Advertisement

ನಕಲಿ ಮದ್ಯ ಮಾರಾಟ ತಡೆಗೆ ಆಗ್ರಹ

05:21 PM May 26, 2022 | Team Udayavani |

ಶಹಾಪುರ: ತಾಲೂಕಿನ ಹಲವೆಡೆ ನಕಲಿ ಮದ್ಯ ಮಾರಾಟ ಹಾವಳಿ ಜಾಸ್ತಿಯಾಗಿದ್ದು, ನಕಲಿ ಮದ್ಯ ಮಾರಾಟಗಾರರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

Advertisement

ತಾಲೂಕಿನಾದ್ಯಂತ ಪಾನ್‌ಶಾಪ್‌, ಕಿರಾಣಿ ಅಂಗಡಿ ಸೇರಿದಂತೆ ಸಣ್ಣಪುಟ್ಟ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ನಡುವೆ ನಕಲಿ ಮದ್ಯ ಮಾರಾಟ ನುಸುಳಿದ್ದು, ಇದರಿಂದ ಮದ್ಯ ಸೇವಕರ ಆರೋಗ್ಯ ಹಾಳಾಗುತ್ತಿದ್ದು, ಪ್ರಾಣ ಭಯದ ಆತಂಕ ಎದುರಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಭೀಮು ಶಖಾಪುರ, ಮಲ್ಲಯ್ಯಸ್ವಾಮಿ ಇಟಗಿ, ಮೌನೇಶ ಹಳಿಸಗರ, ವೆಂಕಟೇಶ ಬೋನೇರ, ದೇವು ಭೀ. ಗುಡಿ, ಮಲ್ಲಿಕಾರ್ಜುನ ಕಟ್ಟಿಮನಿ, ಸುಭಾಶ ಹೋತಪೇಟ, ಮಾಳಪ್ಪ ಪೂಜಾರಿ, ಮಲ್ಲನಗೌಡ ರಾಯಚೂರ, ಮಹಾದೇವಮ್ಮ, ಪ್ರದೀಪ ಅಣಬಿ, ಮಲ್ಲರಡ್ಡಿ ವಿಭೂತಿಹಳ್ಳಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next