗಾಣಿಗ ಸಮಾಜ ನಿರ್ಲಕ್ಷ್ಯ ಮಾಡಿದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಗಾಣಿಗ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಗೋಡಿ, ಬಾಗಲಕೋಟೆ ತಾಲೂಕು ಅಧ್ಯಕ್ಷ ಮಂಜು ಕಾಜೂರ, ಹುನಗುಂದ ತಾಲೂಕು ಅಧ್ಯಕ್ಷ ನಿಂಗಪ್ಪ ಅಮರಾವತಿ, ಮಹಿಳಾ ಘಟಕದ ಜಿಲ್ಲಾಅಧ್ಯಕ್ಷೆ ಕವಿತಾ ಏಳೆಮ್ಮಿ, ಬೀಳಗಿ ತಾಲೂಕು ಘಟಕದವಿದ್ಯಾ ಭಾವಿ, ಗಾಣಿಗ ನೌಕರರ ಸಂಘದ ರಾಜ್ಯ ಗೌರವ ಅಧ್ಯಕ್ಷ ಆರ್.ಜಿ. ಪಾಟೀಲ ಉಪಸ್ಥಿತರಿದ್ದರು.