Advertisement
ಈ ಎರಡೂ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸ ಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾಪು ಬಸ್ ನಿಲ್ದಾಣದಲ್ಲಿ ಜನಸಂಕಲ್ಪ ಸಮಾವೇಶ ನಡೆಯಲಿದೆ. ಸಂಜೆ 4ಕ್ಕೆ ಬೈಂದೂರು ತಾಲೂಕಿನ ಮುಳ್ಳಿಕಟ್ಟೆಯಲ್ಲಿ ನಡೆ ಯುವ ಫಲಾನುಭವಿಗಳ ಸಮಾವೇಶ ಹಾಗೂ 1,270 ಕೋ.ರೂ.ಗಳ ವಿವಿಧ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ ಎಂದರು.
Related Articles
Advertisement
ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರ ಶಿವಕುಮಾರ ಅಂಬಲಪಾಡಿ, ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಗುರುಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಅಲ್ಪಸಂಖ್ಯಾಕರ ಮೋರ್ಚಾದ ಅಧ್ಯಕ್ಷ ದಾವುದ್ ಅಬೂಬಕ್ಕರ್, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಉಪಸ್ಥಿತರಿದ್ದರು.
ಚುನಾವಣೆ ಸಮೀಪಿಸುತ್ತಿದ್ದಂತೆ ವಿನಯ ಕುಮಾರ್ ಸೊರಕೆ ವರ್ತನೆ ಬದಲಾಗು ತ್ತದೆ. ಕಾಪು ಕ್ಷೇತ್ರದಲ್ಲಿ ಎಲ್ಲವನ್ನೂ ತಾನೇ ಮಾಡಿದ್ದು ಎನ್ನುವ ತಪ್ಪು ಕಲ್ಪನೆಯಿಂದ ಅವರು ಹೊರಬರಬೇಕು. ಗೋ ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಬಹಿರಂಗ ವಾಗಿ ಮಾತನಾಡುವ ಧೈರ್ಯ ಅವರಿಗಿದೆಯೇ? ಎಸ್‌ಡಿಪಿಐ ಜತೆ ಅವರ ಒಳ ಒಪ್ಪಂದ, ಸಿಎಎ ವಿರೋಧಿಸಿರುವುದು ಎಲ್ಲರಿಗೂ ತಿಳಿದಿದೆ ಎಂದು ಸುರೇಶ್ ಹೇಳಿದರು.
ಕಾಪು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಬೇಡ ಎನ್ನುವ ಕೆಲವರ ಅಭಿಪ್ರಾಯ ನನ್ನ ಗಮನಕ್ಕೂ ಬಂದಿದೆ. ಇದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಆ ಕ್ಷೇತ್ರದಲ್ಲಿ ನಾನು ಕೂಡ ಕೆಲಸ ಮಾಡಿದ್ದು, ಆಕಾಂಕ್ಷಿಯಾಗಿರಬಹುದು. ಅಂತಿಮವಾಗಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳಲಿದೆಯೋ ಅದರಂತೆ ನಾವು ಕಾರ್ಯನಿರ್ವಹಿಸಲಿದ್ದೇವೆ. – ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ