ಆವರಣದಲ್ಲಿ ಶನಿವಾರ ಮಧ್ಯಾಹ್ನ ಬಾಡೂಟ (ಮಾಂಸದೂಟ)ಮಾಡಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಬಾಡೂಟ ವಿತರಿಸುವಂತೆ ಪ್ರತಿಭಟಿಸಿದರು.
Advertisement
ಪ್ರಗತಿಪರ ಸಂಘಟನೆಗಳ ಮುಖಂಡರು ಯಾವುದೇ ಜಾತಿ, ಭೇದವಿಲ್ಲದೇ ಸಹಪಂಕ್ತಿಯಲ್ಲಿ ಕೂತು ಮುದ್ದೆ, ಕೋಳಿ ಸಾರು, ಕೋಳಿ ಮಾಂಸ, ಅನ್ನ-ಸಾಂಬಾರು ಹಾಗೂ ಮೊಟ್ಟೆಯನ್ನು ಸವಿಯುವ ಮೂಲಕ ಅಂದು ಕುವೆಂಪು ಅವರು ವಿಚಾರ ಕ್ರಾಂತಿಗೆ ಆಹ್ವಾನ ನೀಡಿದರೆ, ಇಂದು ನಾವು ಮಂಡ್ಯದ ಜನ ಆಹಾರ ಕ್ರಾಂತಿಗೆ ಕರೆ ನೀಡುತ್ತಿದ್ದೇವೆ ಎಂಬ ಸಂದೇಶ ರವಾನಿಸಿದರು.