Advertisement

ಸುಳ್ಳು ಜಾತಿ ಪ್ರಮಾಣ ಪತ್ರ ತಡೆಗೆ ಆಗ್ರಹ

12:45 PM Mar 17, 2022 | Team Udayavani |

ಜೇವರ್ಗಿ: ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಗೊಂಡ ಸುಳ್ಳು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳ ಹಾವಳಿ ತಡೆಗಟ್ಟಲು ಮಾಡಿರುವ ಆದೇಶವನ್ನು ಸರ್ಕಾರ ಕಾನೂನು ಬಾಹಿರವಾಗಿ ಹಿಂದಕ್ಕೆ ಪಡೆದಿದ್ದು, ಕೂಡಲೇ ಈ ಆದೇಶ ರದ್ದುಗೊಳಿಸಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ತಡೆಯಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ಎಸ್ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಪರಿಶಿಷ್ಟ ಪಂಗಡವಲ್ಲದ ಹಿಂದುಳಿದ ವರ್ಗದಲ್ಲಿ ಬರುವ ಜನಾಂಗದವರಿಗೆ ಗೊಂಡ, ರಾಜಗೊಂಡ, ಕಾಡುಕುರುಬ, ಜೇನುಕುರುಬ, ಟೋಕರಿ ಕೋಳಿ, ಡೋರ್‌ ಕೋಳಿ ಹೆಸರಿನಲ್ಲಿ ತಹಶೀಲ್ದಾರರು ಎಸ್‌ಟಿ ಗೊಂಡ ಜಾತಿ ಪ್ರಮಾಣ ಪತ್ರ ನೀಡಿ ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ. ಕಲಬುರಗಿ ಮತ್ತು ಬೀದರ ತಹಶೀಲ್ದಾರರು ಒಬ್ಬ ವ್ಯಕ್ತಿಗೆ ಎರಡು ಜಾತಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರ ಹೊರಡಿಸಿರುವ ಆದೇಶ ಹಿಂದಕ್ಕೆಪಡಿದಿದ್ದರಿಂದ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಜಾಸ್ತಿ ಆಗಲು ಕಾರಣವಾಗುತ್ತದೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆಗೆ ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ನಂತರ ಶಿರಸ್ತೇದಾರ ಟಿಪ್ಪು ಸುಲ್ತಾನ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಸ್ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಈರಘಂಟೆಪ್ಪ ವಡಗೇರಿ, ಸುರೇಶ ಗುಡೂರ, ಚಂದ್ರು ಮಲ್ಲಾಬಾದ, ವೆಂಕಟೇಶ ಶಿವಪುರ, ತಾಯಪ್ಪ ಇಜೇರಿ, ದೇವು ಖಾದ್ಯಾಪುರ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next