ಬೀದರ: ನಗರದ ಶಹಾಪುರಗೇಟ್ ಬಳಿಯ ಹಳ್ಳದಕೇರಿ ವ್ಯಾಪ್ತಿಯ ಸರ್ವೇ ನಂ.58, 86/1ರಲ್ಲಿ ಸರ್ಕಾರಿ ಜಮೀನು ಇದ್ದು, ಇದರಲ್ಲಿ 2 ಎಕರೆ ಭೂಮಿಯನ್ನು ಸವಿತಾ ಸಮಾಜದ ಜನಾಂಗದವರಿಗಾಗಿ ರುದ್ರಭೂಮಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಬಿಎಸ್‌ಪಿ ಪಕ್ಷದ ನಗರ ಅಧ್ಯಕ್ಷ ದತ್ತಪ್ಪ ಶ್ರೀಮಂಗಲೆ, ಸವಿತಾ (ನಾವ್ಹಿ) ಸಮಾಜ ನಗರ ಅಧ್ಯಕ್ಷ ರಾಜು ಘೋಡಂಪಳ್ಳಿ, ಪ್ರಧಾನ ಕಾರ್ಯದರ್ಶಿ ಮಾಣಿಕ ಚಿನಿಮಿಶ್ರಿ ಅವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ರುದ್ರಭೂಮಿಗಾಗಿ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರುದ್ರಭೂಮಿ ಇಲ್ಲದ ಕಾರಣ ಸವಿತಾ ಸಮಾಜದ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಆದೇಶದಂತೆ ಸವಿತಾ ಸಮಾಜಕ್ಕೆ ರುದ್ರಭೂಮಿಗಾಗಿ 2 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಮಾಜದ ಪ್ರಮುಖರಾದ ಮಾಣಿಕ ವಡ್ಡಿಕರ್, ರಾಜಕುಮಾರ ಘೋಡಂಪಳ್ಳಿ, ಅಂಬಾದಾಸ ಮೋರಗಿಕರ್ ಇತರರಿದ್ದರು.