Advertisement

ತೆರಿಗೆ ನೀತಿಯಿಂದ ವಾಣಿಜ್ಯ ವಿದ್ಯಾರ್ಥಿಗಳಿಗೆ ಬೇಡಿಕೆ: ಶೆಟ್ಟಿ

12:04 PM Jul 19, 2017 | Team Udayavani |

ಧಾರವಾಡ: ನೂತನ ಆರ್ಥಿಕ ನೀತಿಯಿಂದ ತೆರಿಗೆ ವಹಿವಾಟಿನಲ್ಲಿ ಗಣನೀಯ ಬದಲಾವಣೆಗಳಾಗಿದ್ದು, ವಾಣಿಜ್ಯ ವಿದ್ಯಾರ್ಥಿಗಳು ಚಾರ್ಟರ್ಡ್‌ ಅಕೌಂಟಂಟ್‌ ಕೋರ್ಸ್‌ ಅಧ್ಯಯನ ಮಾಡಿದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ ಎಂದು ಚಾರ್ಟರ್ಡ್‌ ಅಕೌಂಟಂಟ್‌ ಎಸ್‌.ಬಿ. ಶೆಟ್ಟಿ ಹೇಳಿದರು. 

Advertisement

ಜೆಎಸ್ಸೆಸ್‌ನ ಮಂಜುನಾಥೇಶ್ವರ ಸ್ನಾತಕ ಮತ್ತು  ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಾರ್ಟರ್ಡ್‌ ಅಕೌಂಟಂಟ್‌ ಪರೀಕ್ಷೆಯ ಪೂರ್ವ ತಯಾರಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಾಹಿತಿ ಹಾಗೂ ತರಬೇತಿ ಕೊರತೆಯಿಂದ ವಾಣಿಜ್ಯ ವಿಷಯದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ.

ಇದೇ ಜುಲೈ 1 ರಿಂದ ನೂತನ ಪಠ್ಯಕ್ರಮ ಜಾರಿಗೊಂಡಿದ್ದು, ದ್ವಿತೀಯ ಪಿಯುಸಿ  ಪಾಸಾದ ವಿದ್ಯಾರ್ಥಿಗಳು ಫೌಂಡೇಶನ್‌ನ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ರೀತಿಯ ತರಬೇತಿ ಶಿಬಿರಗಳು  ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದರು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಅಜಿತಪ್ರಸಾದ ಮಾತನಾಡಿ, ಐಟಿ-ಬಿಟಿಗಳಲ್ಲಿ ಕೇವಲ ಎಂಜನೀಯರಿಂಗ್‌  ಪದವಿಧರರಿಗೆ ಮಾತ್ರ ಅವಕಾಶವಿದೆ ಎಂಬುದು ಸತ್ಯವಲ್ಲ. 

ವಾಣಿಜ್ಯ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ. ಯಾವುದೇ ಅಧ್ಯಯನ ಕೈಗೊಂಡರೂ ಆಸಕ್ತಿ ಪ್ರಮುಖ ಪಾತ್ರ  ವಹಿಸುತ್ತದೆ. ಸಿ.ಎ ಪರೀಕ್ಷೆ ಅತಿ ಕಠಿಣವೆಂಬ ಅಭಿಪ್ರಾಯ ಸರಿಯಲ್ಲ. ಸರಿಯಾದ ತರಬೇತಿ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಯಶಸ್ಸು ಗಳಿಸಬಹುದು ಎಂದರು. ವೈಷ್ಣವಿ ಪೂಜಾರ ಪ್ರಾರ್ಥಿಸಿದರು. ಮಹಾವೀರ ಉಪಾಧ್ಯೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಾಂತ ರಾಗಿಕಲ್ಲಾಪುರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next